AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IMEC: ಗ್ಲೋಬಲ್ ಸಮಿಟ್​​ನಲ್ಲಿ IMEC ಬಗ್ಗೆ ಚರ್ಚೆ; ಭಾರತಕ್ಕೆ ಈ ಕಾರಿಡಾರ್ ವರದಾನ ಹೇಗೆ?

India Middle-east Europe Economic Corridor: ಮಧ್ಯಪ್ರಾಚ್ಯದ ಕೆಲ ದೇಶಗಳು, ಯೂರೋಪ್, ಅಮೆರಿಕ ಮತ್ತು ಭಾರತ ಭಾಗಿಯಾಗಿರುವ ಐಎಂಇಸಿ ಕಾರಿಡಾರ್ ಭಾರತಕ್ಕೆ ಗೇಮ್ ಚೇಂಜರ್ ಆಗಬಹುದು. ಈ ಕಾರಿಡಾರ್ ಬಗ್ಗೆ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ತಜ್ಞರು ಮಾತನಾಡಿದ್ದಾರೆ. ಈ ಯೋಜನೆ ಭಾರತಕ್ಕೆ ಹಾಗೂ ವಿಶ್ವದ ಆರ್ಥಿಕತೆಗೆ ಎಷ್ಟು ಸಹಕಾರಿಯಾಗಬಲ್ಲುದು ಎಂದು ಚರ್ಚಿಸಿದ್ದಾರೆ.

IMEC: ಗ್ಲೋಬಲ್ ಸಮಿಟ್​​ನಲ್ಲಿ IMEC ಬಗ್ಗೆ ಚರ್ಚೆ; ಭಾರತಕ್ಕೆ ಈ ಕಾರಿಡಾರ್ ವರದಾನ ಹೇಗೆ?
IMEC ಕಾರಿಡಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 19, 2025 | 3:45 PM

Share

ದುಬೈ, ಜೂನ್ 19: ಭಾರತದ ಮಹತ್ವಾಕಾಂಕ್ಷಿ ಅಂತಾರಾಷ್ಟ್ರೀಯ ಸಹಭಾಗಿತ್ವ ಯೋಜನೆಗಳಲ್ಲಿ ಒಂದಾದ IMEC ಕಾರಿಡಾರ್ ಬಗ್ಗೆ ನ್ಯೂಸ್9 ಗ್ಲೋಬಲ್ ಸಮಿಟ್​​ನಲ್ಲಿ (News9 Global Summit 2025) ಚರ್ಚೆ ಆಗಿದೆ. ದುಬೈನಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ನ್ಯೂಸ್9 ಜಾಗತಿಕ ಶೃಂಗಸಭೆಯಲ್ಲಿ ಭಾರತದಿಂದ ಮಧ್ಯಪ್ರಾಚ್ಯ ಮೂಲಕ ಯೂರೋಪ್​ ಮತ್ತು ಅಮೆರಿಕಕ್ಕೆ ಸಂಪರ್ಕ ಮಾಡುವ ಈ ಕಾರಿಡಾರ್ ಪ್ರಾಜೆಕ್ಟ್​​ನ ಅವಶ್ಯಕತೆ ಮತ್ತು ಮಹತ್ವದ ಬಗ್ಗೆ ತಜ್ಞರು ಮಾತನಾಡಿದ್ದಾರೆ.

ಟ್ರಾನ್ಸ್​​ವರ್ಲ್ಡ್ ಗ್ರೂಪ್ ಛೇರ್ಮನ್ ರಮೇಶ್ ಎಸ್ ರಾಮಕೃಷ್ಣನ್, ಯುಎಸ್​​ಐಎಸ್​​ಪಿಎಫ್ ಸಿಇಒ ಮುಕೇಶ್ ಆಘಿ ಮತ್ತು ಈ ಸೆಕ್ಟರ್​​ನ ತಜ್ಞ ಅಮ್ಜದ್ ತಾಹ ಅವರು ಈ ಕಾರಿಡಾರ್ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಈಗಿರುವ ಟ್ರೇಡಿಂಗ್ ರೂಟ್​​ಗಳು ಅನಿಶ್ಚಿತ ಸ್ಥಿತಿಯಲ್ಲಿವೆ. ಪರ್ಯಾಯ ವ್ಯಾಪಾರ ಮಾರ್ಗಗಳ ಅವಶ್ಯಕತೆ ಇವತ್ತಿನ ಕಾಲಘಟ್ಟದಲ್ಲಿ ಹೆಚ್ಚಿದೆ ಎಂಬುದು ತಜ್ಞರ ಅನಿಸಿಕೆ.

ಇದನ್ನೂ ಓದಿ: ಭಾರತ-ಯುಎಇ ಸಂಬಂಧದಲ್ಲಿ ‘ಸಿಇಪಿಎ’ ಗೇಮ್ ಚೇಂಜರ್: ಸತೀಶ್ ಕುಮಾರ್ ಸಿವನ್

ಏನಿದು IMEC ಕಾರಿಡಾರ್?

2023ರಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಸಭೆಯ ವೇಳೆ IMEC ಕಾರಿಡಾರ್ (India Middle-east Europe Corridor) ಸ್ಥಾಪನೆಗೆ ವಿವಿಧ ದೇಶಗಳು ಎಂಒಯುಗೆ ಸಹಿಹಾಕಿದವು. ಭಾರತದಿಂದ ಪಶ್ಚಿಮ ಏಷ್ಯಾ ಮೂಲಕ ಯೂರೋಪ್ ಹಾಗೂ ಅಮೆರಿಕಕ್ಕೆ ಟ್ರೇಡಿಂಗ್ ಸಂಪರ್ಕ ಮಾಡುವ ಕಾರಿಡಾರ್ ಇದು. ಭಾರತ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಇಟಲಿ, ಜರ್ಮನಿ, ಯೂರೋಪ್ ಯೂನಿಯನ್ ಮತ್ತು ಅಮೆರಿಕ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.

ಇಂಡಿಯಾ ಮಿಡಲ್ ಈಸ್ಟ್ ಯೂರೋಪ್ ಎಕನಾಮಿಕ್ ಕಾರಿಡಾರ್ ಎನ್ನಲಾಗುವ ಈ ವ್ಯಾಪಾರ ಮಾರ್ಗವು ಭಾರತದಿಂದ ಆರಂಭಿಸಿ ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್ ಮೂಲಕದ ಮಧ್ಯಪ್ರಾಚ್ಯ ಪ್ರದೇಶಗಳನ್ನು ಹಾದು ಯೂರೋಪ್ ಸಂಪರ್ಕಿಸುತ್ತದೆ. ಯೂರೋಪ್​​ನಲ್ಲಿ ಮಾರ್ಗದ ಆರಂಭ ಯಾವ ದೇಶದಿಂದ ಎಂಬುದು ಸ್ಪಷ್ಟವಾಗಿಲ್ಲ. ಗ್ರೀಸ್, ಇಟಲಿ ಮತ್ತು ಫ್ರಾನ್ಸ್ ದೇಶಗಳು ಈ ಕಾರಿಡಾರ್​​ಗೆ ಯೂರೋಪ್​​ನ ಬಾಗಿಲುಗಳಾಗಲು ಬಯಸುತ್ತಿವೆ.

ಇದನ್ನೂ ಓದಿ: ಭಾರತ-ಯುಎಇ ಸಂಬಂಧಕ್ಕೆ ವಿಶ್ವಾಸದ ತಳಹದಿ: ನ್ಯೂಸ್9 ಸಮಿಟ್​​ನಲ್ಲಿ ರಾಯಭಾರಿ ಸಂಜಯ್ ಸುಧೀರ್ ಹೇಳಿಕೆ

ಟರ್ಕಿ ಮತ್ತು ಚೀನಾಗೆ ಕಿರಿಕಿರಿ?

ಚೀನಾದ ಬಹಳ ಮಹತ್ವಾಕಾಂಕ್ಷಿ ಎನ್ನಲಾದ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್​​ಗೆ ಪರ್ಯಾಯವಾಗಿ ಐಎಂಇಸಿ ಕಾರಿಡಾರ್ ಅನ್ನು ರೂಪಿಸಲಾಗುತ್ತಿದೆ. ಐತಿಹಾಸಿಕವಾಗಿ ಇದ್ದ ಗೋಲ್ಡನ್ ರೋಡ್ ರೂಟ್​ನ ನವೀನ ರೂಪವೇ ಐಮಿಕ್ ಕಾರಿಡಾರ್. ತನ್ನ ಬೆಲ್ಟ್ ರೋಡ್ ಅಥವಾ ಸಿಲ್ಕ್ ರೋಡ್ ಯೋಜನೆ ಮೂಲಕ ವಿಶ್ವದ ವ್ಯಾಪಾರ ಪಾರಮ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹೊರಟಿದ್ದ ಚೀನಾಗೆ ಇದು ಇರಿಸುಮುರುಸು ತಂದಿದೆ.

ಇನ್ನು, ಟರ್ಕಿ ದೇಶ ಕೂಡ ಈ ಕಾರಿಡಾರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಈ ಯೋಜನೆಯಲ್ಲಿ ತನ್ನನ್ನು ಒಳಗೊಂಡಿಲ್ಲದಿರುವುದು ಟರ್ಕಿಯ ಆಕ್ರೋಶಕ್ಕೆ ಕಾರಣವಾಗಿದೆ. ಐಮಿಕ್​​ಗೆ ಪರ್ಯಾಯವಾಗಿ ಇರಾಕ್ ಮಾರ್ಗದ ಮೂಲಕ ಪ್ರತ್ಯೇಕ ಕಾರಿಡಾರ್ ರೂಪಿಸುವುದಾಗಿ ಟರ್ಕಿ ಪಣತೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ