Viral: ಉಚಿತ ತಿಂಡಿ, ನೀರಿನಿಂದ ವೈ-ಫೈವರೆಗೆ ಯಾವ ವಿಮಾನಕ್ಕಿಂತಲೂ ಕಮ್ಮಿಯಿಲ್ಲ ಪ್ರಯಾಣಿಕರಿಗೆ ಈ ಕ್ಯಾಬ್‌ನಲ್ಲಿರುವ ಸೌಲಭ್ಯ
ಸಾಮಾನ್ಯವಾಗಿ ವಿಮಾನಗಳಲ್ಲಿ ಊಟ, ತಿಂಡಿಯಿಂದ ಹಿಡಿದು ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದ್ರೆ ಇಲ್ಲೊಬ್ರು ಕ್ಯಾಬ್ ಡ್ರೈವರ್ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ವಿಮಾನಗಳಿಗಿಂತಲೂ ಉತ್ತಮವಾದ ಕ್ಯಾಬ್ ಸೇವೆಯನ್ನು ತಮ್ಮ ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೆ. ಹೌದು ಇವರು ಉಚಿತ ತಿಂಡಿ, ನೀರಿನಿಂದ ಹಿಡಿದು ವೈ-ಫೈ ವರೆಗೆ ತಮ್ಮ ಕ್ಯಾಬ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿಕೊಡುತ್ತಿದ್ದಾರೆ. ಈ ಕುರಿತ ಫೋಟೊವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ನಗರ ಪ್ರದೇಶಗಳಲ್ಲಿ ಹೆಚ್ಚಿನವರು ಅನುಕೂಲಕರ ಪ್ರಯಾಣವೆಂದು ಓಲಾ, ಉಬರ್‌ನಂತಹ ಕ್ಯಾಬ್‌ಗಳಲ್ಲೇ ಹೆಚ್ಚಾಗಿ ಓಡಾಡುತ್ತಿರುತ್ತಾರೆ. ಆದ್ರೆ ಹೆಚ್ಚಾಗಿ ಕ್ಯಾಬ್ ಡ್ರೈವರ್ಸ್‌ಗಳು ಸಮಯಕ್ಕೆ ಸರಿಯಾಗಿ ಬರೊಲ್ಲ, ಹೆಚ್ಚು ಹಣ ಪೀಕುತ್ತಾರೆ, ಗ್ರಾಹಕರೊಂದಿಗೆ ಸರಿಯಾಗಿ ವರ್ತನೆಯನ್ನು ತೋರುತ್ತಿಲ್ಲ ಎನ್ನೋ ದೂರುಗಳೇ ಕೇಳಿ ಬರುತ್ತಿರುತ್ತವೆ. ಈ ಎಲ್ಲಾ ಸಂಗತಿಗಳ ನಡುವೆ ಇಲ್ಲೊಬ್ರು ಕ್ಯಾಬ್ ಡ್ರೈವರ್ ಕಾರ್ಯ ಎಲ್ಲರ ಮನ ಗೆದ್ದಿದೆ. ಹೌದು ಇವರು ಪ್ರಯಾಣಿಕರಿಗೆ ವಿಮಾನಗಳಿಗಿಂತಲೂ ಉತ್ತಮವಾದ ಕ್ಯಾಬ್ ಸೇವೆಯನ್ನು ಒದಗಿಸುತ್ತಿದ್ದು, ತಮ್ಮ ಕ್ಯಾಬ್‌ನಲ್ಲಿ ಪ್ರಯಾಣಿಸುವಂತಹ ಪ್ರಯಾಣಿಕರಿಗೆ ಉಚಿತ ತಿಂಡಿ, ನೀರಿನಿಂದ ಹಿಡಿದು ವೈ-ಫೈ ವರೆಗೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿಕೊಡುತ್ತಿದ್ದಾರೆ. ಈ ಕುರಿತ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ದೆಹಲಿ ಮೂಲದ ಉಬರ್ ಚಾಲಕ ತಮ್ಮ ಕ್ಯಾಬ್‌ನಲ್ಲಿ ಪ್ರಯಾಣಿಕರಿಗೆ ಐಷಾರಾಮಿ ಸೇವೆಯನ್ನು ಒದಗಿಸುತ್ತಿದ್ದಾರೆ. ಕ್ಯಾಬ್ ಡ್ರೈವರ್ ಅಬ್ದುಲ್ ಖದೀರ್ ವಿಮಾನಗಳಿಗಿಂತಲೂ ಉತ್ತಮವಾದ ಕ್ಯಾಬ್ ಸೇವೆಯನ್ನು ತಮ್ಮ ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೆ. ಇವರು ಪ್ರಯಾಣಿಕರಿಗಾಗಿ ಕ್ಯಾಬ್‌ನಲ್ಲಿ ಉಚಿತ ತಿಂಡಿಗಳು, ನೀರಿನ ಬಾಟಲ್, ತಂಪು ಪಾನೀಯ, ಕ್ಯಾಂಡಿ, ಚೂಯಿಂಗ್‌ಗಮ್, ಸುಗಂಧ ದ್ರವ್ಯ, ಪ್ರಥಮ ಚಿಕಿತ್ಸಾ ಕಿಟ್, ಹ್ಯಾಂಡ್ ಸ್ಯಾನಿಟೈಸರ್, ಔಷಧಗಳು, ಇಯರ್‌ಬಡ್, ಟಿಷ್ಯೂ ಪೇಪರ್, ನ್ಯೂಸ್ ಪೇಪರ್, ನಿಯತಕಾಲಿಕೆ, ವೈಫೈ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಹ ಒದಗಿಸಿಕೊಡುತ್ತಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Found cab facilities better than flights… byu/Fancy-Past-6831 indelhi
ಈ ಕುರಿತ ಪೋಸ್ಟ್ ಒಂದನ್ನು r/delhi ಹೆಸರಿನ ರೆಡ್ಡಿಟ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಕ್ಯಾಬ್ ಒಂದರಲ್ಲಿ ನೀರು, ಜ್ಯೂಸ್, ತಿಂಡಿಗಳಿಂದ ಹಿಡಿದು ಔಷಧಗಳವರೆಗೆ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯಗಳಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇಂಗ್ಲಿಷ್ ಬಾರದ ಮನೆ ಕೆಲಸದಾಕೆಯ ಜೊತೆ ಬೆಂಗಳೂರಿನ ಟೆಕ್ಕಿ ವಾಟ್ಸಾಪ್‌ನಲ್ಲಿ ಹೇಗೆ ಸಂಭಾಷಣೆ ನಡೆಸುತ್ತಾರೆ ನೋಡಿ…
ಮೂರು ದಿನಗಳ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಚಾಲಕನಿಗೆ ದೇವರು ಒಳ್ಳೆಯದು ಮಾಡಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ವಿಮಾನದಲ್ಲಿಯೂ ಇಷ್ಟು ಸೌಲಭ್ಯ ಇಲ್ಲ ಎಂದು ಕಾಣುತ್ತೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಕೂಡಾ ಈ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದೆ, ಆ ಚಾಲಕ ತುಂಬಾ ಒಳ್ಳೆಯ ವ್ಯಕ್ತಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಚಾಲಕನ ಈ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ