Viral: ಸ್ವತಃ ತಾನೇ ಮದುವೆಯ ಪೌರೋಹಿತ್ಯವನ್ನು ವಹಿಸಿಕೊಂಡ ವರ; ವಿಡಿಯೋ ವೈರಲ್
ಹಿಂದೂ ಧರ್ಮದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಹಲವು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮತ್ತು ಪುರೋಹಿತರು ಮದುವೆ ಶಾಸ್ತ್ರ, ವಿಧಿವಿಧಾನಗಳನ್ನು ನಡೆಸಿಕೊಡುತ್ತಾರೆ. ಆದ್ರೆ ಇಲ್ಲೊಂದು ವಿಶಿಷ್ಟ ಮದುವೆ ಕಾರ್ಯಕ್ರಮವೊಂದು ನಡೆದಿದ್ದು, ಸ್ವತಃ ವರನೇ ತನ್ನ ಮದುವೆಯ ಪೌರೋಹಿತ್ಯವನ್ನು ವಹಿಸಿಕೊಂಡಿದ್ದಾನೆ. ಹೌದು ವರ ತಾನೇ ಮಂತ್ರಘೋಷಗಳನ್ನು ಪಠಿಸುತ್ತಾ, ತನ್ನ ಮದುವೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾನೆ. ಈ ವಿಶೇಷ ಮದುವೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರತಿಯೊಂದು ಧರ್ಮದ ಮದುವೆಯೂ ಅದರದ್ದೇ ಆದಂತಹ ಆಚಾರ, ಸಂಪ್ರದಾಯಗಳನ್ನು ಒಳಗೊಂಡಿರುತ್ತವೆ. ಅದರಲ್ಲೂ ಹಿಂದೂ ಧರ್ಮದಲ್ಲಿ ವಿವಾಹ ಕಾರ್ಯಕ್ರಮಗಳಲ್ಲಿ ಹಲವು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಸಾಮಾನ್ಯವಾಗಿ ಮದುವೆಗಳಲ್ಲಿ ನಡೆಯುವ ಪೂಜೆ, ವಿಧಿ ವಿಧಾನಗಳನ್ನು ಪುರೋಹಿತರೇ ನಡೆಸಿಕೊಡುತ್ತಾರೆ ಎಂಬುದು ನಮ್ಗೆ ಗೊತ್ತಿರುವಂಹ ವಿಚಾರ. ಆದ್ರೆ ಇಲ್ಲೊಂದು ವಿಶಿಷ್ಟ ಮದುವೆಯೊಂದು ನಡೆದಿದ್ದು, ಸ್ವತಃ ವರನೇ ತನ್ನ ಮದುವೆಯ ಪೌರೋಹಿತ್ಯವನ್ನು ವಹಿಸಿಕೊಂಡಿದ್ದಾನೆ. ಹೌದು ವರ ತಾನೇ ಮಂತ್ರಘೋಷಗಳನ್ನು ಪಠಿಸುತ್ತಾ, ತನ್ನ ಮದುವೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾನೆ. ಈ ವಿಶೇಷ ಮದುವೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹರಿದ್ವಾರದ ಕುಂಜಾ ಬಹದ್ದೂರ್‌ಪುರ ಎಂಬಲ್ಲಿ ಇತ್ತೀಚಿಗೆ ಈ ಮದುವೆ ನಡೆದಿದ್ದು, ವರನು ತನ್ನ ಮದುವೆಯ ಪೌರೋಹಿತ್ಯವನ್ನು ತಾನೇ ವಹಿಸಿಕೊಂಡಿದ್ದನು. ಹೌದು ವಧುವಿನೊಂದಿಗೆ ಅಗ್ನಿ ಕುಂಡದ ಮುಂದೆ ಕುಳಿತ ವರ, ಸ್ವತಃ ತಾನೇ ಮಂತ್ರ ಘೋಷಗಳನ್ನು ಪಠಿಸುತ್ತಾ ಮದುವೆಯ ಶಾಸ್ತ್ರಗಳನ್ನು ನೆರವೇರಿಸಿದ್ದಾನೆ. ಮೊದಲಿನಿಂದಲೂ ಧಾರ್ಮಿಕ ಸಮಾರಂಭ, ಪೂಜೆ ಪುನಾಸ್ಕಾರಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ವರ ವಿವೇಕ್ ತನ್ನ ಮದುವೆಯ ಶಾಸ್ತ್ರವನ್ನು ತಾನೇ ನೆರವೇರಿಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Groom Becomes Priest: #Saharanpur Man Conducts His Own Wedding Rituals pic.twitter.com/keHAABXD77
— Genzdigest (@Genzofficia_l) January 25, 2025
Genzofficia_l ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಅರ್ಚಕನಾದ ವರ; ಸ್ವತಃ ತಾನೇ ತನ್ನ ಮದುವೆಯಲ್ಲಿ ವಿವಾಹ ಶಾಸ್ತ್ರವನ್ನು ನಡೆಸಿದ ವರ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವರ ತನ್ನ ಮದುವೆಯ ವಿಧಿವಿಧಾನಗಳನ್ನು ಸ್ವತಃ ತಾನೇ ನೆರವೇರಿಸುತ್ತಿರುವ ದೃಶ್ಯವನ್ನು ಕಾಣಬಹುದು. ವಧುವಿನ ಜೊತೆ ಅಗ್ನಿಕುಂಡದ ಮುಂದೆ ಕುಳಿತ ವರ ಮಂತ್ರ ಘೋಷಗಳನ್ನು ಪಠಿಸುತ್ತಾ ಅಗ್ನಿಗೆ ತುಪ್ಪವನ್ನು ಅರ್ಪಿಸುತ್ತಾ, ತನ್ನ ಮದುವೆಯ ಶಾಸ್ತ್ರ ಸಂಪ್ರದಾಯಗಳನ್ನು ತಾನೇ ನಡೆಸಿದ್ದಾನೆ.
ಜನವರಿ 25 ರಂದು ಹಂಚಿಕೊಳ್ಳಲಾದ ಈ ಹೃದಯಸ್ಪರ್ಶಿ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ವರ ಸ್ವತಃ ತಾನೇ ತನ್ನ ಮದುವೆಯ ಪೌರೋಹಿತ್ಯವನ್ನು ವಹಿಸಿಕೊಂಡ ರೀತಿ ನೆಟ್ಟಿಗರ ಮನ ಗೆದ್ದಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ