Viral: ಫೋನ್ ತಂದ ಆಪತ್ತು; ಕೀ ಪ್ಯಾಡ್ ಮೊಬೈಲ್ ನುಂಗಿ ಪ್ರಾಣ ಕಳೆದುಕೊಂಡ ಮಹಿಳೆ
ಸಾವು ಯಾವ ರೂಪದಲ್ಲಾದರೂ ಬರಬಹುದು ಎಂದು ಹಲವರು ಹೇಳುತ್ತಿರುತ್ತಾರೆ. ಇದಕ್ಕೆ ನಿದರ್ಶನದಂತಿರುವ ದಾರುಣ ಘಟನೆಯೊಂದು ನಡೆದಿದ್ದು, ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಸೆಲ್ ಫೋನ್ ನುಂಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆಕೆ ಕೀ ಪ್ಯಾಡ್ ಮೊಬೈಲ್ ನುಂಗಿದ್ದಾರೆ. ಪರಿಣಾಮ ಮಹಿಳೆಯ ಅನ್ನನಾಳಕ್ಕೆ ಪೆಟ್ಟು ಬಿದ್ದಿದ್ದು, ಇದೀಗ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯು ಸಾಯಲೇಬೇಕು ಎಂಬುದು ವಿಧಿ ಲಿಖಿತ. ಆದರೆ ಆ ಸಾವು ಯಾವ ರೂಪದಲ್ಲಿ, ಯಾವ ಸಂದರ್ಭದಲ್ಲಿ ಬರುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಹೀಗೆ ಈ ಸಾವು ಯಾವ ರೂಪದಲ್ಲಿ ಬೇಕಾದರೂ ಬರಹುದು. ಇದಕ್ಕೆ ನಿದರ್ಶನದಂತಿರುವ ದಾರುಣ ಘಟನೆಯೊಂದು ನಡೆದಿದ್ದು, ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಸೆಲ್ ಫೋನ್ ನುಂಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೌದು ಆಕೆ ಕೀ ಪ್ಯಾಡ್ ಸೆಲ್ ಫೋನ್ ನುಂಗಿದ ಪರಿಣಾಮ ಅನ್ನನಾಳಕ್ಕೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದ ಕಾಕಿನಾಡದಲ್ಲಿ ಈ ದಾರುಣ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಮೊಬೈಲ್ ಫೋನ್ ನುಂಗಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜಮಹೇಂದ್ರವರಂನ ಬೊಮ್ಮೂರಿನ ಪೆನುಮಲ್ಲದ ರಮ್ಯ ಸ್ಮೃತಿ ಎಂಬ 35 ವರ್ಷ ವಯಸ್ಸಿನ ಮಹಿಳೆ ಸೆಲ್ ಫೋನ್ ನುಂಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಪ್ರಕಾರ, ರಮ್ಯ ಸ್ಮೃತಿ ಕಳೆದ 15 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಮೊನ್ನೆಯಷ್ಟೆ ಆಕೆ ಮೊಬೈಲ್ ಫೋನ್ ಅನ್ನು ನುಂಗಿದ್ದು, ಮನೆಯವರು ಮೊಬೈಲ್‌ಗಾಗಿ ಹುಡುಕಾಟ ನಡೆಸುವಾಗ ಆಕೆ ಮೊಬೈಲ್ ನುಂಗಿರುವ ಬಗ್ಗೆ ಹೇಳುತ್ತಾರೆ. ತಕ್ಷಣ ಆಕೆಯನ್ನು ರಾಜಮಹೇಂದ್ರವರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ.
ಆಕೆ ಮೊಬೈಲ್ ನುಂಗಿದ ಪರಿಣಾಮ ಅನ್ನ ನಾಳಕ್ಕೆ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಮನೆಯವರು ರಮ್ಯ ಸ್ಮೃತಿಯನ್ನು ಶನಿವಾರ ಜನವರಿ 25 ರ ರಾತ್ರಿ ಕಾಕಿನಾಡದ ಜಿಜಿಎಚ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸ್ಮೃತಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಲಡಾಖ್ ರೈಡ್ ವೇಳೆ ಹುಡುಗಿಯರ ತಂಡಕ್ಕೆ ಬೆಂಬಲ ಮತ್ತು ಕಾಳಜಿ ತೋರಿ ಉದಾರತೆ ಮೆರೆದ ಸೈನಿಕರು; ಹೃದಯಸ್ಪರ್ಶಿ ವಿಡಿಯೋ ವೈರಲ್
ವೈದ್ಯರ ನಿರ್ಲಕ್ಷ್ಯದಿಂದ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಮೃತಳ ತಂದೆ ಆರೋಪಿಸಿದ್ದು, ಈ ಘಟನೆ ಕುರಿತು ಪೊಲೀಸರಿಗೆ ದೂರು ಕೂಡಾ ನೀಡಲಾಗಿದೆ. ಇದೀಗ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ