ಕಾಲೇಜಿನ ತರಗತಿಯಲ್ಲಿ ವಿದ್ಯಾರ್ಥಿಯನ್ನು ಮದುವೆಯಾದ ಪ್ರಾಧ್ಯಾಪಕಿ
ಪಶ್ಚಿಮ ಬಂಗಾಳದ ಕಾಲೇಜಿನಲ್ಲಿ ಪ್ರಾಧ್ಯಾಪಕಿ ವಿದ್ಯಾರ್ಥಿಯನ್ನು ಮದುವೆಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಅವರು ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕರನ್ನು ರಜೆಯ ಮೇಲೆ ಕಳುಹಿಸಿರುವ ಆಡಳಿತ ಇದು ಪ್ರಾಜೆಕ್ಟ್ನಲ್ಲಿ ಭಾಗವಾಗಿತ್ತು ಎಂದು ಹೇಳಿದ್ದಾರೆ.ಬಂಗಾಳದ ಹರಿಂಗಟಾದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿಈ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಕಾಲೇಜಿನ ತರಗತಿಯಲ್ಲೇ ಮಹಿಳಾ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಯನ್ನು ಮದುವೆಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ಅವರು ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕರನ್ನು ರಜೆಯ ಮೇಲೆ ಕಳುಹಿಸಿರುವ ಆಡಳಿತ ಇದು ಪ್ರಾಜೆಕ್ಟ್ನಲ್ಲಿ ಭಾಗವಾಗಿತ್ತು ಎಂದು ಹೇಳಿದ್ದಾರೆ.
ಬಂಗಾಳದ ಹರಿಂಗಟಾದಲ್ಲಿರುವ ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿಈ ಘಟನೆ ನಡೆದಿದೆ. ಅಪ್ಲೈಡ್ ಸೈಕಾಲಜಿ ವಿಭಾಗದ ಅಧ್ಯಾಪಕರೊಬ್ಬರು ವಧುವಿನಂತೆ ಬಟ್ಟೆ ಧರಿಸಿ , ಹೂಮಾಲೆಯನ್ನು ಪರಸ್ಪರ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಆತ ಆಕೆಯ ಹಣೆಗೆ ಸಿಂಧೂರ ಇಟ್ಟಿದ್ದಾನೆ.
ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಜೊತೆಗೆ ಮೂವರು ಸಾಕ್ಷಿಗಳು ಸಹಿ ಮಾಡಿದ ಕೈಬರಹದ ಪ್ರಮಾಣಪತ್ರವೂ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಇದು ಕಾಲೇಜಿನ ಪ್ರಾಜೆಕ್ಟ್ನ ಒಂದು ಭಾಗ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ. ವೀಡಿಯೊ ಪ್ರಸಾರವಾದ ನಂತರ, ವಿಶ್ವವಿದ್ಯಾಲಯದ ಅಧಿಕಾರಿಗಳು ವಿಚಾರಣೆಯನ್ನು ಪ್ರಾರಂಭಿಸಿದರು ಮತ್ತು ಪ್ರಾಧ್ಯಾಪಕರನ್ನು ರಜೆಯ ಮೇಲೆ ಕಳುಹಿಸಿದ್ದಾರೆ.
A lady Professor in MAKAUT is ‘getting married’ to her young student in the office. pic.twitter.com/coXaVGH7s7
— Abir Ghoshal (@abirghoshal) January 29, 2025
ಫ್ರೆಷರ್ ಪಾರ್ಟಿ ವೇಳೆ ಈ ಘಟನೆ ನಡೆದಿದೆ, ಇದು ಪ್ರಾಜೆಕ್ಟ್ನ ಒಂದು ಭಾಗವಾಗಿತ್ತು, ನಮ್ಮ ಕಾಲೇಜಿನ ಪ್ರತಿಷ್ಠೆಗೆ ಧಕ್ಕೆ ತರಲು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಅದಕ್ಕೆ ಕಾರಣರಾದವರ ವಿರುದ್ಧ ಪೊಲೀಸ್ ದೂರು ದಾಖಲಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ನಾವು ಫ್ರೆಷರ್ ಪಾರ್ಟಿಗಾಗಿ ಯೋಜಿಸಿದ್ದ ನಾಟಕ. ಇದನ್ನು ನನ್ನ ವಿರುದ್ಧದ ಪಿತೂರಿಯ ಭಾಗವಾಗಿ ಉದ್ದೇಶಪೂರ್ವಕವಾಗಿ ವೈರಲ್ ಮಾಡಲಾಗಿದೆ.
ಮತ್ತಷ್ಟು ಓದಿ: ಕುಡುಕ ಗಂಡಂದಿರ ಕಾಟ ತಾಳಲಾರದೆ ಮನೆ ಬಿಟ್ಟು ಪರಸ್ಪರ ಮದುವೆಯಾದ ಇಬ್ಬರು ಮಹಿಳೆಯರು!
ನನ್ನ ಮಾನಹಾನಿ ಮಾಡಲು ಪ್ರಯತ್ನಿಸಿದವರ ವಿರುದ್ಧ ನಾನು ಪೊಲೀಸ್ ದೂರು ನೀಡುತ್ತೇನೆ ಎಂದು ಪ್ರಾಧ್ಯಾಪಕಿ ಕೂಡ ಹೇಳಿದ್ದಾರೆ. ಯಾವುದೇ ಅನುಚಿತತೆ, ಅನೈತಿಕ ನಡವಳಿಕೆ ಇಲ್ಲ ಮತ್ತು ಇದು ಸಂಪೂರ್ಣವಾಗಿ ಕಾಲೇಜಿಗೆ ಸಂಬಂಧ ಪಟ್ಟ ನಾಟಕದ ಭಾಗವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:52 am, Thu, 30 January 25