Viral: ಅಯ್ಯಯ್ಯೋ ನೀನಿನ್ನೂ 8ನೇ ಸೆಮ್‌ನಲ್ಲಿದ್ದಿಯಾ ಎಂದು ಭಾವಿಸಿದೆ; ಗಣಿತ ಶಿಕ್ಷಕಿಯೊಂದಿಗಿನ ಫನ್ನಿ ಸಂಭಾಷಣೆಯನ್ನು ಹಂಚಿಕೊಂಡ ಬೆಂಗಳೂರಿನ ಟೆಕ್ಕಿ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ಪೋಸ್ಟ್, ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಅಂತಹದ್ದೊಂದು ಪೋಸ್ಟ್ ಇದೀಗ ವೈರಲ್ ಆಗಿದೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಅವರ ಮಾಜಿ ಗಣಿತ ಶಿಕ್ಷಕಿಯೊಬ್ಬರು ಹಲವು ವರ್ಷಗಳ ಬಳಿಕ ಮೆಸೇಜ್ ಮಾಡಿದ್ದು, ಈ ಅನಿರೀಕ್ಷಿತ ಸಂಭಾಷಣೆಯ ಸ್ಕ್ರೀನ್‌ಶಾನ್ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೆಲವರು ತಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ತಮಾಷೆಯ, ನೋವಿನ ಕಥೆಗಳನ್ನು ಸೋಷಿಯಲ್ ಮೀಡಿಯಾಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ಟೆಕ್ಕಿ ಗಣಿತ ತಮ್ಮ ಶಿಕ್ಷಕಿಯೊಂದಿಗಿನ ಅನಿರೀಕ್ಷಿತ ಸಂಭಾಷಣೆಯ ಸ್ಕ್ರೀನ್‌ಶಾನ್ ಒಂದನ್ನು ಶೇರ್ ಮಾಡಿದ್ದಾರೆ. ಆ ಶಿಕ್ಷಕಿ ಈತನಿನ್ನೂ ಕಾಲೇಜಿನಲ್ಲಿಯೇ ಇದ್ದಾನೆಂದು ಭಾವಿಸಿ ಹಲವು ವರ್ಷಗಳ ಬಳಿಕ “ನೀಲ್ ನೀನು ಕಾಲೇಜಿನಲ್ಲಿದ್ದೀಯಾ?” ಎಂದು ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಿದ್ದು, ಈ ಫನ್ನಿ ಚಾಟ್ ಸ್ಕ್ರೀನ್‌ಶಾಟ್ ಫೋಟೊ ಇದೀಗ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವಂತಹ ನೀಲ್ ಅಗರ್ವಾಲ್ ಎಂಬವರಿಗೆ ಅವರ ಗಣಿತ ಶಿಕ್ಷಕಿ ಆ ಶಿಕ್ಷಕಿ ಈತನಿನ್ನೂ ಕಾಲೇಜಿನಲ್ಲಿಯೇ ಇದ್ದಾನೆಂದು ಭಾವಿಸಿ ಹಲವು ವರ್ಷಗಳ ಬಳಿಕ “ನೀಲ್ ನೀನು ಕಾಲೇಜಿನಲ್ಲಿದ್ದೀಯಾ?” ಎಂದು ವಾಟ್ಸಾಪ್‌ನಲ್ಲಿ ಮೆಸೇಜ್ ಮಾಡಿದ್ದಾರೆ. 2018 ನೀಲ್ ಮೇಡಮ್ ನೀವು ಕಾಲೇಜಿಗೆ ಇಂದು ಬರುತ್ತೀರಾ ನಮ್ಮ ಫೈಲ್ ಸಬ್ಮಿಟ್ ಮಾಡೋದಿದೆ ಎಂದು ಮೆಸೇಜ್ ಮಾಡಿದ್ರು. ಇದಾದ 7 ವರ್ಷದ ಬಳಿಕ ಆ ಶಿಕ್ಷಕಿ ಇದ್ದಕ್ಕಿದ್ದಂತೆ ನೀಲ್ ನೀನು ಕಾಲೇಜಿನಲ್ಲಿದ್ದೀಯಾ? ಎಂದು ಮೆಸೇಜ್ ಮಾಡಿದ್ದಾರೆ. ಗೊಂದಲಕ್ಕೊಳಗಾದ ನೀಲ್ ಏನಕ್ಕೆ ಮೇಡಂ, ನಾನು 2021 ರಲ್ಲಿಯೇ ತೇರ್ಗಡೆ ಹೊಂದಿದ್ದೇನೆ ಎಂದು ಉತ್ತರಿಸುತ್ತಾರೆ. ಅಯ್ಯಯ್ಯೋ ಸರಿ, ನೀನು 8 ನೇ ಸೆಮ್‌ನಲ್ಲಿ ಇದ್ದೀಯಾ ಎಂದು ನಾನು ಭಾವಿಸಿದೆ ಎಂದು ಹೇಳ್ತಾರೆ. ಶಿಕ್ಷಕಿಯೊಂದಿಗೆ ಈ ಉಲ್ಲಾಸದಾಯಕ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಫೋಟೋವನ್ನು ನೀಲ್ (Neil Ararwal) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
they still think im a failure 😭 pic.twitter.com/TAAMY3Zm9n
— Neil Agarwal (@regalstreak) January 24, 2025
ಇದನ್ನೂ ಓದಿ: ಇದು ವಿದ್ಯಾದೇಗುಲವೋ ಅಥವಾ ವ್ಯಾಪಾರ ಕೇಂದ್ರವೋ, ಬೆಂಗಳೂರಿನಲ್ಲಿ 3ನೇ ತರಗತಿಗೆ 2.1 ಲಕ್ಷ ಶುಲ್ಕವಂತೆ
ಜನವರಿ 24 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದಂತೂ ತುಂಬಾ ತಮಾಷೆಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಯ್ಯಯ್ಯೋ 7 ವರ್ಷದ ಬಳಿಕವೂ 8 ನೇ ಸೆಮ್ ಅಂದ್ರೆ, ನಿಜಕ್ಕೂ ಇದನ್ನು ನೋಡಿ ನಿಜಕ್ಕೂ ನಗು ಬಂತುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ