ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣ ಬಿಚ್ಚಿಟ್ಟ ಎಸ್ಪಿ

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣ ಬಿಚ್ಚಿಟ್ಟ ಎಸ್ಪಿ

ಭೀಮೇಶ್​​ ಪೂಜಾರ್
| Updated By: ರಮೇಶ್ ಬಿ. ಜವಳಗೇರಾ

Updated on: Jan 22, 2025 | 5:58 PM

ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿ ಕ್ರೂಸರ್​ ಪಲ್ಟಿಯಾಗಿ ಚಾಲಕ ಸೇರಿವ ನಾಲ್ವರು ಮೃತಪಟ್ಟಿದ್ದಾರೆ. ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮಂತ್ರಾಲಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ನರಹರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹಂಪಿಗೆ ಯಾತ್ರೆ ಹೊರಟಿದ್ದರು. ಇದೇ ವೇಳೆ ದುರ್ಘಟನೆ ಸಂಭವಿಸಿದೆ. ಇನ್ನು ಈ ಘಟನೆ ಸಂಬಂಧ ರಾಯಚೂರು ಎಸ್ಪಿ ಪ್ರತಿಕ್ರಿಯಿಸಿದ್ದಾರೆ.

ರಾಯಚೂರು, (ಜನವರಿ 22): ಕ್ರೂಸರ್​ ಭಯಾನಕವಾಗಿ ಪಲ್ಟಿಯಾದ ಪರಿಣಾಮ ಚಾಲಕ ಸೇರಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ರಾಯಚೂರು ಸಿಂಧನೂರು ನಗರದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ. ಕ್ರೂಶರ್ ವಾಹನದ ಚಾಲಕ ಕಂಸಾಲಿ ಶಿವ (20), ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ (22), ಅಭಿಲಾಷ್ (20) ಪ್ರಾಣ ಕಳೆದುಕೊಂಡವರು. ಕ್ರೂಶರ್ ವಾಹನದಲ್ಲಿ ಒಟ್ಟು 14 ಜನರು ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿದ್ದರು. ಸಿಂಧನೂರು ನಗರದ ಹೊರವಲಯದಲ್ಲಿ ಬರುತ್ತಿದ್ದಂತೆ ಕ್ರೂಸರ್ ವೇಗದಲ್ಲಿ ಇದ್ದ ಕಾರಣ ಆಕ್ಸಲ್ ಕಟ್ ಆಗಿ ಭೀಕರವಾಗಿ 3 ಪಲ್ಟಿ ಹೊಡೆದಿದೆ.

ಇನ್ನು ಘಟನೆ ಸಂಬಂಧ ರಾಯಚೂರು ಎಸ್ಪಿ ಎಂ.ಪುಟ್ಟಮಾದಯ್ಯ ಪ್ರತಿಕ್ರಿಯಿಸಿದ್ದು, ಕ್ರೂಸರ್ ವಾಹನ ಎರಡು-ಮೂರು ಪಲ್ಟಿಯಾಗಿ ವಿದ್ಯಾರ್ಥಿಗಳ ಸಾವು ಆಗಿವೆ. ಮಂತ್ರಾಲಯ ‌ಮಠದ ಸಂಸ್ಕೃತ ಪಾಠ ಶಾಲಾ ವಿದ್ಯಾರ್ಥಿಗಳು ಒಟ್ಟು ಆರು ವಾಹನದಲ್ಲಿ ಹಂಪಿ ಕಡೆಗೆ ಹೋಗುತ್ತಿದ್ರು. ಸಿಂಧನೂರಿನ ಹೊರಭಾಗದಲ್ಲಿ ಅಪಘಾತ ನಡೆದಿದೆ. ಕೊನೆಯ ಕ್ರೂಸರ್ ‌ನಲ್ಲಿ 14 ಜನರು ಪ್ರಯಾಣ ಮಾಡುತ್ತಿದ್ರು. ವಾಹನ ಕೂಡ ಹಳೆಯದ್ದು ಆಗಿತ್ತು. ಅಪಘಾತಕ್ಕೆ ಚಾಲಕನ ಅತೀ ವೇಗ ಮತ್ತು ಟೈರ್ ಬಾಸ್ಟ್ ಆಗಿರುವ ಶಂಕೆ ಇದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇಬ್ಬರು ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆ ಸಾವು ಆಗಿದೆ. 9 ಜನರಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ. ಜಯಸಿಂಹ ಎಂಬ ವಿದ್ಯಾರ್ಥಿಗೆ ಗಂಭೀರವಾಗಿ ಗಾಯವಾಗಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿ ಮಾಹಿತಿ ನೀಡಿದರು.