AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ ಬಳಸಿ ಅದ್ಭುತ ಕಂಟೆಂಟ್ ಕೊಡಬಲ್ಲಿರಾ? ಇಗೋ ಇಲ್ಲಿದೆ ಟಿವಿ9 ನೆಟ್ವರ್ಕ್ AI² ಅವಾರ್ಡ್ಸ್ 2026

TV9 Network AI² Awards 2026: ನೀವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನಂತಹ ಆಧುನಿಕ ಪರಿಕರಗಳನ್ನು ಬಳಸಿ ದೃಶ್ಯಗಳನ್ನು ಕಟ್ಟಬಲ್ಲಿರೆಂದರೆ ಟಿವಿ9 ನೆಟ್ವರ್ಕ್ ಒಂದು ಅಮೋಘ ವೇದಿಕೆ ನಿರ್ಮಿಸಿದೆ. AI² ಅವಾರ್ಡ್ಸ್ 2026 ಅನ್ನು ಟಿವಿ9 ನೆಟ್ವರ್ಕ್ ಆರಂಭಿಸಿದೆ. ಇದರಲ್ಲಿ ನೊಂದಾಯಿಸಲು ಡಿಸೆಂಬರ್ 8ರಿಂದ ಜನವರಿ 31ರವರೆಗೂ ಅವಕಾಶ ಇದೆ. ಕಿರುಚಿತ್ರ, ಅನಿಮೇಶನ್ ಇತ್ಯಾದಿ ಯಾವುದೇ ರೀತಿಯ ಕಂಟೆಂಟ್ ಅನ್ನು ಎಐ ನೆರವಿನಿಂದ ತಯಾರಿಸಬಹುದು.

ಎಐ ಬಳಸಿ ಅದ್ಭುತ ಕಂಟೆಂಟ್ ಕೊಡಬಲ್ಲಿರಾ? ಇಗೋ ಇಲ್ಲಿದೆ ಟಿವಿ9 ನೆಟ್ವರ್ಕ್ AI² ಅವಾರ್ಡ್ಸ್ 2026
AI² ಅವಾರ್ಡ್ಸ್ 2026
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 09, 2025 | 6:53 PM

Share

ನವದೆಹಲಿ, ಡಿಸೆಂಬರ್ 9: ಸ್ಟೋರಿ ಟೆಲ್ಲಿಂಗ್​ನಲ್ಲಿ ಏನಾದರೂ ಹೊಸ ಪ್ರಯೋಗ ಮಾಡಲು ಆಸಕ್ತಿ ಇರುವಂತಹ, ಎಐ ಬಳಸಿ ಹೊಸ ಮಾದರಿಯಲ್ಲಿ ಕಂಟೆಂಟ್ ಕ್ರಿಯೇಶನ್ ಮಾಡಬಯಸುವ ಪ್ರತಿಭೆಗಳಿಗೆ ಟಿವಿ9 ನೆಟ್ವರ್ಕ್ ಒಳ್ಳೆಯ ವೇದಿಕೆ ಒದಗಿಸುತ್ತಿದೆ. 2026ರ ಎಐ² ಅವಾರ್ಡ್ಸ್ (AI² Awards) ಎನ್ನುವ ಚಿತ್ರ ನಿರ್ಮಾಣ ಸ್ಪರ್ಧಾ ಕಾರ್ಯಕ್ರಮವನ್ನು ಡಿಸೆಂಬರ್ 8ರಂದು ಆರಂಭಿಸಿದೆ. ಕೃತಕ ಬುದ್ಧಿಮತ್ತೆ ಮತ್ತು ಮಾನವ ಪರಿಕಲ್ಪನೆ ಸೇರಿದರೆ ಹೇಗೆ ಕಂಟೆಂಟ್ ಪ್ರಸ್ತುತವಾದೀತು? ಕಲಾತ್ಮಕತೆಯ ಅಂಶಕ್ಕೆ ಕೊರತೆಯಾಗದ ರೀತಿಯಲ್ಲಿ ಆಧುನಿಕ ಪರಿಕರಗಳನ್ನು ಉಪಯೋಗಿಸಿ ಒಂದು ಸಿನಿಮಾ ಹೇಗೆ ತಯಾರಿಸಬಹುದು ಎಂಬುದನ್ನು ಈ AI² ಅವಾರ್ಡ್ಸ್​ನಲ್ಲಿ ನಿರೀಕ್ಷಿಸಬಹುದು.

ಈಗಂತೂ ಮನರಂಜನಾ ಕ್ಷೇತ್ರದಲ್ಲಿ ಎಐ ಬಳಕೆ ಬಹಳ ವ್ಯಾಪಕವಾಗುತ್ತಿದೆ. ಸ್ಕ್ರಿಪ್ಟ್ ಬರೆಯುವುದರಿಂದ ಹಿಡಿದು ಸಂಪೂರ್ಣ ಕಾಲ್ಪನಿಕ ಪ್ರಪಂಚವನ್ನು ಸೃಷ್ಟಿಸುವವರೆಗೂ ಕೃತಕ ಬುದ್ಧಿಮತ್ತೆಯ ಬಳಕೆ ಆಗುತ್ತಿದೆ. ಇಂಥ ಹೊತ್ತಲ್ಲಿ ಟಿವಿ9 ನೆಟ್ವರ್ಕ್ ವತಿಯಿಂದ AI² ಅಡಾರ್ಡ್ಸ್ 2026 ಆಯೋಜನೆಯಾಗುತ್ತಿದೆ.

ಸಾಂಪ್ರದಾಯಿಕ ವಿಧಾನಗಳಿಂದ ಸಾಧ್ಯವಾಗದ ಕಥೆಗಳನ್ನು ಎಐ ನೆರವಿನಿಂದ ಸೃಷ್ಟಿಸಲು ಮತ್ತು ಹೊಸ ರೀತಿಯ ಅಭಿವ್ಯಕ್ತತೆ ತೋರ್ಪಡಿಸಲು ಈ ವೇದಿಕೆ ಮೂಲಕ ಜನರಿಗೆ ಅವಕಾಶ ಕೊಡಲಾಗುತ್ತಿದೆ. ಹಲವಾರು ಜಾಗತಿಕ ಶೃಂಗಸಭೆಗಳನ್ನು ನಡೆಸಿರುವ ಟಿವಿ9 ನೆಟ್ವರ್ಕ್ ಸಂಸ್ಥೆಗೆ ಇದೂ ಕೂಡ ಚೊಚ್ಚಲ ಪ್ರಯೋಗವಾಗಿದೆ.

ಎಐ ಸಾಧನಗಳು ಹಾಗೂ ನಿಮ್ಮ ಸೃಜನಶೀಲತೆ ಬಳಸಿ ಹೊಸ ಕಥೆಗಳನ್ನು ಹೆಣೆಯಬಲ್ಲಿರಿ, ದೃಶ್ಯಗಳನ್ನು ಕಟ್ಟಬಲ್ಲಿರಿ ಎಂದರೆ ನಿಮಗೆ ಇದು ಒಳ್ಳೆಯ ಪ್ಲಾಟ್​ಫಾರ್ಮ್. ವಿದ್ಯಾರ್ಥಿಗಳು, ಸ್ವತಂತ್ರ ಚಿತ್ರ ತಯಾರಕರು, ಸಿನಿಮಾ ತಯಾರಿಕೆಯ ಆಕಾಂಕ್ಷಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು, ಕಿರುಚಿತ್ರಗಳನ್ನು ತಯಾರಿಸಬಹುದು. ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಡಾಕ್ಯುಮೆಂಟರಿ, ಅನಿಮೇಶನ್, ಮ್ಯೂಸಿಕ್ ವಿಡಿಯೋ, ಬ್ರ್ಯಾಂಡೆಡ್ ಕಂಟೆಂಟ್ ಇತ್ಯಾದಿ ಹಲವು ಶೈಲಿಯ ಕಂಟೆಂಟ್​ಗಳನ್ನು ನಿರ್ಮಿಸಲು ಅವಕಾಶ ಇರುತ್ತದೆ.

2025ರ ಡಿಸೆಂಬರ್ 8ರಂದು ನೊಂದಣಿ ಕಾರ್ಯ ಆರಂಭವಾಗಿದೆ. ಇದು 2026ರ ಜನವರಿ 31ರವರೆಗೂ ನೊಂದಣಿಗೆ ಅವಕಾಶ ಇರುತ್ತದೆ. ಆ ಗಡುವಿನೊಳಗೆ ನಿಮ್ಮ ಕಂಟೆಂಟ್ ಅನ್ನು ಸಲ್ಲಿಸಬೇಕಾಗುತ್ತದೆ. ಅರ್ಹ ವ್ಯಕ್ತಿಗಳು ಈ ಕಂಟೆಂಟ್ ಅನ್ನು ಪರಾಮರ್ಶಿಸುತ್ತಾರೆ. ಮುಂಬೈನಲ್ಲಿ ತೀರ್ಪುಗಾರರ ಸುತ್ತು 2026ರ ಫೆಬ್ರುವರಿಯಲ್ಲಿ ನಡೆಯಬಹುದು.

ವಿಜೇತರಿಗೆ ಡಬ್ಲ್ಯುಐಟಿಟಿ ನ್ಯೂಸ್9 ಗ್ಲೋಬಲ್ ಸಮಿಟ್​ನಲ್ಲಿ ಗೌರವ

AI² ಅಡಾರ್ಡ್ಸ್​ನಲ್ಲಿ ಗೆಲುವು ಸಾಧಿಸಿದವರನ್ನು ದೊಡ್ಡ ವೇದಿಕೆಯಲ್ಲಿ ಗೌರವಿಸಲಾಗುತ್ತದೆ. 2026ರ ಮಾರ್ಚ್​ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಡಬ್ಲ್ಯುಐಟಿಟಿ ನ್ಯೂಸ್9 ಗ್ಲೋಬಲ್ ಸಮಿಟ್ 2026 (WITT News9 Global Summit) ಕಾರ್ಯಕ್ರಮದ ವೇಳೆ ವಿಜೇತರನ್ನು ಸನ್ಮಾನಿಸುವ ನಿರೀಕ್ಷೆ ಇದೆ. ಆಯ್ದೆ ಸಿನಿಮಾಗಳನ್ನು ಆ ವೇದಿಕೆಯಲ್ಲೇ ಪ್ರದರ್ಶಿಸಲಾಗಬಹುದು. ಎಐ ಮತ್ತು ಕ್ರಿಯೇಟಿವಿಟಿ ವಿಚಾರವಾಗಿ ಶೃಂಗಸಭೆಯಲ್ಲಿ ಒಂದು ಪ್ಯಾನಲ್ ಚರ್ಚೆ ಕೂಡ ನಡೆಯಲಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ