ಬಾಗಲಕೋಟೆ ಹೂಲಗೇರಿ ಪಿಡಿಓ ಹಿರೇಮಠ ಮನೆಗಳ ಮೇಲೆ ಲೋಕಾಯುಕ್ತ ದಾಳಿ, ದಾಖಲೆ ಪರಿಶೀಲನೆ
ಒಬ್ಬ ಪಿಡಿಓ ಇಂಥ ಮನೆ ಕಟ್ಟಿಸುತ್ತಾನೆಂದರೆ ಅವನು ಕೆಲಸ ಮಾಡಿದ ಗ್ರಾಮ ಪಂಚಾಯತ್ ಗಳು ಎಷ್ಟು ಉದ್ಧರವಾಗಿರಬಹುದು ಅನ್ನೋದನ್ನು ಊಹಿಸಬಹುದು. ಸಾಮಾನ್ಯವಾಗಿ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಅಮಾಯಕರು, ಅವರನ್ನು ಯಾಮಾರಿಸುವುದು ಪಿಡಿಓಗಳಿಗೆ ಕಷ್ಟವೇನೂ ಅಲ್ಲ. ಹಿರೇಮಠರ ನರಗುಂದದಲ್ಲಿರುವ ಮನೆ ಹೇಗಿದೆಯೋ?
ಬಾಗಲಕೋಟೆ: ಎಲ್ಲರೂ ಅಲ್ಲ ಆದರೆ ಕೆಲವು ಪಿಡಿಓಗಳು ಕುಬೇರರು, ಅಂಥ ಕುಬೇರರಲ್ಲಿ ಒಬ್ಬರು ಜಿಲ್ಲೆಯ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮ ಪಂಚಾಯಿತಿಯ ಎಸ್ ಪಿ ಹಿರೇಮಠ ಸಾಹೇಬರು. ಇಂಥ ಪಿಡಿಓಗಳನ್ನು ಪಂಚಾಯತ್ ಡೆವಲ್ಮೆಂಟ್ ಆಫೀಸರ್ ಅಂತ ಹೇಳೋದಕ್ಕಿಂತ ಪರ್ಸೊನಲ್ ಡೆವಲ್ಮೆಂಟ್ ಆಫೀಸರ್ ಅನ್ನೋದೇ ವಾಸಿ. ಇವತ್ತು ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆ ವಿದ್ಯಾಗಿರಿಯಲ್ಲಿರುವ ಶ್ರೀಯುತರ ಮನೆ ಮೇಲೆ ದಾಳಿ ನಡೆಸಿ ಅವರ ಆಸ್ತಿಪಾಸ್ತಿಗಳ ವಿವರವನ್ನು ಪರಿಶೀಲಿಸುತ್ತಿದ್ದಾರೆ. ಹಿರೇಮಠರ ನರಗುಂದ ನಿವಾಸದ ಮೇಲೂ ದಾಳಿ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರ್: ಲೋಕಾಯುಕ್ತ ದಾಳಿ ವೇಳೆ ಬಯಲು
Latest Videos