ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಲ್ಲವೆಂದು ಮನೆಬಿಟ್ಟು ಹೋದ ಬಾಲಕ; ವಿಶೇಷವಾಗಿ ಬಾಲಕನ ಹುಟ್ಟುಹಬ್ಬ ಆಚರಿಸಿದ ಪೊಲೀಸರು

ಪೊಲೀಸರು ತಮ್ಮ ಕರ್ತವ್ಯದ ಜೊತೆಗೆ ದಯೆ, ಕಾಳಜಿ, ಮಾನವೀಯ ಕಾರ್ಯಗಳಿಂದಲೂ ಆಗಾಗ್ಗೆ ಜನಮನ ಗೆಲ್ಲುತ್ತಿರುತ್ತಾರೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಪೊಲೀಸರು ಬಾಲಕನೊಬ್ಬನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಮನೆಯವರು ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಲ್ಲವೆಂದು ಕೋಪದಲ್ಲಿ ಮನೆ ಬಿಟ್ಟು ಹೋದ ಬಾಲಕನನ್ನು ಕರೆಸಿ ಕೇಕ್‌ ಕಟ್‌ ಮಾಡಿಸಿ, ಅವನ ಇಷ್ಟದಂತೆಯೇ ಪೊಲೀಸರು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಲ್ಲವೆಂದು ಮನೆಬಿಟ್ಟು ಹೋದ ಬಾಲಕ; ವಿಶೇಷವಾಗಿ ಬಾಲಕನ ಹುಟ್ಟುಹಬ್ಬ ಆಚರಿಸಿದ ಪೊಲೀಸರು
ವೈರಲ್​ ಫೋಟೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 31, 2025 | 4:52 PM

ಮಕ್ಕಳು ಸಣ್ಣಪುಟ್ಟ ವಿಷಯಗಳಿಗೆ ಹಟ ಮಾಡುವುದು, ಕೋಪ ಮಾಡಿಕೊಳ್ಳುವುದು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲ ತುಂಟ ಮಕ್ಕಳು ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದು ಕೂಡಾ ಇದೆ. ಅದೇ ರೀತಿ ಇಲ್ಲೊಬ್ಬ 10 ವರ್ಷ ವಯಸ್ಸಿನ ಬಾಲಕ ಮನೆಯವರು ತನ್ನ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಲ್ಲವೆಂದು ಕೋಪದಲ್ಲಿ ಮನೆಬಿಟ್ಟು ಹೋಗಿದ್ದಾನೆ. ಮನೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಹಲವು ಹೊತ್ತಿನ ಹುಡುಕಾಟದ ಬಳಿಕ ಸಿಕ್ಕ ಆ ಬಾಲಕನಿಗೆ ಗದರದೇ, ಪೊಲೀಸರು ಆತನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಹೌದು ಕೇಕ್‌ ಕಟ್‌ ಮಾಡಿಸಿ ಬಾಲಕನ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ್ದು, ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಈ ಘಟನೆ ನಾಗ್ಪರದ ವಾಠೋಡ ಎಂಬಲ್ಲಿ ನಡೆದಿದ್ದು, ಮನೆಯವರು ತನ್ನ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಲ್ಲವೆಂದು 10 ವರ್ಷದ ಬಾಲಕನೊಬ್ಬ ಮನೆಬಿಟ್ಟು ಹೋಗಿದ್ದಾನೆ. ನಂತರ ಪೊಲೀಸರೇ ಆತನ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜನವರಿ 30 ರಂದು ಸಂಚಿತ್‌ ಅರವಿಂದ್‌ ಎಂಬ ಹುಡುಗನ ಹುಟ್ಟುಹಬ್ಬವಿತ್ತು. ಆದರೆ ಕಾರಣಾಂತರಗಳಿಂದ ಆತನ ಮನೆಯವರು ಬರ್ತ್‌ಡೇ ಸೆಲೆಬ್ರೇಟ್‌ ಮಾಡಿಲ್ಲ. ಇದರಿಂದ ಬೇಸರಗೊಂಡ ಸಂಚಿತ್‌ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆ ಬಿಟ್ಟು ಹೋಗಿದ್ದಾನೆ. ಅಕ್ಕಪಕ್ಕ ಹುಡುಕಿದರೂ ಸಂಚಿತ್‌ ಎಲ್ಲೂ ಕಾಣಿಸಿದೇ ಇದ್ದ ಕಾರಣ ಆತನ ಪೋಷಕರು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ತಕ್ಷಣ ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸಲಾರಂಭಿಸಿದರು. ಹೀಗೆ ಸಂಜೆಯ ವೇಳೆ ಗಸ್ತು ತಿರುಗುತ್ತಿದ್ದ ಕಾನ್‌ಸ್ಟೇಬಲ್‌ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಸಂಚಿತ್‌ ಇರುವುದು ಪತ್ತೆ ಹಚ್ಚಿ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಾಲಕನೊಂದಿಗೆ ಮಾತನಾಡಿ, ಆತನನ್ನು ಮನೆಗೆ ಕರೆದುಕೊಂಡು ಹೋಗಿ ಕೇಕ್‌ ಕಟ್‌ ಮಾಡಿಸಿ ಆತನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಹೀಗೆ ಬಾಲಕನ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸುವ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಫೆಬ್ರುವರಿ 21ಕ್ಕೆ ತೆರೆಕಾಣಲಿದೆ ಶ್ರೇಯಸ್-ಪ್ರಿಯಾ ಅಭಿನಯದ ವಿಷ್ಣು ಪ್ರಿಯ
ಫೆಬ್ರುವರಿ 21ಕ್ಕೆ ತೆರೆಕಾಣಲಿದೆ ಶ್ರೇಯಸ್-ಪ್ರಿಯಾ ಅಭಿನಯದ ವಿಷ್ಣು ಪ್ರಿಯ
ಸತೀಶ್​ಗೆ ಸಿಎಂ ಆಗುವ ಆಕಾಂಕ್ಷೆ ಬಿಟ್ಟು ಬೇರೆ ಆಸೆ ಏನಾದರೂ ಉಳಿದಿದೆಯಾ?
ಸತೀಶ್​ಗೆ ಸಿಎಂ ಆಗುವ ಆಕಾಂಕ್ಷೆ ಬಿಟ್ಟು ಬೇರೆ ಆಸೆ ಏನಾದರೂ ಉಳಿದಿದೆಯಾ?
ಶತಕದ ಬಳಿಕ ಭಾವುಕರಾಗಿ ಮಾತನಾಡಿದ ರೋಹಿತ್
ಶತಕದ ಬಳಿಕ ಭಾವುಕರಾಗಿ ಮಾತನಾಡಿದ ರೋಹಿತ್
ಏರ್​ಶೋನಲ್ಲಿ ಮಿಂಚಿದ ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್
ಏರ್​ಶೋನಲ್ಲಿ ಮಿಂಚಿದ ತುಮಕೂರಿನಲ್ಲಿ ತಯಾರಾದ ಹೆಲಿಕಾಪ್ಟರ್
ವರಿಷ್ಠರನ್ನು ಭೇಟಿಯಾಗುವ ಅವಕಾಶ ಯತ್ನಾಳ್ ಟೀಮಿಗೆ ಈ ಬಾರಿಯೂ ಇಲ್ಲ!
ವರಿಷ್ಠರನ್ನು ಭೇಟಿಯಾಗುವ ಅವಕಾಶ ಯತ್ನಾಳ್ ಟೀಮಿಗೆ ಈ ಬಾರಿಯೂ ಇಲ್ಲ!
ಏರೋ ಶೋ-2025: ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಮತ್ತೆ ಹುಳ ಪತ್ತೆ
ಏರೋ ಶೋ-2025: ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಊಟದಲ್ಲಿ ಮತ್ತೆ ಹುಳ ಪತ್ತೆ
ರಾಜ್ಯ ಬಿಜೆಪಿ ಬಣ ಬಡಿದಾಟ; ಸೋಮಣ್ಣ ಎರಡೂ ತಂಡಗಳ ಜೊತೆ ಮಾತಾಡುವ ಸಾಧ್ಯತೆ
ರಾಜ್ಯ ಬಿಜೆಪಿ ಬಣ ಬಡಿದಾಟ; ಸೋಮಣ್ಣ ಎರಡೂ ತಂಡಗಳ ಜೊತೆ ಮಾತಾಡುವ ಸಾಧ್ಯತೆ
ಸುಧಾಕರ್ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗಲ್ಲ: ಮುನಿರತ್ನ
ಸುಧಾಕರ್ ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಹೋಗಲ್ಲ: ಮುನಿರತ್ನ
ಹಾವೇರಿ: ಡಾಬಾ ಬಂತು ನೋಡು ಎಂದ ಕೂಡಲೇ ಸತ್ತವ ಬದುಕಿದ!
ಹಾವೇರಿ: ಡಾಬಾ ಬಂತು ನೋಡು ಎಂದ ಕೂಡಲೇ ಸತ್ತವ ಬದುಕಿದ!
ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್
ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್