Simpi Linganna’s Birth Anniversary : ಸಬಲೆಯಾಗಿರುವ ಆಕೆಗೆ ಬಿರುದು ಹಣೆಗಿಟ್ಟು ಬಿಗಿಯುವುದು ಬೇಡ ಗುರುಗಳೇ

Women : ‘ಅದೇ ಇವತ್ತಿನ ಕಾಲಮಾನದಲ್ಲಿ ಕುಳಿತು ನಿಮ್ಮ ‘ಗರತಿಯ ಬಾಳಸಂಹಿತೆ’ಯನ್ನು ಓದುವಾಗ ನೀವು ಸ್ವರ್ಗದಲ್ಲಿ ಕುಳಿತು ಇಪ್ಪತ್ತೊಂದನೇ ಶತಮಾನದ ಮಹಿಳೆಯರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು, ಅಲ್ಲಿಂದಲೇ ಒಂದು ಸಂವಾದವನ್ನು ಏರ್ಪಡಿಸಬೇಕು ಅನಿಸುತ್ತದೆ.’ ರೇಣುಕಾ ನಿಡಗುಂದಿ

Simpi Linganna’s Birth Anniversary : ಸಬಲೆಯಾಗಿರುವ ಆಕೆಗೆ ಬಿರುದು ಹಣೆಗಿಟ್ಟು ಬಿಗಿಯುವುದು ಬೇಡ ಗುರುಗಳೇ
ಸಿಂಪಿ ಲಿಂಗಣ್ಣ, ರೇಣುಕಾ ನಿಡಗುಂದಿ
Follow us
ಶ್ರೀದೇವಿ ಕಳಸದ
|

Updated on: Feb 10, 2022 | 5:57 PM

ಸಿಂಪಿ ಲಿಂಗಣ್ಣ | Simpi Linganna : ಗರತಿಯ ಹಾಡುಗಳಲ್ಲಿ ಗರತಿಯ ಬಾಳಸಂಹಿತೆಯೆಂಬ ಹೊತ್ತಗೆಯಲ್ಲಿ ಗರತಿಯ ಧರ್ಮವನ್ನು, ಆಕೆಯ ಕರ್ತವ್ಯಗಳನ್ನು, ಕುರಿತು ಅನೇಕ ಸಾಂದರ್ಭಿಕ ಜನಪದ  ತ್ರಿಪದಿಗಳ ಮೂಲಕ ವಿವರಿಸುತ್ತಾ ಹೋಗುತ್ತೀರಿ. ಗರತಿಯಾದವಳು ಬಾಳಿನ ಜಂಜಾಟದಲ್ಲಿಯೇ ಉಳಿದು ಅದನ್ನೆದುರಿಸಿ ಸಂಸಾರನೌಕೆಯನ್ನು ಪಾರುಗಾಣಿಸುವುದೇ ತನ್ನ ಧರ್ಮವೆಂದು ಬಗೆದಿದ್ದಾಳೆ. ಇತರ ಪಾತ್ರಗಳೆಲ್ಲ ಅವಳ ಸುತ್ತಲು ತಿರುಗುತ್ತವೆ. ಹಾಲುಂಡ ತವರಿಗೆ ಏನೆಂದು ಹರಸಲೇ? ಎನ್ನುವ ಅವಳು ತಾವರೆಯ ಗಿಡಹುಟ್ಟಿ ದೇವರಿಗೆ ನೆರಳಾಗಿ, ನಾ ಹುಟ್ಟಿ ಮನೆಗೆ ಎರವಾದೆ ಎಂದೂ ನೋಯುವವಳೂ ಅವಳೇ. ಒಟ್ಟಿನಲ್ಲಿ ಹೆಣ್ಣೇ ಸಂಸಾರದ ಕಣ್ಣು ಎನ್ನುವ ಲೋಕೋಕ್ತಿಯನ್ನು ಮೀರುವ ಇವತ್ತು ಆಕೆ ಗಂಡಸಿಗೆ ಸರಿಸಮಾನಳಾಗಿ ಕುಟುಂಬದ ನೊಗವನ್ನು ಹೊರಬಲ್ಲಳು.  ಬೌದ್ಧಿಕವಾಗಿ, ಆರ್ಥಿಕವಾಗಿಯೂ  ಸಬಲೆಯಾಗಿರುವ ಹೆಣ್ಣುಮಕ್ಕಳಿಗೆ  ದೊಡ್ಡ ಪಟ್ಟವೇನೂ ಬೇಡ ಗುರುಗಳೇ. ಗರತಿಯ ಬಿರುದು ಹಣೆಗಿಟ್ಟು ಆಕೆಯನ್ನು ಧರ್ಮದ ನೇಣುಗಂಬಕ್ಕೆ ಬಿಗಿಯುವುದೂ ಬೇಡ.

ರೇಣುಕಾ ನಿಡಗುಂದಿ, ಲೇಖಕಿ, ಅನುವಾದಕಿ (Renuka Nidagundi)        

*

ನಲ್ಮೆಯ ಸಿಂಪಿ ಲಿಂಗಣ್ಣನವರಿಗೆ, ಗೌರವಪೂರ್ವಕ ನಮನಗಳು ಹಾಗೂ ಹುಟ್ಟುಹಬ್ಬದ ಶುಭಾಶಯಗಳು.

ಜಾನಪದ ಸಂಶೋಧಕರೂ, ಪ್ರಬಂಧಕಾರರೂ, ನಾಟಕಕಾರರೂ ಆಗಿ ನೂರಾರು ಕೃತಿಗಳನ್ನು ಕನ್ನಡಿಗರಿಗೆ  ನೀಡಿದ ತಮ್ಮ ಹುಟ್ಟಿದ ದಿನವಿಂದು.  ಶಿಕ್ಷಕರಾಗಿ ಸಾವಿರಾರು ಮಕ್ಕಳಿಗೆ  ಓದಿಸಿದವರು. ಜನಪದ ಹಾಡುಗಳನ್ನು ಸಂಗ್ರಹಿಸಿ  “ಗರತಿಯ ಹಾಡು ಮತ್ತು ಜೀವನ ಸಂಗೀತದಲ್ಲಿ ಪ್ರಕಟಿಸಿ ಜನಪದೀಯ ಸಾಹಿತ್ಯವನ್ನು  ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ್ದು ಅತ್ಯಂತ ಶ್ಲಾಘನೀಯ ಕೆಲಸ. ನಾವೂ ನಮ್ಮ ಪ್ರಾಥಮಿಕ ಶಾಲೆಯಲ್ಲಿರುವಾಗ ಕೂಸಿದ್ದ ಮನೆಗೆ ಬೀಸಣಿಕೆ ಯಾಕೆ…ಕೂಸು ಕಂದವ್ವ ಒಳಹೊರಗೆ, ಕೂಸು ಕಂದವ್ವ ಒಳಹೊರಗೆ ಸುಳಿದಾರೆ, ಬೀಸಣಿಗೆ ಗಾಳಿ ಬೀಸ್ದಾಂಗ… ಎಂದು ಪಠ್ಯಪುಸ್ತಕದಲ್ಲಿನ ಎಲ್ಲ ಜನಪದ ಹಾಡುಗಳನ್ನು ರಾಗಹಚ್ಚಿ ಹಾಡುತ್ತಿದುದು ನೆನಪಾಯಿತು.

ಅದೇ ಇವತ್ತಿನ ಕಾಲಮಾನದಲ್ಲಿ ಕುಳಿತು ನಿಮ್ಮ ಗರತಿಯ ಬಾಳಸಂಹಿತೆಯನ್ನು ಓದುವಾಗ ನೀವು ಸ್ವರ್ಗದಲ್ಲಿ ಕುಳಿತು ಇಪ್ಪತ್ತೊಂದನೇ ಶತಮಾನದ ಮಹಿಳೆಯರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು, ಅಲ್ಲಿಂದಲೇ ಒಂದು ಸಂವಾದವನ್ನು ಏರ್ಪಡಿಸಬೇಕು ಅನಿಸುತ್ತದೆ. ಯಾಕೆಂದರೆ ಗರತಿಯ ಬಾಳಸಂಹಿತೆಯನ್ನು ಅಕ್ಕರೆಯಿಂದ ಬರೆದ ತಮಗೇ ಈ  ಹೆಣ್ಣುಮಕ್ಕಳ ಮನದ ದುಗುಡ ದುಮ್ಮಾನಗಳು ಅರ್ಥವಾಗಬಹುದು ಎನ್ನುವ ಆಶಯ ನನ್ನದು.

ಹೆಣ್ಣಿನ ಧರ್ಮ, ಮಗಳಾಗಿ, ಮಡದಿಯಾಗಿ, ಸೊಸೆಯಾಗಿ, ಅಕ್ಕ-ತಂಗಿಯರಾಗಿ ಸದ್ಗುಣಿಯಾದ  ಹೆಣ್ಣು ಯಾವ ರೀತಿ ಇರಬೇಕು, ಯಾವ ರೀತಿ ನಡೆನುಡಿಗಳನ್ನು ನಡವಳಿಕೆಯನ್ನು ಹೊಂದಿರಬೇಕು ಎಂಬುದನ್ನು  ಹದಿನಾರನೇ ಶತಮಾನದಲ್ಲಿ  ಸಂಚಿ ಹೊನ್ನಮ್ಮ  “ಹದಿಬದೆಯ ಧರ್ಮ” ವನ್ನು ಬರೆದಳು.  ನೀವೂ ಅದನ್ನು ಅಧ್ಯಯನ ಮಾಡೇ ಮಾಡಿರುತ್ತೀರಿ.

ಆಕೆ ಹೇಳುತ್ತಾಳೆ :-

ಪತಿಯ ಪಾದಾಬ್ಜ ಭಕ್ತಿಯೆ ತಮಗೆ ಇಹಪರ ಗತಿಯೆಂದು ಕಡುವಿಡಿದಿರ್ಪ ಸತಿಯರಿರ್ಪೆಡೆಯೊಳು ಕೃತಯುಗ ವೊಂದಲ್ಲದಿತರಯುಗಕ್ಕಿಂಬಿಲ್ಲ

ಪತಿಯ ಪಾದವೆಂಬ ತಾವರೆಯಡಿಯಲಿ ಪವಿತ್ರ ಭಕ್ತಿಯಿಂದಿರುವುದೇ ಸತಿಯರಿಗೆ ಇರುವೆಡೆಯಲ್ಲಿ, ಹೋಗುವೆಡೆಯಲ್ಲಿ ಮುಕ್ತಿಯೆಂಬ ಸದ್ಗತಿ ದೊರೆವುದು. ಗಂಡನ ಬಗ್ಗೆ ಪ್ರೀತ್ಯಾದಾರವುಳ್ಳ ಸಾಧ್ವಿಯರು ಇರುವ ಕಾಲವನ್ನು ಕೃತಯುಗವೆಂದು ಕರೆಯುವರು. ಅಂತಹ ಕಡೆ ಬೇರೆ ಯುಗಧರ್ಮಗಳಿಗೆ ಜಾಗವೇ ಇರುವುದಿಲ್ಲ.

ಇದನ್ನೂ ಓದಿ : Simpi Linganna Birth Anniversary: ಉಪ್ಪು ಮಾರಿ, ಬಟ್ಟೆ ನೇಯ್ದು ‘ವಾಗ್ವಿಲಾಸ’ ವಾಚನಾಲಯ ತೆರೆದ ಸಿಂಪಿ ಲಿಂಗಣ್ಣ

Simpi Linganna Birth Anniversary Letter From Renuka Nidagundi

ಲಿಂಗಣ್ಣನವರ ಗರತಿಯ ಬಾಳಸಂಹಿತೆ

ಅತ್ತೆ ಮಾವಂದಿರೊಳಡಕಮೆನಿಸಿ ಪತಿಚಿತ್ತದಿರವ ಸೆರೆಗೊಂಡು ಪೆತ್ತ ತಾಯನು ಪೆಸರೆನಿಸುವುದಿಳೆಯೊಳ ಗುತ್ತಮನಾರಿಯರೊಲಿದು

ಸೊಸೆಯಾದ ಹೆಣ್ಣು ಅತ್ತೆ ಮಾವಂದಿರಿಗೆ ವಿಧೇಯಳಾಗಿ, ತಗ್ಗಿ-ಬಗ್ಗಿ ನಡೆದು ಒಳ್ಳೆಯವಳೆನಿಸಿಕೊಂಡು, ಜೊತೆಗೆ ಗಂಡನ ಪ್ರೀತ್ಯಾದಾರ ಗಳಿಸಿ, ಅವನ ಮನಸ್ಸಿಗನುಗುಣವಾಗಿ, ಆಪ್ತ ವಾಗಿ ಅವನನ್ನು ಸೆರೆಹಿಡಿದು ಇಲ್ಲವೆ ಆಕರ್ಷಿಸುವಂತೆ ಅನುರೂಪಳಾಗಿ ನಡೆದುಕೊಂಡರೆ, ಹೆತ್ತ ತಾಯಿಗೆ ಸಂತೋಷ, ಹುಟ್ಟಿದ ಮನೆಗೆ ಕೀರ್ತಿ ತಂದಂತಾಗುತ್ತದೆ.

ಗರತಿಯ ಹಾಡುಗಳಲ್ಲಿ ಗರತಿಯ ಬಾಳಸಂಹಿತೆಯೆಂಬ ಹೊತ್ತಗೆಯಲ್ಲಿ ಗರತಿಯ ಧರ್ಮವನ್ನು, ಆಕೆಯ ಕರ್ತವ್ಯಗಳನ್ನು, ಕುರಿತು ಅನೇಕ ಸಾಂದರ್ಭಿಕ ಜನಪದ  ತ್ರಿಪದಿಗಳ ಮೂಲಕ ವಿವರಿಸುತ್ತಾ ಹೋಗುತ್ತೀರಿ.  ಗರತಿಯಾದವಳು ಬಾಳಿನ ಜಂಜಾಟದಲ್ಲಿಯೇ ಉಳಿದು ಅದನ್ನೆದುರಿಸಿ ಸಂಸಾರನೌಕೆಯನ್ನು ಪಾರುಗಾಣಿಸುವುದೇ ತನ್ನ ಧರ್ಮವೆಂದು ಬಗೆದಿದ್ದಾಳೆ. ಇತರ ಪಾತ್ರಗಳೆಲ್ಲ ಅವಳ ಸುತ್ತಲು ತಿರುಗುತ್ತವೆ. ಹಾಲುಂಡ ತವರಿಗೆ ಏನೆಂದು ಹರಸಲೇ? ಎನ್ನುವ ಅವಳು ತಾವರೆಯ ಗಿಡಹುಟ್ಟಿ ದೇವರಿಗೆ ನೆರಳಾಗಿ, ನಾ ಹುಟ್ಟಿ ಮನೆಗೆ ಎರವಾದೆ ಎಂದೂ ನೋಯುವವಳೂ ಅವಳೇ. ಒಟ್ಟಿನಲ್ಲಿ ಹೆಣ್ಣೇ ಸಂಸಾರದ ಕಣ್ಣು ಎನ್ನುವ ಲೋಕೋಕ್ತಿಯನ್ನು ಮೀರುವ ಇವತ್ತು ಆಕೆ ಗಂಡಸಿಗೆ ಸರಿಸಮಾನಳಾಗಿ ಕುಟುಂಬದ ನೊಗವನ್ನು ಹೊರಬಲ್ಲಳು. ಬೌದ್ಧಿಕವಾಗಿ, ಆರ್ಥಿಕವಾಗಿಯೂ  ಸಬಲೆಯಾಗಿರುವ ಹೆಣ್ಣುಮಕ್ಕಳಿಗೆ  ದೊಡ್ಡ ಪಟ್ಟವೇನೂ ಬೇಡ ಗುರುಗಳೇ. ಗರತಿಯ ಬಿರುದು ಹಣೆಗಿಟ್ಟು ಆಕೆಯನ್ನು ಧರ್ಮದ ನೇಣುಗಂಬಕ್ಕೆ ಬಿಗಿಯುವುದೂ ಬೇಡ.

ಕಾಲ ಬದಲಾಗಿದೆ.  ಆದರೆ ಪುರುಷ ಅಹಂಕಾರದ ಗಂಡಾಳಿಕೆ ಎಳ್ಳಷ್ಟೂ ಬದಲಾಗಿಲ್ಲ.

ನಾವು ಇವತ್ತಿನ ಮಹಿಳೆಯರು ಅತ್ತೆ ಮಾವರಿಗಂಜುತ್ತ ಅಳುಕುತ್ತ ಇರುವವರಲ್ಲ. ಗಂಡನ ದನಿಗೂ ಅಂಜಿ ಕುಳಿತುಕೊಳ್ಳುವವರೂ ಅಲ್ಲ. ಇವತ್ತಿಗೂ ಹೆಣ್ಣುಮಗಳೊಬ್ಬಳು ಹೊರಗೆ ಲಕ್ಷಾಂತರ ಸಂಬಳ ಪಡೆದರೂ ಮನೆಯ ನಾಲ್ಕು ಗೋಡೆಯೊಳಗೆ ಗಂಡನಾದವನು ಆಕೆ ತನ್ನ ಸೇವೆಮಾಡುವ ಸೇವಕಿಯೆಂತೇ ಕಾಣುತ್ತಾನೆಯೇ ಹೊರತು ಸರಿಸಮಾನಳಾಗಿ ಅಲ್ಲ.  ಈ ಹೊತ್ತಿಗಾದರೂ ನಮಗೆ ಸಮಾನತೆಯ ಸ್ಥಾನಮಾನಗಳು ಬೇಕಿವೆ.

ಇರಲಿ ಹೇಳುತ್ತಾ ಹೋದರೆ  ವಿಷಯಗಳ ಪಟ್ಟಿ ಬೆಳೆಯುತ್ತಲೇ ಹೋದೀತು.  ಇಷ್ಟು ಸಾಕು ಇವತ್ತಿಗೆ. ಮತ್ತೆ ಬರೆಯುತ್ತೇನೆ.

ಶುಭಾಶಯಗಳೊಂದಿಗೆ

ರೇಣುಕಾ ನಿಡಗುಂದಿ

ಇದನ್ನೂ ಓದಿ : Simpi Linganna Birth Anniversary: ‘ಗರತಿಯ ಹಾಡು, ಜೀವನ ಸಂಗೀತ ಕಾವ್ಯದೃಷ್ಟಿಯಿಂದ ಇಂದಿಗೂ ಅದ್ವಿತೀಯ’

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್