News9 Global Summit

News9 Global Summit

ಮಾಧ್ಯಮ ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಿ ಯಶಸ್ಸಿನ ಗಾಥೆ ಬರೆಯುತ್ತ ಮುನ್ನಡೆಯುವ ಕೆಲವೇ ಕೆಲವು ಸಂಸ್ಥಗಳಲ್ಲಿ ಟಿವಿ9 ಕೂಡ ಒಂದು. ಭಾರತದ ಯಾವ ಮಾಧ್ಯಮ ಸಂಸ್ಥೆ ಕೂಡ ಮಾಡಿರದ ಒಂದು ಪ್ರಯೋಗವನ್ನು ಟಿವಿ9 ಮಾಡುತ್ತಿದೆ. ಅದುವೇ –ನ್ಯೂಸ್​9 ಗ್ಲೋಬಲ್​ ಸಮಿಟ್​ (News9 Global Summit). ಭಾರತದ ಹೊರಗೆ ಈ ಸಮ್ಮೇಳನ ನಡೆಯು್ತಿರುವುದು ಬಹಳ ವಿಶೇಷ.. ವಿಶ್ವದ ಚಿಂತಕರು ಮತ್ತು ರಾಜಕೀಯ ನಾಯಕರು ಭಾಗವಹಿಸಿ, ವಿಶ್ವದ ಭವಿಷ್ಯದ ಬಗ್ಗೆ ಮಂಥನ ನಡೆಸಲಿದ್ದಾರೆ

ಇನ್ನೂ ಹೆಚ್ಚು ಓದಿ

ಇಂದು ನ್ಯೂಸ್​9 ಜಾಗತಿಕ ಶೃಂಗಸಭೆಯ ಅಂತಿಮ ದಿನ, ಫುಟ್ಬಾಲ್ ಪಂದ್ಯ

ದೇಶದ ನಂಬರ್​1 ನ್ಯೂಸ್​ ನೆಟ್​ವರ್ಕ್​ ಟಿವಿ9 ಹಮ್ಮಿಕೊಂಡಿರುವ ನ್ಯೂಸ್​9 ಜಾಗತಿಕ ಶೃಂಗಸಭೆ ಅಂತಿಮ ಘಟ್ಟಕ್ಕೆ ಬಂದಿದೆ. ಜರ್ಮನಿಯ ಸ್ಟಟ್​ಗಾರ್ಟ್​ನಲ್ಲಿ ನಡೆಯುತ್ತಿದೆ. ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ: ಜಾಗತಿಕ ಪ್ರಕಾಶಮಾನ ತಾಣದ ಒಳಗೆ ವಿಷಯದ ಕುರಿತು ಮಾತನಾಡಿದರು.

ಜರ್ಮನ್, ಸಂಸ್ಕೃತದ ನಡುವೆ ಆಳವಾದ ಸಂಬಂಧವಿದೆ: ಟಿವಿ9 ನೆಟ್​ವರ್ಕ್​ ಎಡಿಟೋರಿಯಲ್ ಡೈರೆಕ್ಟರ್ ಹೇಮಂತ್ ಶರ್ಮಾ

ಟಿವಿ9 ನೆಟ್‌ವರ್ಕ್‌ನ ನ್ಯೂಸ್9 ಗ್ಲೋಬಲ್ ಶೃಂಗಸಭೆ ಜರ್ಮನಿಯ ಸ್ಟಟ್‌ಗಾರ್ಟ್ ನಗರದಲ್ಲಿ ನಡೆಯುತ್ತಿದೆ. ಐತಿಹಾಸಿಕ ಫುಟ್ಬಾಲ್ ಮೈದಾನ MHP ಅರೆನಾದಲ್ಲಿ ನಡೆಯುತ್ತಿರುವ ಮೂರು ದಿನಗಳ ಶೃಂಗಸಭೆಯ ಎರಡನೇ ದಿನ, ಟಿವಿ-9 ನೆಟ್‌ವರ್ಕ್‌ನ ಎಡಿಟೋರಿಯಲ್ ಡೈರೆಕ್ಟರ್ ಹೇಮಂತ್ ಶರ್ಮಾ ಅವರು ಮಾತನಾಡಿ, ‘ಭಾರತ-ಜರ್ಮನಿ: ಸಂಸ್ಕೃತ ಸಂಪರ್ಕ' ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

10 ವರ್ಷಗಳಲ್ಲಿ ಭಾರತ ಬೃಹತ್ ಪರಿವರ್ತನೆಗೆ ಸಾಕ್ಷಿಯಾಗಿದೆ; ನ್ಯೂಸ್ 9 ಜಾಗತಿಕ ಶೃಂಗಸಭೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ

ನ್ಯೂಸ್ 9 ಗ್ಲೋಬಲ್ ಶೃಂಗಸಭೆಯ 2ನೇ ದಿನವಾದ ಇಂದು ಮಾತನಾಡಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ದಿ ಬಿಗ್ಗೆಸ್ಟ್ ಟರ್ನ್​ ರೌಂಡ್ ಸ್ಟೋರಿ ಎಂಬ ವಿಷಯದ ಕುರಿತು ಮಾತನಾಡಿದ್ದಾರೆ. ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬೃಹತ್ ಪರಿವರ್ತನೆಯನ್ನು ಕಂಡಿದೆ ಎಂದು ಹೇಳಿದ್ದಾರೆ.

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ನ್ಯೂಸ್​​9 ಕಾರ್ಯಕ್ಕೆ ಮೋದಿ ಶ್ಲಾಘನೆ

ಜರ್ಮನಿಯ ಸ್ಟುಟ್​​ಗಾರ್ಟ್​​ನಲ್ಲಿ ನಡೆಯುತ್ತಿರುವ ನ್ಯೂಸ್​​9 ಗ್ಲೋಬಲ್​ ಸಮಿಟ್​ನ ಎರಡನೇ ದಿನವಾದ ಇಂದು(ನವೆಂಬರ್ 22) ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ, ನ್ಯೂಸ್​​9 ಗ್ಲೋಬಲ್​ ಸಮಿಟ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನ್ಯೂಸ್​​9 ಗ್ಲೋಬಲ್​ ಸಮಿಟ್​ ಮೂಲಕ ಜರ್ಮನಿ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ.

ಭಾರತ-ಜರ್ಮನ್ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭ; ನ್ಯೂಸ್​9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಭಾರತ ಮತ್ತು ಜರ್ಮನಿ ನಡುವಿನ ಸಂಬಂಧವು ಹಲವು ಶತಮಾನಗಳ ಹಿಂದಿನದು. ತಮಿಳು ಮತ್ತು ತೆಲುಗು ಪುಸ್ತಕಗಳನ್ನು ಮುದ್ರಿಸಿದ ಯುರೋಪಿನ ಮೊದಲ ದೇಶ ಜರ್ಮನಿ. ಇಂದು ಜರ್ಮನಿಯಲ್ಲಿ ಭಾರತದ 50 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಜಗತ್ತಿನ ಎಲ್ಲ ದೇಶಗಳು ಭಾರತದೊಂದಿಗೆ ಪಾಲುದಾರಿಕೆ ಹೊಂದಲು ಉತ್ಸುಕವಾಗಿವೆ ಎಂದು ನ್ಯೂಸ್ 9 ಗ್ಲೋಬಲ್ ಶೃಂಗಸಭೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ ಮತ್ತು ಜರ್ಮನಿ ನಡುವಿನ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಪ್ರಧಾನಿ ಮೋದಿಯಿಂದ ಸಂಬಂಧ, ಗೌರವ, ಜವಾಬ್ದಾರಿ ಬಗ್ಗೆ ಕಲಿತಿದ್ದೇನೆ; ನ್ಯೂಸ್​9 ಶೃಂಗಸಭೆಯಲ್ಲಿ ಟಿವಿ9 ನೆಟ್​ವರ್ಕ್ ಎಂಡಿ, ಸಿಇಒ ಬರುಣ್ ದಾಸ್

ನಾನು ಪ್ರಧಾನಿ ನರೇಂದ್ರ ಮೋದಿಯವರಿಂದ ಸಂಬಂಧ, ಗೌರವ ಮತ್ತು ಜವಾಬ್ದಾರಿಯ ಬಗ್ಗೆ ಕಲಿತಿದ್ದೇನೆ ಎಂದು ಹೇಳಿದ ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಟಿವಿ9 ನೆಟ್​ವರ್ಕ್​ ಎಂಡಿ-ಸಿಇಒ ಬರುಣ್ ದಾಸ್, ನ್ಯೂಸ್ 9 ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಮರ್ಸಿಡಿಸ್ ಬೆಂಜ್ ಪಾತ್ರ ಮಹತ್ವದ್ದು; ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಬಾಬಾ ಕಲ್ಯಾಣಿ

ಭಾರತ್ ಫೋರ್ಜ್‌ನ ಅಧ್ಯಕ್ಷ ಮತ್ತು ಎಂಡಿ ಬಾಬಾ ಕಲ್ಯಾಣಿ ಅವರು ಸುಮಾರು 20 ವರ್ಷಗಳ ಹಿಂದೆ ಜರ್ಮನ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡಾಗ ತಾವು ಯಾವ ರೀತಿಯ ಸವಾಲುಗಳನ್ನು ಎದುರಿಸಬೇಕಾಯಿತು ಎಂಬ ಬಗ್ಗೆ ವಿವರಿಸಿದ್ದಾರೆ.

News9 Global Summit; ಹೆಚ್ಚುತ್ತಿರುವ ಜಾಗತಿಕ ತಾಪಮಾನ ಹಲವು ಹವಾಮಾನ ವೈಪರೀತ್ಯಗಳನ್ನು ಸೃಷ್ಟಿಸುತ್ತಿದೆ: ಅರ್ ಕೆ ಗೋಯಲ್

News9 Global Summit : ತಮ್ಮ ಸಂಸ್ಥೆಯು ಕಳೆದ ಅರ್ಥಿಕ ವರ್ಷದಲ್ಲಿ 141 ಮಿಲಿಯನ್ ಟನ್ ಉಕ್ಕು (ಸ್ಟೀಲ್) ಉತ್ಪಾದನೆ ಮಾಡಿದ್ದು ಅದರೊಟ್ಟಿಗೆ 358 ಮಿಲಿಯನ್ ಟನ್ ಇಂಗಾಲದ ಡೈ ಆಕ್ಸೈಡ್ ಅನ್ನು ಜನರೇಟ್ ಮಾಡಿದೆ. ಸ್ಟೀಲ್ ಉದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಜಾಗತಿಕವಾಗಿ ಈ ಸೆಕ್ಟರ್ ನಲ್ಲಿ ಶೇಕಡ 7ರಷ್ಟು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗುತ್ತಿದ್ದರೆ ಭಾರತದಲ್ಲಿ ಶೇಕಡ 12ರಷ್ಟು ಉತ್ಪತ್ತಿಯಾಗುತ್ತಿದೆ ಎಂದು ಗೋಯಲ್ ಹೇಳಿದರು.

ಸೌರ ಶಕ್ತಿಯ ಜೊತೆ ಪವನ ಶಕ್ತಿಯೂ ಬೇಕು; ನ್ಯೂಸ್ 9 ಶೃಂಗಸಭೆಯಲ್ಲಿ ಅಜಯ್ ಮಾಥುರ್ ಮಾತು

ಇಂಟರ್‌ನ್ಯಾಷನಲ್ ಸೋಲಾರ್ ಅಲೈಯನ್ಸ್‌ನ ಡೈರೆಕ್ಟರ್ ಜನರಲ್ ಅಜಯ್ ಮಾಥುರ್, ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಇಂಧನ ಪರಿವರ್ತನೆಗಳನ್ನು ಬೆಂಬಲಿಸಲು ಉತ್ತಮ ಸೌರ ಸಂಗ್ರಹಣೆ ಮತ್ತು ಜಾಗತಿಕ ನಿಧಿಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ನಾವೀನ್ಯತೆ ಮತ್ತು ಅಂತಾರಾಷ್ಟ್ರೀಯ ಸಹಯೋಗದ ಮೂಲಕ ಸೌರ ಕ್ರಾಂತಿಯನ್ನು ಮುನ್ನಡೆಸುವ ಭಾರತದ ಸಾಮರ್ಥ್ಯವನ್ನು ಅವರು ಎತ್ತಿ ತೋರಿಸಿದ್ದಾರೆ.

ಬ್ರಿಟನ್ ಸೂಪರ್ ಪವರ್ ಆಗಿದ್ದ ಟೆಕ್ನಾಲಜಿಯಿಂದಲಾ? ಸೂಪರ್ ಪವರ್ ಆದ್ದರಿಂದ ತಂತ್ರಜ್ಞಾನ ಪಡೆಯಿತಾ?: ಪೂರ್ಣೇಂದು ಪ್ರಶ್ನೆ

Purnendu Chatterjee at News9 global summit: ಬ್ರಿಟನ್ ಸೂಪರ್ ಪವರ್ ಆಗಿದ್ದು ತಂತ್ರಜ್ಞಾನದಿಂದಲೋ, ಅಥವಾ ಸೂಪರ್ ಪವರ್ ಆಗಿದ್ದರಿಂದ ತಂತ್ರಜ್ಞಾನ ಹೊಂದಿತೋ ಯೋಚಿಸಿ ಎಂದು ಭಾರತೀಯ ಉದ್ಯಮಿ ಪೂರ್ಣೇಂದು ಚಟರ್ಜಿ ಪ್ರಶ್ನೆ ಕೇಳಿದ್ದಾರೆ. ನ್ಯೂಸ್9 ಗ್ಲೋಬಲ್ ಸಮಿಟ್​ನ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಅವರು ಎಐ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ