Viral: ವಂಚನೆಗೆ ಒಳಗಾಗಲು ಒಂದನ್ನು ಒತ್ತಿ; ನಕಲಿ ಐವಿಆರ್ ಕರೆ ಸ್ವೀಕರಿಸಿ ಬರೋಬ್ಬರಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಮೊಬೈಲ್‌ನಲ್ಲಿ ಬಂದಂತಹ ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡಿ, ನಕಲಿ ಕರೆಗಳನ್ನು ಸ್ವೀಕರಿಸಿ ಎಷ್ಟೋ ಜನ ತಮ್ಮ ಬ್ಯಾಂಕ್ ಖಾತೆಯಲ್ಲಿ ಕೂಡಿಟ್ಟ ಹಣವನ್ನೇ ಕಳೆದುಕೊಂಡಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಿದರು ವಂಚನೆಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದೀಗ ಇಲ್ಲೊಬ್ರು ಮಹಿಳೆ ಕೂಡಾ ವಂಚನೆಗೆ ಒಳಗಾಗಿ ಬರೋಬ್ಬರಿ 2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಹೌದು ಅವರು ನಕಲಿ ಐವಿಆರ್ ಕರೆ ಸ್ವೀಕರಿಸಿ 1 ನಂಬರ್ ಒತ್ತಿದ್ದಷ್ಟೇ, ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ. ಹಣ ಮಂಗಮಾಯವಾಗಿದೆ.

ಇಂದಿನ ಈ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಂಚನೆಗಳ ಪ್ರಕರಣಗಳು ಕೂಡಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಕ್ಯಾಮರ್ಸ್ ಹಲವು ರೀತಿಯಲ್ಲಿ ಜನರಿಗೆ ವಂಚನೆ ಮಾಡುವ ಮೂಲಕ ಹಣವನ್ನು ಪೀಕುತಿದ್ದಾರೆ. ಡಿಜಿಟಲ್ ಅರೆಸ್ಟ್ ಅನ್ನೋ ವಂಚನೆ ಒಳಗಾಗಿ ಒಂದಷ್ಟು ಜನ ಭಯದಿಂದ ಸ್ಕ್ಯಾಮರ್ಸ್‌ಗಳಿಗೆ ಹಣ ವರ್ಗಾವಣೆ ಮಾಡಿದ್ರೆ, ಇನ್ನೊಂದಷ್ಟು ಜನ ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡಿ, ನಕಲಿ ಕರೆಗಳನ್ನು ಸ್ವೀಕರಿಸಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಕೂಡಿಟ್ಟ ಹಣವನ್ನೇ ಕಳೆದುಕೊಂಡಿದ್ದಾರೆ. ಪ್ರತಿನಿತ್ಯ ಇಂತಹ ಒಂದಲ್ಲಾ ಒಂದು ಪ್ರಕರಣಗಳು ಕೇಳಿ ಬರುತ್ತಲೇ ಇದೆ. ಇದೀಗ ಇಲ್ಲೊಬ್ರು ಮಹಿಳೆ ಕೂಡಾ ವಂಚನೆಗೆ ಒಳಗಾಗಿ ಬರೋಬ್ಬರಿ 2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಹೌದು ಅವರು ನಕಲಿ ಐವಿಆರ್ ಕರೆ ಸ್ವೀಕರಿಸಿ 1 ನಂಬರ್ ಒತ್ತಿದ್ದಷ್ಟೇ, ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ. ಹಣ ಮಂಗಮಾಯವಾಗಿದೆ.
ಬೆಂಗಳೂರಿನ ಮಹಿಳೆಯೊಬ್ಬರು ನಕಲಿ ಐವಿಆರ್ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಕರೆ ಸ್ವೀಕರಿಸಿ 2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ನಿಂದ ಬಂದಂತಹ ಕರೆಯಿರಬಹುದೆಂದು ಫೋನ್ ರಿಸೀವ್ ಮಾಡಿದ ಮಹಿಳೆ, ಕರೆಯ ಮೂಲಕ ಬಂದಂತಹ ಸೂಚನೆಗಳನ್ನು ಅನುಸರಿಸಿ ಕೊನೆಗೆ ನಂಬರ್ 1 ನ್ನು ಒತ್ತಿ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಜನವರಿ 20 ರಂದು ಮಧ್ಯಾಹ್ನ ಸುಮಾರು 3.55 ಕ್ಕೆ ಮಹಿಳೆ ಈ ನಕಲಿ ಕರೆಯನ್ನು ಸ್ವೀಕರಿಸಿದ್ದು, ಕರೆಯಲ್ಲಿ ನಿಮ್ಮ ಖಾತೆಯಿಂದ ಇನ್ನೊಂದು ಖಾತೆಗೆ ಎರಡು ಲಕ್ಷ ರೂ, ಹಣವನ್ನು ವರ್ಗಾಯಿಸಲಾಗುತ್ತಿದೆ, ಈ ವಹಿವಾಟನ್ನು ಮುಂದುವರೆಸಲು 3 ನ್ನು ಒತ್ತಿ, ಇದು ಬೇಡ ಅಂತಿದ್ದರೆ 1 ನ್ನು ಒತ್ತಿ ಎಂದು ಸೂಚನೆಯನ್ನು ನೀಡಲಾಗಿದೆ. ಇದು ಬ್ಯಾಂಕ್‌ನವರದ್ದೇ ಕರೆಯೆಂದು ನಂಬಿದ ಮಹಿಳೆ ಫೋನ್ ಕರೆಯಲ್ಲಿ ನಂಬರ್ 1 ನ್ನು ಒತ್ತಿ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ಮಂಗಮಾಯವಾಗಿರುವುದನ್ನು ಕಂಡ ಮಹಿಳೆಗೆ ತಾನು ವಂಚನೆಗೆ ಒಳಗಾಗಿದ್ದೇನೆ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ತರರರಾ…. ತುತ್ತೂರಿ ಊದುತ್ತಲೇ ಸಖತ್ ಫೇಮಸ್ ಆದ ಈ ಹುಡುಗಿ ಯಾರ್ ಗೊತ್ತಾ?
ತಕ್ಷಣ ಬ್ಯಾಂಕ್‌ಗೆ ಬಂದ ಮಹಿಳೆ ಅಧಿಕಾರಿಗಳ ಬಳಿ ದೂರನ್ನು ನೀಡಿದ್ದು, ನಂತರ ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಐಪಿಸಿ ಸೆಕ್ಷನ್ 318 ರ ಅಡಿಯಲ್ಲಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ