ಬೆಂಗಳೂರಿಗೆ ಬಂದ ಗೋವಿಂದ ಡ್ಯಾನ್ಸ್ ಮಾಡದೆ ವಾಪಸ್ಸು ಹೋಗೋದು ಸಾಧ್ಯವೇ?
ಗೋವಿಂದ ಅವರು ನಿರೂಪಕಿ, ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನ ಹಾಗೂ ವೇದಿಕೆ ಮೇಲಿದ್ದ ಡ್ಯಾನ್ಸರ್ಗಳನ್ನು ನಿರಾಸೆಗೊಳಿಸುವುದಿಲ್ಲ. ಅವರ ಸಿನಿಮಾಗಳ ಒಂದಷ್ಟು ಪಾಪ್ಯುಲರ್ ನಂಬರ್ಗಳ ಮೇಲೆ ಅವರು ಸ್ಟೆಪ್ಸ್ ಹಾಕುತ್ತಾರೆ. ಡ್ಯಾನ್ಸ್ ವಿಷಯಕ್ಕೆ ಬಂದರೆ ಅವರು ಲೆಜೆಂಡ್ ಅನ್ನೋದ್ರಲ್ಲಿ ಎರಡು ಮಾತಿಲ್ಲ ಮಾರಾಯ್ರೇ. ಅವರು ತಮ್ಮ ಸಿಗ್ನೇಚರ್ ಸ್ಟೆಪ್ ಹಾಕುತ್ತಿದ್ದಂತೆಯೇ ಜನರಿಂದ ಶಿಳ್ಳೆ, ಚಪ್ಪಾಳೆ ಮತ್ತು ಕೇಕೆ.
ಬೆಂಗಳೂರು, ಜೂನ್ 20: ನಿನ್ನೆ ಅಂದರೆ ಗುರುವಾರ ಬಾಲಿವುಡ್ ನಟ ಗೋವಿಂದ (Bollywood actor ) ಬೆಂಗಳೂರಲ್ಲಿದ್ದರು. 80 ಮತ್ತು 90 ರ ದಶಕಗಳಲ್ಲಿ ಅತ್ಯಂತ ಜನಪ್ರಿಯ ನಟರಾಗಿದ್ದ ಗೋವಿಂದ ದಕ್ಷಿಣ ಭಾರತದ ಹಲವಾರು ಹಿಂದಿ ರೀಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಮಿಡಿ ಡೈಲಾಗ್ ಮತ್ತು ಡ್ಯಾನ್ಸ್ ಅವರ ಸಿನಿಮಾಗಳ ಪ್ರಮುಖ ಅಕರ್ಷಣೆಯಾಗಿರುತ್ತಿದ್ದವು. ಈಗಲೂ ಅವರಿದ್ದಲ್ಲಿ ಕುಣಿತ ಇರಲೇಬೇಕು, ನಿನ್ನೆಯ ಕಾರ್ಯಕ್ರಮದ ನಿರೂಪಕಿ ಡ್ಯಾನ್ಸ್ ಗಾಗಿ ಗೋವಿಂದರನ್ನು ವಿನಂತಿಸಿಕೊಂಡಾಗ ನಟ ಅದನ್ನೇ ಹೇಳುತ್ತಾರೆ; ಮೊದಲು ನನ್ನನ್ನು ಹೊಗಳಿ ಉತ್ತುಂಗಕ್ಕೇರಿಸುತ್ತಾರೆ ನಂತರ ಸರ್ ಪ್ಲೀಸ್ ಡ್ಯಾನ್ಸ್ ಎನ್ನುತ್ತಾರೆ!
ಇದನ್ನೂ ಓದಿ: ನನಗಿಂತ ಹೆಚ್ಚಾಗಿ ಬೇರೆ ನಟಿಯರ ಜೊತೆ ಕಾಲ ಕಳೆದರು: ಗೋವಿಂದ ಪತ್ನಿ ಸುನೀತಾ ಆರೋಪ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos