Bigg Boss 11 Grand Finale Live Updates: ಬಿಗ್ ಬಾಸ್ ಮನೆಯಿಂದ ಭವ್ಯ ಗೌಡ ಔಟ್
Bigg Boss Kannada 11 Grand Finale Live Event Updates: ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆ ಪ್ರಾರಂಭವಾಗಿದ್ದು, ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಒಬ್ಬರು ಗೆದ್ದು, ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ಕುರಿತ ಕ್ಷಣ ಕ್ಷಣದ ಅಪ್ಡೇಟ್ ಟಿವಿ9 ಕನ್ನಡ ಡಿಜಿಟಲ್ನಲ್ಲಿ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಇದು ಸುದೀಪ್ ನಿರೂಪಣೆಯ ಕೊನೆಯ ಸೀಸನ್ ಕೂಡ ಆಗಿದೆ. ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಒಬ್ಬರು ಗೆದ್ದು, ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರೆ. ಇಂದು ಮೂವರು ಎಲಿಮಿನೇಟ್ ಆಗುವ ಸಾಧ್ಯತೆ ಇದ್ದು, ನಾಳೆ ವಿನ್ನರ್ ಘೋಷಣೆ ಆಗಲಿದೆ. ಬಿಗ್ ಬಾಸ್ ಕುರಿತ ಕ್ಷಣ ಕ್ಷಣದ ಅಪ್ಡೇಟ್ ಟಿವಿ9 ಕನ್ನಡ ಡಿಜಿಟಲ್ನಲ್ಲಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
LIVE NEWS & UPDATES
-
ವಿನ್ ಆಗಲಿರುವ ಸ್ಪರ್ಧಿಗೆ ಬರೋಬ್ಬರಿ 5 ಕೋಟಿ ವೋಟ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ವಿನ್ ಆಗಲಿರುವ ಸ್ಪರ್ಧಿಗೆ ಬರೋಬ್ಬರಿ 5 ಕೋಟಿ 23 ಲಕ್ಷ 89 ಸಾವಿರದ 318 ವೋಟ್ಗಳು ಬಂದಿವೆ. ವೀಕ್ಷಕರು ಈ ಶೋಗೆ ಎಷ್ಟು ಪ್ರೀತಿ ನೀಡಿದ್ದಾರೆ ಎಂಬುದನ್ನು ಈ ಸಂಖ್ಯೆಯೇ ಸಾಕ್ಷಿ.
-
ಬಿಗ್ ಬಾಸ್ ಮನೆಯಿಂದ ಭವ್ಯ ಗೌಡ ಔಟ್
ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆಯ ಮೊದಲ ದಿನ ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಭವ್ಯ ಗೌಡ ಔಟ್ ಆಗಿದ್ದಾರೆ. ಭವ್ಯಾಗೆ ಬಂದಿರುವ ಒಟ್ಟು ವೋಟ್ 64,48,853. ನಾಳೆ ವಿನ್ನರ್ ಘೋಷಣೆ ಆಗಲಿದೆ.
-
ಸ್ಟ್ರಾಂಗ್ ಕಂಟೆಸ್ಟೆಂಟ್ ಅವಾರ್ಡ್ ಗೆದ್ದ ರಜತ್
ಹಾರ್ಲಿಕ್ಸ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅವಾರ್ಡ್ ಅನ್ನು ರಜತ್ ಪಡೆದುಕೊಂಡಿದ್ದಾರೆ. ಈ ಮೂಲಕ ಹಾರ್ಲಿಕ್ಸ್ ಕಡೆಯಿಂದ ರಜತ್ ಅವರಿಗೆ ಗಿಫ್ಟ್ ಹ್ಯಾಂಪರ್ ಸಿಕ್ಕಿದೆ.
ಬಿಗ್ ಬಾಸ್ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ ಉಗ್ರಂ ಮಂಜು ತಂದೆ ರಾಮಣ್ಣ
ಉಗ್ರಂ ಮಂಜು ಅಪ್ಪ ರಾಗಿ ರಾಮಣ್ಣ ಅವರು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅಪ್ಪನ ಡ್ಯಾನ್ಸ್ ಕಂಡು ಮಂಜು ಭಾವುಕರಾಗಿದ್ದಾರೆ.
ಮನೆಯೊಳಗೆ ಸಖತ್ ಸ್ಟೆಪ್ ಹಾಕಿದ ಫೈನಲಿಸ್ಟ್
ಬಿಗ್ ಬಾಸ್ ಕನ್ನಡ ಸೀಸನ್ 11 ಟಾಪ್ 6 ಫೈನಲಿಸ್ಟ್ಗಳಾಗಿ ಹೊರಹೊಮ್ಮಿದ ಭವ್ಯ ಗೌಡ, ತ್ರಿವಿಕ್ರಮ್, ರಜತ್, ಹನುಮಂತ, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ದೊಡ್ಮನೆಯೊಳಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
View this post on Instagram
‘ಬಾಯ್ಸ್ Vs ಗರ್ಲ್ಸ್’ಗೆ ಆಯ್ಕೆಯಾದ ರಜತ್, ಹನುಮಂತ ಹಾಗೂ ಭವ್ಯಗೌಡ
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಮುಗಿದ ಬಂತರ ‘ಕಲರ್ಸ್ ಕನ್ನಡ’ದಲ್ಲಿ ‘ಬಾಯ್ಸ್ Vs ಗರ್ಲ್ಸ್’ ಕಾರ್ಯಕ್ರಮ ಪ್ರಸಾರ ಆಗಲಿದೆ. ಇದಕ್ಕೆ ರಜತ್, ಹನುಮಂತ ಹಾಗೂ ಭವ್ಯಗೌಡ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸ್ಪರ್ಧಿಗಳ ಜೊತೆ ಮಾತು
ಕಿಚ್ಚ ಸುದೀಪ್ ಅವರು ಮಾಜಿ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸುತ್ತಾ ಇದ್ದಾರೆ. ಅವರು ಎಲ್ಲಾ ಸ್ಪರ್ಧಿಗಳ ಭವಿಷ್ಯದ ಯೋಜನೆ ಕುರಿತು ಮಾತನಾಡಿದ್ದಾರೆ.
ಕಿಚ್ಚನ ಗ್ರ್ಯಾಂಡ್ ಎಂಟ್ರಿ
ಕಿಚ್ಚ ಸುದೀಪ್ ಅವರು ಗ್ರ್ಯಾಂಡ್ ಆಗಿ ದೊಡ್ಮನೆಗೆ ಎಂಟ್ರಿ ಕೊಟ್ಟರು. ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಹಳೆಯ ಡೈಲಾಗ್ಗಳನ್ನು ಹೇಳಲಾಯಿತು. ಆ ಮೂಲಕ ಸ್ವಾಗತ ಕೊಡಲಾಯಿತು.
ಇನ್ನು ನಾಲ್ಕು ಗಂಟೆಗಳಲ್ಲಿ ಬಿಗ್ ಬಾಸ್
ಇನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಬಿಗ್ ಬಾಸ್ ಆರಂಭ ಆಗಲಿದೆ. ಇದಕ್ಕಾಗಿ ಎಲ್ಲರೂ ಕಾದಿದ್ದಾರೆ.
View this post on Instagram
Published On - Jan 25,2025 2:22 PM