ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದ ಕಲಾವಿದರು ಉಳುವ ಯೋಗಿಯ ನೋಡಲ್ಲಿ ಹಾಡು ಹೇಳಿದರು
ಸಿದ್ದರಾಮಯ್ಯರನ್ನು ನೋಡಲು ಬಂದ ನಿಯೋಗವು ತನ್ನೊಂದಿಗೆ ಕಬ್ಬನ್ನು ಹೊತ್ತು ತಂದಿತ್ತು. ಸಿದ್ದರಾಮಯ್ಯನವರಿಗೆ ಕಬ್ಬೆಂದರೆ ಬಹಳ ಇಷ್ಟ ಅನ್ನೋದು ಪ್ರಾಯಶಃ ಚಲುವರಾಯಸ್ವಾಮಿಗೆ ಗೊತ್ತಿತ್ತು. ನಿಯೋಗದಲ್ಲಿ ದರ್ಶನ್ ಪುಟ್ಟಣ್ಣಯ್ಯ, ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಉದಯ್, ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಮೊದಲಾದವರಿದ್ದರು.
ಬೆಂಗಳೂರು: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದ ಮಂಡ್ಯ ಶಾಸಕರ ನಿಯೋಗವೊಂದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿತು. ಕಾವೇರಿ ಕೊಳ್ಳದ ಪ್ರಾಂತ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭಿಸಲು ನೀಡಿರುವ ಅನುಮೋದನೆ ಮತ್ತು ಮೈಸೂರು ಸಕ್ಕರೆ ಕಾರ್ಖಾನೆ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಿರುವ ಹಿನ್ನೆಲೆಯಲ್ಲಿ ಶಾಸಕರ ನಿಯೋಗವು ಸಿದ್ದರಾಮಯ್ಯರನ್ನು ಭೇಟಿಯಾಯಿತು. ಭೇಟಿಯ ಮತ್ತೊಂದು ವಿಶೇಷತೆ ಎಂದರೆ ನಿಯೋಗದ ಜೊತೆ ಬಂದ ಕಲಾವಿದರ ತಂಡ ಉಳುವ ಯೋಗಿಯ ನೋಡಲ್ಲಿ ಗೀತೆಯನ್ನು ಹಾಡಿದ್ದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಸಿದ್ದರಾಮಯ್ಯ ಮಾತಾಡಲು ಪೋಡಿಯಂಗೆ ಬರುತ್ತಿದ್ದಂತೆಯೇ ಜೋರು ಚಪ್ಪಾಳೆ, ಶಿಳ್ಳೆ
Latest Videos