ಕುಡುಕ ಗಂಡಂದಿರ ಕಾಟ ತಾಳಲಾರದೆ ಮನೆ ಬಿಟ್ಟು ಪರಸ್ಪರ ಮದುವೆಯಾದ ಇಬ್ಬರು ಮಹಿಳೆಯರು!
ಮದ್ಯವ್ಯಸನಿಗಳಾಗಿದ್ದ ಗಂಡಂದಿರು ಮತ್ತು ಕೌಟುಂಬಿಕ ಹಿಂಸಾಚಾರದಿಂದ ಬೇಸತ್ತ ಇಬ್ಬರು ಮಹಿಳೆಯರು ತಾವೇ ಪರಸ್ಪರ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ದೌರ್ಜನ್ಯಕ್ಕೊಳಗಾದ ಗಂಡಂದಿರಿಂದ ಬೇಸತ್ತು, ಗೋರಖ್‌ಪುರದಲ್ಲಿ ಇಬ್ಬರು ನೊಂದ ಮಹಿಳೆಯರು ಮದುವೆಯಾಗಿದ್ದಾರೆ. ತನ್ನ ಕುಡುಕ ಪತಿಯರು ಪ್ರತಿದಿನ ತಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರು. ಆ ಕಾಟ ತಾಳಲಾರದೆ ತವರಿಗೆ ಹೋಗಿದ್ದೆವು ಎಂದು ಅವರು ಹೇಳಿಕೊಂಡಿದ್ದಾರೆ.
ಗೋರಖ್ಪುರ: ಉತ್ತರ ಪ್ರದೇಶದ ಗೋರಖ್‌ಪುರದ ಇಬ್ಬರು ಮಹಿಳೆಯರು ತಮ್ಮ ಕುಡುಕ ಗಂಡಂದಿರ ದೌರ್ಜನ್ಯದಿಂದ ಬೇಸತ್ತು, ಮನೆ ಬಿಟ್ಟು ಬಂದಿದ್ದರು. ಇದೀಗ ಶಿವನ ದೇವಾಲಯದಲ್ಲಿ ಪರಸ್ಪರ ವಿವಾಹವಾಗಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದು, 6 ವರ್ಷಗಳ ಕಾಲ ಸ್ನೇಹಿತರಾಗಿದ್ದರು. ಗಂಡಂದಿರ ಹಿಂಸೆಯ ವಿಚಾರವನ್ನು ಹೇಳಿಕೊಳ್ಳುತ್ತಿದ್ದ ಅವರು ತಾವೇ ಇಬ್ಬರು ಯಾಕೆ ಮದುವೆಯಾಗಬಾರದು ಎಂದು ಚರ್ಚಿಸಿ, ಈ ನಿರ್ಧಾರಕ್ಕೆ ಬಂದಿದ್ದಾರೆ.
ತಮ್ಮ ಸಂಗಾತಿಗಳಿಂದ ಬೇಸತ್ತ ಉತ್ತರ ಪ್ರದೇಶದ ಗೋರಖ್‌ಪುರದ ಇಬ್ಬರು ಮಹಿಳೆಯರು ತಮ್ಮ ಮನೆಗಳನ್ನು ತೊರೆದು ಪರಸ್ಪರ ವಿವಾಹವಾಗಿರುವುದು ಇದೀಗ ಚರ್ಚೆಯ ಸಂಗತಿಯಾಗಿದೆ. ಕವಿತಾ ಮತ್ತು ಗುಂಜಾ ಅಲಿಯಾಸ್ ಬಬ್ಲು ಗುರುವಾರ ಸಂಜೆ ದಿಯೋರಿಯಾದ ಚೋಟಿ ಕಾಶಿ ಎಂದು ಪ್ರಸಿದ್ಧವಾದ ಶಿವನ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಅವರು ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಸಂಪರ್ಕ ಹೋದಮಿದ್ದು, ಬೇಗನೆ ಸ್ನೇಹಿತರಾದರು. ಮದುವೆಯಾಗಲು ನಿರ್ಧರಿಸುವ ಮೊದಲು ಅವರು 6 ವರ್ಷಗಳ ಕಾಲ ಸಂಪರ್ಕದಲ್ಲಿದ್ದರು. ಇಬ್ಬರೂ ಮಹಿಳೆಯರು ತಮ್ಮ ಗಂಡಂದಿರಿಂದ ಕೌಟುಂಬಿಕ ಹಿಂಸೆಯನ್ನು ಅನುಭವಿಸಿದ್ದರು.
ಇದನ್ನೂ ಓದಿ: ಪರೀಕ್ಷೆಯಲ್ಲಿ ನಕಲು ಮಾಡಿದ್ದಲ್ಲದೆ ಪ್ರಶ್ನಿಸಿದ ಶಿಕ್ಷಕನ ಕೆನ್ನೆಗೆ ಬಾರಿಸಿದ ವಿದ್ಯಾರ್ಥಿ; ಆಘಾತಕಾರಿ ವಿಡಿಯೋ ವೈರಲ್
ಒಬ್ಬ ಮಹಿಳೆಗೆ ಆಕೆಯ ಪತಿ ಕುಡಿದು ಬಂದು ಪ್ರತಿದಿನ ಹಲ್ಲೆ ನಡೆಸುತ್ತಿದ್ದ. ಆಕೆಗೆ ನಾಲ್ಕು ಮಕ್ಕಳಿದ್ದಾರೆ. ಇನ್ನೊಬ್ಬ ಮಹಿಳೆ ತನ್ನ ಪತಿ ಕೂಡ ಅತಿಯಾಗಿ ಮದ್ಯಪಾನ ಮಾಡುತ್ತಿದ್ದ , ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ