Viral: ಇಂಗ್ಲಿಷ್ ಬಾರದ ಮನೆ ಕೆಲಸದಾಕೆಯ ಜೊತೆ ಬೆಂಗಳೂರಿನ ಟೆಕ್ಕಿ ವಾಟ್ಸಾಪ್‌ನಲ್ಲಿ ಹೇಗೆ ಸಂಭಾಷಣೆ ನಡೆಸುತ್ತಾರೆ ನೋಡಿ…
ಕೆಲವೊಂದು ಇಂಟರೆಸ್ಟಿಂಗ್ ಪೋಸ್ಟ್, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಪೋಸ್ಟ್ ಒಂದು ವೈರಲ್ ಆಗಿದ್ದು, ಟೆಕ್ಕಿಯೊಬ್ರು ಇಂಗ್ಲಿಷ್ ಮಾತನಾಡಲು ಮತ್ತು ಓದಲು ಬಾರದ ಕೆಲಸದಾಕೆಯ ಜೊತೆ ಹೇಗೆ ವಾಟ್ಸಾಪ್‌ನಲ್ಲಿ ಸಂಭಾಷಣೆ ನಡೆಸುತ್ತೇನೆ ಎಂಬ ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಾತಿಲ್ಲ ಬರೀ ಎಮೋಜಿಯ ಮೂಲಕ ಅವರು ಕೆಲಸದ ಬಗ್ಗೆ ಸಂಭಾಷಣೆಯನ್ನು ನಡೆಸುತ್ತಿದ್ದು, ಈ ಎಮೋಜಿ ಜೀವನನ್ನು ಮತ್ತಷ್ಟು ಸುಲಭಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ತಮ್ಮ ಜೀವನದಲ್ಲಿ ನಡೆಯುವಂತಹ ಕೆಲವೊಂದು ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ಟೆಕ್ಕಿ ಮನೆ ಕೆಲಸದಾಕೆಯ ಜೊತೆ ಸಂಭಾಷಣೆ ನಡೆಸಲು ಎಮೋಜಿ ಹೇಗೆ ಸಹಾಯಕ್ಕೆ ಬಂತು ಎಂಬುದನ್ನು ಹಂಚಿಕೊಂಡಿದ್ದಾರೆ. ಮನೆಕೆಲಸದಾಕೆಗೆ ಇಂಗ್ಲಿಷ್ ಓದಲು ಮತ್ತು ಬರೆಯಲು ಗೊತ್ತಿಲ್ಲ, ಆಕೆಗೆ ನಾನು ಮನೆಯಲ್ಲಿದ್ದೇನೆಯೇ ಅಥವಾ ಆಫೀಸಿನಲ್ಲಿದ್ದೇನೆಯೇ ಎಂಬುದನ್ನು ವಾಟ್ಸಾಪ್‌ನಲ್ಲಿ ನಾನು ಎಮೋಜಿ ಮೂಲಕವೇ ತಿಳಿಸುತ್ತಿರುತ್ತೇನೆ. ಹೀಗೆ ಈ ಎಮೋಜಿ ಭಾಷಾ ಅಡೆತಡೆಯನ್ನು ನಿವಾರಿಸಿ, ಸಂಭಾಷಣೆಯನ್ನು ಅರ್ಥೈಸಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಸೀನಿಯರ್ ಡಿಸೈನರ್ ಸರ್ಗಮ್ ಪ್ರಕಾಶ್ ಇಂಗ್ಲಿಷ್ ಬಾರದ ಮನೆಕೆಲಸದಾಕೆಯ ಜೊತೆ ಎಮೋಜಿ ಮೂಲಕ ಹೇಗೆ ವಾಟ್ಸಾಪ್‌ನಲ್ಲಿ ಸಂಭಾಷಣೆ ನಡೆಸುತ್ತೇನೆ ಎಂಬ ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಮನೆಯಲ್ಲಿದ್ದೇನೆಯೋ ಅಥವಾ ಆಫೀಸಿನಲ್ಲಿದ್ದೇನೆಯೋ ಎಂಬುದನ್ನು ಕಾರ್ ಮತ್ತು ಮನೆಯ ಚಿತ್ರದ ಎಮೋಜಿಯ ಮೂಲಕವೇ ತಿಳಿಸುತ್ತಾರಂತೆ.
ಈ ಕುರಿತ ಪೋಸ್ಟ್ ಒಂದನ್ನು ಸರ್ಗಮ್ ಪ್ರಕಾಶ್ (Sargam Prakash) ಲಿಂಕ್ಡ್‌ಇನ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಕೆಲವೊಮ್ಮೆ ನಮ್ಮ ಮನೆಕೆಲಸದಾಕೆಗೆ ನಾನು ಮನೆಯಲ್ಲಿದ್ದೇನೆಯೇ ಅಥವಾ ಕಚೇರಿಯಲ್ಲಿರುತ್ತೇನೆಯೇ ಎಂಬುದು ಗೊತ್ತಿರುವುದಿಲ್ಲ. ಆಕೆ ವಾಟ್ಸಾಪ್ ಬಳಕೆ ಮಾಡುತ್ತಾಳೆ. ಆದರೆ ಆಕೆಗೆ ಇಂಗ್ಲಿಷ್ ಮಾತನಾಡಲು ಮತ್ತು ಓದಲು ಅಥವಾ ಬರೆಯಲು ಬರುವುದಿಲ್ಲ. ಹಾಗಾಗಿ ನಾನು ಎಲ್ಲಿದ್ದೇನೆ ಎಂಬುದನ್ನು ಕೇಳಲು ಆಕೆಯ ಮಕ್ಕಳು ಕಲಿಸಿದ ಹಾಯ್ (Hi) ಎಂಬ ಮೆಸೇಜ್ ಕಳುಹಿಸುತ್ತಾಳೆ.
ಆದರೆ ನಾನು ವಿಶೇಷವಾಗಿ ಆಫೀಸ್ ಮೀಟಿಂಗ್‌ನಲ್ಲಿದ್ದಾಗ ಆಕೆಗೆ ವಾಯ್ಸ್ ಮೆಸೇಜ್ ಕಳುಹಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಸರಳ ಪರಿಹಾರವನ್ನು ಕಂಡುಕೊಂಡಿದ್ದೇನೆ. ನಾನು ಎಲ್ಲಿದ್ದೇನೆ ಎಂಬುದನ್ನು ತಿಳಿಯಲು ಇಮೋಜಿಗಳನ್ನು ಕಳುಹಿಸುತ್ತೇನೆ. ಮನೆಯ ಚಿತ್ರವಿರುವ ಎಮೋಜಿ ಕಳುಹಿಸಿದರೆ ನಾನು ಮನೆಯಲ್ಲಿದ್ದೇನೆ ಎಂದು, ಕಾರ್ ಇಮೋಜಿಯನ್ನು ಕಳುಹಿಸಿದರೆ ನಾನು ಕೆಲಸದಲ್ಲಿದ್ದೇನೆ ಎಂದು ಅರ್ಥ.
ಇದನ್ನೂ ಓದಿ: ವಂಚನೆಗೆ ಒಳಗಾಗಲು ಒಂದನ್ನು ಒತ್ತಿ; ನಕಲಿ ಐವಿಆರ್ ಕರೆ ಸ್ವೀಕರಿಸಿ ಬರೋಬ್ಬರಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ
ಈ ಪರಿಹಾರ ನಿಜಕ್ಕೂ ಸರಳವಾಗಿದೆ ಮತ್ತು ಪರಿಣಾಮಕಾರಿಯಾಗಿದೆ. ನಾನು ಮೋಜಿಗಾಗಿ ಈ ಎಮೋಜಿಗಳನ್ನು ಬಳಸುತ್ತಿಲ್ಲ. ನಮ್ಮ ನಡುವಿನ ಗಂಭೀರ ಸಂವಹನಕ್ಕಾಗಿ ವಾಟ್ಸಾಪ್‌ನಲ್ಲಿ ಎಮೋಜಿಗಳನ್ನು ಬಳಸುತ್ತಿದ್ದೇವೆ. ಇದು ನಮ್ಮಿಬ್ಬರ ಜೀವನವನ್ನು ಸುಲಭಗೊಳಿಸಿದ ಸಾಧನವಾಗಿದೆ” ಎಂದು ಅವರಿಬ್ಬರ ನಡುವಿನ ವಾಟ್ಸಾಪ್ ಸಂಭಾಷಣೆಯ ಫೋಟೋ ಹಂಚಿಕೊಂಡು ಸುದೀರ್ಘ ಶೀರ್ಷಿಕೆ ಬರೆದುಕೊಂಡಿದ್ದಾರೆ.
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕೆಲವೊಮ್ಮೆ ಇಂತಹ ಸರಳ ಪರಿಹಾರಗಳೇ ಸಮಸ್ಯೆಗಳನ್ನು ಪರಿಹರಿಸುತ್ತವೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದಂತೂ ತುಂಬಾನೇ ಕೂಲ್ ಐಡಿಯಾʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ