ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಯಾರು ಸ್ಪರ್ಧಿಸಬೇಕೆಂದು ದೆಹಲಿಯಲ್ಲಿ ನಿರ್ಣಯಿಸುತ್ತೇವೆ: ಬಸನಗೌಡ ಯತ್ನಾಳ್
ವಿಜಯೇಂದ್ರ ವಿರುದ್ಧ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರದಿರೋದು ಸತ್ಯ, ಅದಕ್ಕೆ ಯಾರೆಲ್ಲ ಸಹಿ ಮಾಡಿದ್ದಾರೆ ಅನ್ನೋದನ್ನು ಬಹಿರಂಗಪಡಿಸಲ್ಲ, ಸಹಿ ಮಾಡಿದವರು ಪಕ್ಷದ ಚೌಕಟ್ಟಿನೊಳಗೆ ಇದ್ದುಕೊಂಡು ಅದನ್ನು ಮಾಡಿದ್ದಾರೆ, ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದಿರುವ ಅವರು ತಮ್ಮ ಹೆಸರುಗಳು ಗೌಪ್ಯವಾಗಿರುವುದನ್ನು ಬಯಸಿದ್ದಾರೆ ಎಂದ ಯತ್ನಾಳ್ ಹೇಳಿದರು.
ಬೆಂಗಳೂರು: ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಮಾತಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ನೇರವಾದ ಉತ್ತರ ನೀಡಲಿಲ್ಲ. ಸಂಸತ್ತಿನ ಅಧಿವೇಶನ ಜಾರಿಯಲ್ಲಿರುವಾಗಲೇ ತಾವೆಲ್ಲ ದೆಹಲಿಗೆ ಹೋಗಿ ರಾಜ್ಯದ ಬಿಜೆಪಿ ಸಂಸದರನ್ನು ಭೇಟಿಯಾಗಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂಬ ಒಂದು ನಿರ್ಣಯವನ್ನು ತೆಗೆದುಕೊಂಡು ಅದನ್ನು ವರಿಷ್ಠರ ಹಮನಕ್ಕೆ ತರುತ್ತೇವೆ ಅಂತ ಹೇಳಿದ ಯತ್ನಾಳ್, ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಯಾರು ಸ್ಪರ್ಧಿಸಬೇಕೆಂದು ಅಲ್ಲೇ ನಿರ್ಣಯಿಸಲಾಗುವುದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರ್ ಬಂಗಾರಪ್ಪ ಮನೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಣ ನಾಯಕರ ಸಭೆ