ವರದಕ್ಷಿಣೆ ಬಗ್ಗೆ ಸುಳ್ಳು ಕೇಸ್, ಪತ್ನಿ ವಿರುದ್ಧ ಪತ್ರ ಬರೆದಿಟ್ಟು ಪತಿ ಆತ್ಮಹತ್ಯೆ
ವರದಕ್ಷಿಣೆ ಬಗ್ಗೆ ಸುಳ್ಳು ಪ್ರಕರಣ ದಾಖಲಿಸಿ ಪತ್ನಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಕಾರಣಕ್ಕೆ ಪತ್ನಿ ಮತ್ತು ಆಕೆಯ ತಾಯಿ ಮತ್ತಿಬ್ಬರು ಸಹೋದರಿಯರ ವಿರುದ್ಧ ದೂರು ದಾಖಲಿಸಲಾಗಿದೆ. ಪಡಿಯಾರ್ ಅವರ ಪತ್ನಿ ರಾಜಸ್ಥಾನದಲ್ಲಿ ಅವರ ವಿರುದ್ಧ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕಾದರೆ ಹಣವನ್ನು ಕೊಡಿ ಎಂದು ಆಕೆಯ ಮನೆಯವರು ನಿತಿನ್ಗೆ ಒತ್ತಾಯಿಸುತ್ತಿದ್ದರು.

ವರದಕ್ಷಿಣೆ ಬಗ್ಗೆ ಸುಳ್ಳು ಪ್ರಕರಣ ದಾಖಲಿಸಿದ ಪತ್ನಿ ವಿರುದ್ಧ ಪತ್ರ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶ ಇಂದೋರ್ನಲ್ಲಿ ನಡೆದಿದೆ. ವ್ಯಕ್ತಿ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದಾರೆ. ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಹೆಣ್ಣುಮಕ್ಕಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಇದರಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ ಎಂದು ಪತ್ರ ಬರೆದಿಟ್ಟು ನಿತಿನ್ ಪಡಿಯಾರ್ ಎಂಬುವವರು ಜನವರಿ 20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಕಾರಣಕ್ಕೆ ಪತ್ನಿ ಮತ್ತು ಆಕೆಯ ತಾಯಿ ಮತ್ತಿಬ್ಬರು ಸಹೋದರಿಯರ ವಿರುದ್ಧ ದೂರು ದಾಖಲಿಸಲಾಗಿದೆ. ಪಡಿಯಾರ್ ಅವರ ಪತ್ನಿ ರಾಜಸ್ಥಾನದಲ್ಲಿ ಅವರ ವಿರುದ್ಧ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕಾದರೆ ಹಣವನ್ನು ಕೊಡಿ ಎಂದು ಆಕೆಯ ಮನೆಯವರು ನಿತಿನ್ಗೆ ಒತ್ತಾಯಿಸುತ್ತಿದ್ದರು.
ನಿತಿನ್ ಪಡಿಯಾರ್ ಬರೆದಿರುವ ಪತ್ರದಲ್ಲಿ, ‘ನಾನು ನಿತಿನ್ ಪಡಿಯಾರ್, ಮಹಿಳೆಯರು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣ ಅದನ್ನು ಬದಲಾಯಿಸಲು ಭಾರತ ಸರ್ಕಾರವನ್ನು ವಿನಂತಿಸುತ್ತೇನೆ. ನೀವು ಅದನ್ನು ಬದಲಾಯಿಸದಿದ್ದರೆ ಇನ್ನೂ ಅನೇಕ ಪುರುಷರು ಮತ್ತು ಅವರ ಕುಟುಂಬಗಳು ಹಾಳಾಗುತ್ತವೆ.
ಬೆಂಗಳೂರಿನಲ್ಲಿ ಇದೇ ಮಾದರಿಯ ಘಟನೆ ನಡೆದಿತ್ತು ಪತ್ನಿ ಹಾಗೂ ಆಕೆಯ ಮನೆಯವರ ಕಿರುಕುಳ ತಾಳಲಾರದೆ ವಿಡಿಯೋ ಮಾಡಿಟ್ಟು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಇತ್ತೀಚೆಗೆ ಅತುಲ್ ಸುಭಾಷ್ ಎಂಬ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಹಾಗೂ ಅತ್ತೆ- ಮಾವ ಈತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅದರ ಇತ್ಯರ್ಥಕ್ಕೆ ಮೂರು ಕೋಟಿ ರೂಪಾಯಿ ಬೇಡಿಕೆ ಮುಂದಿಟ್ಟದ್ದು ಹಾಗೂ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದು ಆತ್ಮಹತ್ಯೆಗೆ ಕಾರಣ ಎಂದು ಮೃತ ಟೆಕ್ಕಿಯ ಸಹೋದರ ಬಿಕಾಸ್ ಕುಮಾರ್ ಆರೋಪಿಸಿದ್ದರು.
ಖಾಸಗಿ ಕಂಪನಿಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದ ಅತುಲ್ ಸುಭಾಷ್ (34) ಬೆಂಗಳೂರಿನ ಮಂಜುನಾಥ ಲೇಔಟ್‍ನ ಡೆಲ್ಫೇನಿಯಮ್ ರೆಸಿಡೆನ್ಸಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂಲತಃ ಉತ್ತರ ಪ್ರದೇಶದವರಾದ ಅತುಲ್ 24 ಪುಟಗಳ ಆತ್ಮಹತ್ಯೆ ಟಿಪ್ಪಣಿ ಬರೆದಿಟ್ಟಿದ್ದು, ತನ್ನ ಪತ್ನಿ, ಆಕೆಯ ತಂದೆ- ತಾಯಿ ಮತ್ತು ಒಬ್ಬರು ನ್ಯಾಯಾಧೀಶರು ಕೂಡಾ ತನ್ನ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ.
ಆತ್ಮಹತ್ಯೆ, ಕಿರುಕುಳ, ಸುಲಿಗೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಸುಭಾಷ್ ಪತ್ನಿ ಹಲವು ಪ್ರಕರಣಗಳಲ್ಲಿ ಪತಿಯನ್ನು ಸಿಲುಕಿಸಿದ್ದಳು ಎಂದು ಸಂತ್ರಸ್ತ ಟೆಕ್ಕಿಯ ತಂದೆ ಆಪಾದಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ