Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಮಾತ್ರ ಅಲ್ಲ ಇನ್ನೂ ಐದಾರು ಜನ ತ್ರಿವಿಕ್ರಮನೇ ಗೆಲ್ಲಲಿ ಅಂದುಕೊಂಡಿದ್ದು ಸತ್ಯ: ಭವ್ಯಾ ಗೌಡ

ನಾನು ಮಾತ್ರ ಅಲ್ಲ ಇನ್ನೂ ಐದಾರು ಜನ ತ್ರಿವಿಕ್ರಮನೇ ಗೆಲ್ಲಲಿ ಅಂದುಕೊಂಡಿದ್ದು ಸತ್ಯ: ಭವ್ಯಾ ಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 31, 2025 | 5:42 PM

ತ್ರಿವಿಕ್ರಮ್ ಬಗ್ಗೆ ತಾನು ಪೊಸ್ಸೆಸ್ಸಿವ್ ಅಗಿದ್ದೆ ಅನ್ನೋದು ಕಪೋಕಲ್ಪಿತ, ಅವತ್ತು ತಾನು ಮತ್ತೊಂದು ಮಾಧ್ಯಮದ ಜೊತೆ ಮಾತಾಡಲು ಹೋಗೋದಿತ್ತು, ತ್ರಿವಿಕ್ರಮ್ ಹ್ಯಾಂಡ್ ಶೇಕ್ ಮಾಡಿ ಹೋಗೋಣ ಅಂದ್ರೆ ಅವರು ಬೇರೆ ಯಾರೋ ಹುಡುಗಿಯ ಜೊತೆ ಕೈಕುಲುಕಿದ್ದರು, ಧಾವಂತದಲ್ಲಿದ್ದ ಕಾರಣ ಬಲವಂತವಾಗಿ ಹುಡುಗಿಯ ಕೈ ಬಿಡಿಸಿ ಹ್ಯಾಂಡ್ ಶೇಕ್ ಮಾಡಿದ್ದೆ ಎಂದು ಭವ್ಯಾ ಗೌಡ ಹೇಳುತ್ತಾರೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ನಡೆಯುತ್ತಿದ್ದಾಗ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ನಡುವಿನ ಗೆಳೆತನ, ಅನ್ಯೋನ್ಯತೆ ಬಹಳ ಸುದ್ದಿಯಲ್ಲಿತ್ತು, ಅದರೆ ಇಬ್ಬರೂ ಹೇಳುವ ಪ್ರಕಾರ ಅವರ ನಡುವೆ ಇದ್ದಿದ್ದು ಅಪ್ಪಟ ಗೆಳೆತನವೇ ಹೊರತು ಬೇರೇನೂ ಅಲ್ಲ. ಟಿವಿ9ನೊಂದಿಗೆ ಮಾತಾಡಿರುವ ಭವ್ಯಾ ಅದನ್ನು ಮತ್ತೊಮ್ಮೆ ದೃಢೀಕರಿಸಿದ್ದಾರೆ. ಹುನುಮಂತ ಗೆದ್ದು ತ್ರಿವಿಕ್ರಮ್ ರನ್ನರ್ ಅಪ್ ಆದಾಗ ಅತ್ತಿದ್ದು ಯಾಕೆ ಅಂತ ಕೇಳಿದರೆ ಭವ್ಯಾ ನಗುತ್ತಾರೆ. ಅವರು ತುಂಬಾ ಸ್ಟ್ರಗಲ್ ಮಾಡುತ್ತಿದ್ದ ವಿಷಯ ಗೊತ್ತಿತ್ತು, ಅದನ್ನು ತನ್ನ ಬಳಿ ಹೇಳಿಕೊಂಡಿದ್ದರು, ಬಿಗ್ ಬಾಸ್ ಗೆದ್ದರೆ ಅವರಿಗೆ ಅನುಕೂಲ ಆಗುತ್ತದೆ, ಅವಕಾಶಗಳು ಸಿಗುತ್ತವೆ ಎಂಬ ಭಾವನೆ ಮನೆ ಮಾಡಿತ್ತು, ತಾನು ಮತ್ತು ಇನ್ನೂ ಐದಾರು ಜನ ತ್ರಿವಿಕ್ರಮ್ ಗೆಲ್ಲಲಿ ಅಂದುಕೊಳ್ಳುತ್ತಿದ್ದೆವು, ಆದರೆ ಜನ ಹನುಮಂತನನ್ನ ಗೆಲ್ಲಿಸಿದರು, ಜನರ ನಿರ್ಧಾರ ಹೇಗೆ ಪ್ರಶ್ನಿಸಲಾದೀತು ಎಂದು ಭವ್ಯಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಭವ್ಯಾ ಗೌಡ ಅವರ ಸಹೋದರಿಯರು ಹೇಗಿದ್ದಾರೆ ನೋಡಿ; ಒಬ್ಬರಿಗಿಂತ ಒಬ್ಬರು ಕ್ಯೂಟ್

Published on: Jan 31, 2025 05:23 PM