ಲಡಾಖ್ ರೈಡ್ ವೇಳೆ ಹುಡುಗಿಯರ ತಂಡಕ್ಕೆ ಬೆಂಬಲ ಮತ್ತು ಕಾಳಜಿ ತೋರಿ ಉದಾರತೆ ಮೆರೆದ ಸೈನಿಕರು; ಹೃದಯಸ್ಪರ್ಶಿ ವಿಡಿಯೋ ವೈರಲ್
ಹಲವರಿಗೆ ಲಡಾಖ್‌ಗೆ ರೈಡ್ ಹೋಗಬೇಕೆಂಬುದು ಬಹು ದೊಡ್ಡ ಕನಸಾಗಿರುತ್ತದೆ. ಹೆಚ್ಚಾಗಿ ಹುಡುಗರೇ ಲಡಾಖ್‌ಗೆ ಬೈಕ್ ರೈಡ್ ಹೋಗುತ್ತಿರುತ್ತಾರೆ. ಆದ್ರೆ ಇಲ್ಲೊಂದು ಸಾಹಸವನ್ನು ಇಷ್ಟ ಪಡುವ ಮಹಿಳೆಯರ ತಂಡವೇ ಲಡಾಖ್‌ಗೆ ಬೈಕ್ ರೈಡ್ ಹೋಗಿದ್ದು, ಆ ಸಂದರ್ಭದಲ್ಲಿ ಅವರ ತಂಡಕ್ಕೆ ಅಲ್ಲಿದ್ದ ಸೈನಿಕರು ಬೆಂಬಲ ನೀಡಿ, ಸುರಕ್ಷಿತವಾಗಿ ಹೋಗುವಂತೆ ಧೈರ್ಯ ತುಂಬಿದ್ದಾರೆ. ಈ ಕುರಿತ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದ್ದು, ಸೈನಿಕರ ಉದಾರತೆಗೆ ನೆಟ್ಟಿಗರು ಮನಸೋತಿದ್ದಾರೆ.
ಹಗಲು ರಾತ್ರಿಯೆನ್ನದೆ ಗಡಿ ಕಾಯುವ ಸೈನಿಕರು ಯಾವುದೇ ಸ್ಥಳದಲ್ಲಿ ಯಾರಿಗೇ ಸಮಸ್ಯೆ ಅಥವಾ ತೊಂದರೆಯಾದರೂ ಅಲ್ಲಿಗೆ ಧಾವಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಯೋಧರ ದಯೆ, ಮಾನವೀಯ ಗುಣಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಬೆಂಗಳೂರಿನಿಂದ ಲಡಾಖ್‌ಗೆ ಬೈಕ್ ರೈಡಿಂಗ್ ಹೋಗಿದ್ದ ಸಂದರ್ಭದಲ್ಲಿ ಮಹಿಳಾ ಬೈಕ್ ರೈಡರ್ಸ್‌ಗಳ ತಂಡಕ್ಕೆ ಅಲ್ಲಿದ್ದ ಸೈನಿಕರು ಬೆಂಬಲ ನೀಡಿ, ಸುರಕ್ಷಿತವಾಗಿ ಹೋಗುವಂತೆ ಧೈರ್ಯ ತುಂಬಿದ್ದಾರೆ. ಸೈನಿಕರ ಉದಾರತೆಗೆ ನೆಟ್ಟಿಗರು ಮನಸೋತಿದ್ದಾರೆ.
ರೈಡರ್‌ಗಳಾದಂತಹ ದಕ್ಷಿಣ ಸಲೀಂ, ವಿನಯ, ಸರಣ್ಯ ರಾಮಚಂದ್ರನ್ ಬೆಂಗಳೂರಿನಿಂದ ಲಡಾಖ್‌ಗೆ ಬೈಕ್ ರೈಡ್ ಹೋದ ಸಂದರ್ಭದಲ್ಲಿ ಅವರಿಗೆ ಒಂದಷ್ಟು ಸೈನಿಕರು ಬೆಂಬಲ ನೀಡಿ ಸುರಕ್ಷಿತವಾಗಿ ಹೋಗುವಂತೆ ಧೈರ್ಯ ತುಂಬಿದ್ದಾರೆ. ಇಂತಹ ಕಡೆ ನೆಟ್‌ವರ್ಕ್ ಸಿಗುತ್ತೆ, ಅಲ್ಲಿ ನೀವು ಬೈಕ್ ನಿಲ್ಲಿಸಿ ನಿಮ್ಮ ಕುಟುಂಬಸ್ಥರೊಂದಿಗೆ ಮಾತನಾಡಬಹುದು, ಇಲ್ಲಿ ಯಾವುದೇ ಸಮಸ್ಯೆಗಳಿಲ್ಲ ನಿಮಗೆ ಎಂದು ಕಾಳಜಿಯ ಮಾತುಗಳನ್ನಾಡಿದ್ದಾರೆ.
Crf_on_wheels ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಬೆಂಗಳೂರಿನಿಂದ ಲಡಾಖ್‌ಗೆ ಒಂದು ಮರೆಯಲಾಗದ ಬೈಕ್ ರೈಡ್; ದಾರಿಯುದ್ದಕ್ಕೂ ಭಾರತೀಯ ಸೇನೆಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಜೊತೆಗೆ ಅವರೊಂದಿಗೆ ಊಟ ಮಾಡುವ ಅವಕಾಶವೂ ಸಿಕ್ಕಿತು. ಅಷ್ಟೇ ಅಲ್ಲ ನಮ್ಗೆ ಬೆಂಬಲ ಮತ್ತು ಕಾಳಜಿಯನ್ನು ಸಹ ತೋರಿದರು. ಸೈನಿಕರ ದಯೆ ಮತ್ತು ಉದಾರತೆ ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಈ ರೈಡ್‌ನ್ನು ಇನ್ನಷ್ಟು ವಿಶೇಷಗೊಳಿಸಿದ್ದಕ್ಕಾಗಿ ಭಾರತೀಯ ಸೇನೆಗೆ ಧನ್ಯವಾದಗಳು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವಯರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯೋಧರೊಬ್ಬರು ಇಲ್ಲಿ ಯಾವುದೇ ನೆಟ್‌ವರ್ಕ್ ಇಲ್ಲ, ಎತ್ತರಕ್ಕೆ ಹೋದಂತೆ ಅಲ್ಲಿ ನಿಮಗೆ ನೆಟ್‌ವರ್ಕ್ ಸಿಗುತ್ತೆ ಆಗ ನೀವು ನಿಮ್ಮ ಮನೆಯವರಿಗೆ ಕಾಲ್ ಮಾಡಿ ಮಾತಾಡಿ. ಮತ್ತು ಯಾವುದೇ ಸಮಸ್ಯೆಯಿಲ್ಲ ಎಂದು ಮಹಿಳಾ ರೈಡರ್ಸ್‌ಗೆ ಮಾರ್ಗದರ್ಶನವನ್ನು ನೀಡುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಸ್ವತಃ ತಾನೇ ಮದುವೆಯ ಪೌರೋಹಿತ್ಯವನ್ನು ವಹಿಸಿಕೊಂಡ ವರ; ವಿಡಿಯೋ ವೈರಲ್
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸೈನಿಕರು ಅಲ್ಲಿರುವಾಗ ನಾವು ಯಾವುದೇ ಹಿಂಜರಿಕೆಯಿಲ್ಲದೆ ಅಲ್ಲಿ ಪ್ರಯಾಣಿಸಬಹುದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ಸೈನಿಕರ ಈ ಗುಣ ಯಾವಾಗಲೂ ನನ್ನ ಮನಸ್ಸನ್ನು ಗೆಲ್ಲುತ್ತೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್ಮ ಸೈನಿಕರು ನಮ್ಮ ಹೆಮ್ಮೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ