Viral: ಶ್ವಾನಕ್ಕೆ ಥಳಿಸಿದ ವಾಹನ ಸವಾರ; ಕೊನೆಗೆ ರಕ್ಷಣೆಗೆ ಬಂದಾತನ ಮೇಲೆಯೇ ಅಟ್ಯಾಕ್ ಮಾಡಿದ ನಾಯಿ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ದೃಶ್ಯಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಇದೀಗ ಅಂತಹದ್ದೊಂದು ವಿಡಿಯೋ ವೈರಲ್ ಆಗಿದ್ದು, ತನ್ನ ಸಹಾಯಕ್ಕೆ ಧಾವಿಸಿದ ವ್ಯಕ್ತಿಯ ಮೇಲೆಯೇ ಶ್ವಾನವೊಂದು ದಾಳಿ ನಡೆಸಿದೆ. ಹೌದು, ವಾಹನ ಸವಾರನೊಬ್ಬ ದೊಣ್ಣೆಯಿಂದ ನಾಯಿಗೆ ಹೊಡೆದಿದ್ದು, ಆ ತಕ್ಷಣ ವ್ಯಕ್ತಿಯೊಬ್ಬ ಆ ಶ್ವಾನದ ಸಹಾಯಕ್ಕೆ ಧಾವಿಸಿದ್ದು, ಭಯದಿಂದಲೋ, ಕೋಪದಿಂದಲೋ ಆ ನಾಯಿ ಕೊನೆಗೆ ಸಹಾಯಕ್ಕೆ ಧಾವಿಸಿದ ವ್ಯಕ್ತಿಯ ಮೇಲೆಯೇ ದಾಳಿ ಮಾಡಿದೆ.
ನಿಯತ್ತಿನ ಮತ್ತೊಂದು ಹೆಸರು ಎಂದು ಕರೆಸಿಕೊಳ್ಳುವ ಶ್ವಾನ ಮನುಷ್ಯನ ಆತ್ಮೀಯ ಸ್ನೇಹಿತ ಅಂದ್ರೆ ತಪ್ಪಾಗಲಾರದು. ಆದ್ರೆ ಕೆಲವೊಂದು ಬಾರಿ ಈ ನಾಯಿಗಳೇ ಮನುಷ್ಯನ ಮೇಲೆ ಏಕಾಏಕಿ ದಾಳಿ ನಡೆಸುತ್ತವೆ. ಕೆಲವೊಮ್ಮೆ ಸುಖಾಸುಮ್ಮನೆ ದಾರಿಹೋಕರ ಮೇಲೆ ದಾಳಿ ನಡೆಸಿದ್ರೆ, ಇನ್ನೂ ಕೆಲವೊಮ್ಮೆ ಸ್ವಯಂ ರಕ್ಷಣೆಗಾಗಿ ಆಕ್ರಮಣ ಮಾಡುತ್ತವೆ. ಆದ್ರೆ ಇಲ್ಲೊಂದು ಶ್ವಾನ ಮಾತ್ರ ಅದರ ಸಹಾಯಕ್ಕೆ ಧಾವಿಸಿದ ವ್ಯಕ್ತಿಗೆಯೇ ಕಚ್ಚಿದೆ. ಹೌದು, ವಾಹನ ಸವಾರನೊಬ್ಬ ದೊಣ್ಣೆಯಿಂದ ನಾಯಿಗೆ ಹೊಡೆದಿದ್ದು, ಆ ತಕ್ಷಣ ವ್ಯಕ್ತಿಯೊಬ್ಬ ಆ ಶ್ವಾನದ ಸಹಾಯಕ್ಕೆ ಧಾವಿಸಿದ್ದು, ಭಯದಿಂದಲೋ, ಕೋಪದಿಂದಲೋ ಆ ನಾಯಿ ಸಹಾಯಕ್ಕೆ ಧಾವಿಸಿದ ವ್ಯಕ್ತಿಯ ಮೇಲೆಯೇ ದಾಳಿ ಮಾಡಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಸ್ಕೂಟಿಯಲ್ಲಿ ಬಂದಂತಹ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ನಾಯಿಗೆ ದೊಣ್ಣೆಯಿಂದ ಹೊಡೆದಿದ್ದು, ಆತ ಕೊಟ್ಟ ಏಟಿಗೆ ನಾಯಿ ಕುಸಿದು ಬಿದ್ದಿದೆ. ಈ ವ್ಯಕ್ತಿಯ ಅಮಾನವೀಯ ಕೃತ್ಯವನ್ನು ಪ್ರಶ್ನಿಸಿ ನಾಯಿಯ ರಕ್ಷಣೆಗೆ ಆ ತಕ್ಷಣ ವ್ಯಕ್ತಿಯೊಬ್ಬ ಧಾವಿಸಿದ್ದು, ಇದ್ದಕ್ಕಿದ್ದಂತೆ ಎಚ್ಚರಗೊಂಡ ಶ್ವಾನ ಸ್ವಯಂ ರಕ್ಷಣೆಯ ಕಾರಣಕ್ಕೋ ಏನೋ ತನ್ನ ಸಹಾಯಕ್ಕೆ ಧಾವಿಸಿದ ವ್ಯಕ್ತಿಯ ಮೇಲೆಯೇ ದಾಳಿ ನಡೆಸಿದೆ.
A guy starts hitting a Dog with stick, other guy came to save the dog, Dog woke and bit the other guy who came to help him😭 pic.twitter.com/rlkRR2bNc4
— Ghar Ke Kalesh (@gharkekalesh) January 25, 2025
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸ್ಕೂಟಿ ಸವಾರನೊಬ್ಬ ದೊಣ್ಣೆಯಲ್ಲಿ ಹೊಡೆದ ಏಟಿಗೆ ಶ್ವಾನವೊಂದು ಕುಸಿದು ಬೀಳುವಂತಹ ದೃಶ್ಯವನ್ನು ಕಾಣಬಹುದು. ಆ ತಕ್ಷಣ ಶ್ವಾನದ ರಕ್ಷಣೆಗೆ ವ್ಯಕ್ತಿಯೊಬ್ಬ ಧಾವಿಸಿದ್ದು, ಎಚ್ಚರಗೊಂಡ ನಾಯಿ ಸಹಾಯಕ್ಕೆ ಧಾವಿಸಿದ ವ್ಯಕ್ತಿಯ ಕಾಲಿಗೆ ಕಚ್ಚಿದೆ.
ಇದನ್ನೂ ಓದಿ: ಇದು ವಿದ್ಯಾದೇಗುಲವೋ ಅಥವಾ ವ್ಯಾಪಾರ ಕೇಂದ್ರವೋ, ಬೆಂಗಳೂರಿನಲ್ಲಿ 3ನೇ ತರಗತಿಗೆ 2.1 ಲಕ್ಷ ಶುಲ್ಕವಂತೆ
ಜನವರಿ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅತಿಯಾಗಿ ಒಳ್ಳೆಯತನವನ್ನು ತೋರಿಸಲು ಹೋದ್ರೆ ಹೀಗೆಯೇ ಆಗೋದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ಶ್ವಾನಕ್ಕೆ ಹುಚ್ಚು ಹಿಡಿದಂತೆ ಕಾಣುತ್ತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ವ್ಯಕ್ತಿ ಹೀರೋ ಆಗಲು ಹೋಗಿ ಝೀರೋ ಆದʼ ಎಂದು ತಮಾಷೆ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ