ಜಬಲ್ಪುರದ ಆಸ್ಪತ್ರೆ ಬಳಿ ಮಗುವಿನ ತಲೆಬುರುಡೆ ಜೊತೆ ಆಟವಾಡುತ್ತಿದ್ದ ಬೀದಿ ನಾಯಿಗಳು; ವಿಡಿಯೋ ವೈರಲ್
ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಆಸ್ಪತ್ರೆ ಬಳಿ ಮಗುವಿನ ತಲೆಬುರುಡೆಯೊಂದಿಗೆ ಆಟವಾಡುತ್ತಿದ್ದ ಬೀದಿ ನಾಯಿಗಳ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ಎಲ್ಲರಲ್ಲೂ ಆತಂಕ ಮೂಡಿಸಿದ್ದು, ತನಿಖೆಗೆ ಆದೇಶ ನೀಡಲಾಗಿದೆ. ಈ ಘಟನೆಯ ನಂತರ, ವೈದ್ಯಕೀಯ ಕಾಲೇಜಿನ ಡೀನ್ ನವನೀತ್ ಸಕ್ಸೇನಾ ತನಿಖೆಗೆ ಆದೇಶಿಸಿದ್ದಾರೆ. ತಲೆಬುರುಡೆ ಅಲ್ಲಿಗೆ ಹೇಗೆ ಬಂತು, ಅದು ಯಾರಿಗೆ ಸೇರಿದ್ದು ಮತ್ತು ಅದನ್ನು ಆಸ್ಪತ್ರೆಯ ಹಿಂದಿನ ಕೊಳದ ಬಳಿ ಎಸೆಯಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಅಬಲ್ಪುರ್: ಮಧ್ಯಪ್ರದೇಶದ ಜಬಲ್ಪುರದಲ್ಲಿ ಬೀದಿ ನಾಯಿಮರಿಗಳು ಮಗುವಿನ ತಲೆಬುರುಡೆಯೊಂದಿಗೆ ಆಟವಾಡುತ್ತಿರುವ ವಿಡಿಯೋ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಆಸ್ಪತ್ರೆಯ ಹಾಸ್ಟೆಲ್ ಬಳಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಈ ವಿಡಿಯೋ ಅಲ್ಪಾವಧಿಯಲ್ಲಿಯೇ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು.
ಈ ಘಟನೆಯ ನಂತರ, ವೈದ್ಯಕೀಯ ಕಾಲೇಜಿನ ಡೀನ್ ನವನೀತ್ ಸಕ್ಸೇನಾ ತನಿಖೆಗೆ ಆದೇಶಿಸಿದ್ದಾರೆ. ತಲೆಬುರುಡೆ ಅಲ್ಲಿಗೆ ಹೇಗೆ ಬಂತು, ಅದು ಯಾರಿಗೆ ಸೇರಿದ್ದು ಮತ್ತು ಅದನ್ನು ಹಾಸ್ಟೆಲ್‌ನ ಹಿಂದಿನ ಕೊಳದ ಬಳಿ ಎಸೆಯಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಮಾಹಿತಿಯ ಪ್ರಕಾರ, ಇಂದು ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಆಸ್ಪತ್ರೆಯ ಬಳಿ 2 ನಾಯಿಮರಿಗಳು ಮಗುವಿನ ತಲೆಬುರುಡೆಯೊಂದಿಗೆ ಆಟವಾಡುತ್ತಿರುವ ದೃಶ್ಯಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡವು.
ಇದನ್ನೂ ಓದಿ: Viral: ಫೋನ್ ತಂದ ಆಪತ್ತು; ಕೀ ಪ್ಯಾಡ್ ಮೊಬೈಲ್ ನುಂಗಿ ಪ್ರಾಣ ಕಳೆದುಕೊಂಡ ಮಹಿಳೆ
ಈ ವೀಡಿಯೊದಲ್ಲಿ ಎರಡು ನಾಯಿಮರಿಗಳಲ್ಲಿ ಒಂದು ತಲೆಬುರುಡೆಯನ್ನು ಎತ್ತಿಕೊಂಡು ಓಡಿಹೋಗಿರುವುದನ್ನು ಕಾಣಬಹುದು. ಆಸ್ಪತ್ರೆಯ ಸಿಬ್ಬಂದಿ ಮಗುವಿನ ತಲೆಬುರುಡೆಯನ್ನು ಹಾಸ್ಟೆಲ್ ಹಿಂದೆ ಹೂತುಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆ ತಲೆಬರುಡೆಯನ್ನು ನಾಯಿಮರಿಗಳು ಹೊರಕ್ಕೆ ಎಳೆದ ಹಿನ್ನೆಲೆಯಲ್ಲಿ ಈ ಕೃತ್ಯ ಬಯಲಿಗೆ ಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ