AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2035ಕ್ಕೆ 300 ಬಿಲಿಯನ್ ಡಾಲರ್ ದಾಟಲಿದೆ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಗಾತ್ರ

India's Semiconductor market to grow to 120 billion USD by 2030: ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ 2030ರಷ್ಟರಲ್ಲಿ 120 ಬಿಲಿಯನ್ ಡಾಲರ್ ಗಾತ್ರಕ್ಕೆ ಹಿಗ್ಗಬಹುದು. 2035ರೊಳಗೆ ಈ ಉದ್ಯಮದ ಗಾತ್ರ 300 ಬಿಲಿಯನ್ ಡಾಲರ್ ಆಗಬಹುದು ಎಂದು ಡುಲಾಯ್ಟ್ ಏಜೆನ್ಸಿಯ ವರದಿ ಹೇಳಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಆಟೊಮೋಟಿವ್ ಟೆಕ್ನಾಲಜಿ, ಡಾಟಾ ಸೆಂಟರ್ ಇತ್ಯಾದಿ ಅಳವಡಿಕೆಯಿಂದ ಸೆಮಿಕಂಡಕ್ಟರ್ ಬೇಡಿಕೆ ಹೆಚ್ಚಲಿದೆ.

2035ಕ್ಕೆ 300 ಬಿಲಿಯನ್ ಡಾಲರ್ ದಾಟಲಿದೆ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಗಾತ್ರ
ಸೆಮಿಕಂಡಕ್ಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 18, 2026 | 4:02 PM

Share

ನವದೆಹಲಿ, ಮಾರ್ಚ್ 18: ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ (Semiconductor Market) ಮುಂದಿನ ನಾಲ್ಕು ವರ್ಷದಲ್ಲಿ ಮೂರು ಪಟ್ಟು ಬೆಳೆಯುವ ನಿರೀಕ್ಷೆ ಇದೆ. 2030ರೊಳಗೆ ಈ ಚಿಪ್ ಉದ್ಯಮ 120 ಬಿಲಿಯನ್ ಡಾಲರ್​ನಷ್ಟಾಗಬಹುದು. 2035ರೊಳಗೆ ಇದು ಬರೋಬ್ಬರಿ 300 ಬಿಲಿಯನ್ ಡಾಲರ್ ಮಾರುಕಟ್ಟೆಯಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಆಟೊಮೋಟಿವ್ ಗ್ರೋತ್, ಡಾಟಾ ಸೆಂಟರ್ ವಿಸ್ತರಣೆ ಇತ್ಯಾದಿ ಬಳಕೆ ಹೆಚ್ಚುವುದರಿಂದ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಗಣನೀಯವಾಗಿ ಹಿಗ್ಗಬಹುದು ಎಂದು ಡುಲಾಯ್ಟ್ (Deloitte) ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಭಾರತದಲ್ಲಿ ಸದ್ಯಕ್ಕೆ ಅದಕ್ಕೆ ಇರುವ ಸೆಮಿಕಂಡಕ್ಟರ್ ಅಗತ್ಯದಲ್ಲಿ ಶೇ. 90ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇನ್ನತ್ತು ವರ್ಷದೊಳಗೆ ಭಾರತಕ್ಕೆ ಬೇಕಾದ ಸೆಮಿಕಂಡಕ್ಟರ್ ಅಗತ್ಯಗಳಲ್ಲಿ ಶೇ. 60ರಷ್ಟವು ಸ್ಥಳೀಯವಾಗಿ ಪೂರೈಕೆ ಆಗುತ್ತಿರುತ್ತದೆ ಎಂದು ಈ ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಇದನ್ನೂ ಓದಿ: ಫ್ಲೈಟ್​ನಲ್ಲಿ ಶುಲ್ಕರಹಿತ ಸೀಟುಗಳು ಕನಿಷ್ಠ ಶೇ. 60 ಇರಬೇಕು; ಸರ್ಕಾರದಿಂದ ಹೊಸ ನಿಯಮಗಳು

ಸದ್ಯ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ 2024-25ರ ಹಣಕಾಸು ವರ್ಷದಲ್ಲಿ 45-50 ಬಿಲಿಯನ್ ಡಾಲರ್​ನಷ್ಟು ಇದೆ. ಕಳೆದ ಮೂರು ವರ್ಷಗಳಿಂದ ಈ ಉದ್ಯಮದ ಗಾತ್ರ ಶೇ 20ರ ಸಿಎಜಿಆರ್​ನಲ್ಲಿ ಬೆಳೆಯುತ್ತಿದೆ ಎಂಬುದನ್ನು ಡುಲಾಯ್ಟ್ ವರದಿಯಲ್ಲಿ ಗಮನಿಸಲಾಗಿದೆ.

‘2035ರೊಳಗೆ ಭಾರತದಲ್ಲಿ 4-5 ಸಿಲಿಕಾನ್ ಫ್ಯಾಬ್ ಘಟಕಗಳು, 8-10 ಕಾಂಪೌಂಡ್ ಫ್ಯಾಬ್​ಗಳು, 1-2 ಡಿಸ್​ಪ್ಲೇ ಫ್ಯಾಬ್ರಿಕೇಶನ್​ಗಳು, ಮತ್ತು 20-25 ಒಸಾಟ್ ಫೆಸಿಲಿಟಿಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಈ ಸ್ಥಳೀಯ ಉತ್ಪಾದನೆಯು ದೇಶದ ಶೇ. 60 ರಷ್ಟು ಸೆಮಿಕಂಡಕ್ಟರ್ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ.

ಮೊಬೈಲ್ ಫೋನ್, ಆಟೊಮೋಟಿವ್, ಕಂಪ್ಯೂಟಿಂಗ್, ಡಾಟಾ ಸೆಂಟರ್ ಇತ್ಯಾದಿ ಸೆಗ್ಮೆಂಟ್​ಗಳಿಗೆ ಹೆಚ್ಚಿನ ಸೆಮಿಕಂಡಕ್ಟರ್ ಬೇಕಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ

ಭಾರತದ ಸೆಮಿಕಂಡಕ್ಟರ್ ಮಿಷನ್​ನಿಂದಾಗಿ ಈ ಕ್ಷೇತ್ರದಲ್ಲಿ ಮ್ಯಾನುಫ್ಯಾಕ್ಚರಿಂಗ್​ಗೆ 19 ಬಿಲಿಯನ್ ಡಾಲರ್​ಗೂ ಅಧಿಕ ಮೌಲ್ಯದ ಹೂಡಿಕೆಗಳು ಹರಿದುಬಂದಿವೆ. ಎಂಟು ಒಸಾಟ್, ಒಂದು ಕಾಂಪೌಂಡ್ ಫ್ಯಾಬ್ ಮತ್ತು ಒಂದು ಸೆಮಿಕಂಡಕ್ಟರ್ ಫ್ಯಾಬ್ ಘಟಕ ಸ್ಥಾಪನೆ ಸೇರಿ 10 ಪ್ರಾಜೆಕ್ಟ್​ಗಳು ಜಾರಿಗೆ ಬರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಡಿಜೆ ನಿಷೇಧಿಸುವಂತೆ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ!
ಡಿಜೆ ನಿಷೇಧಿಸುವಂತೆ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ!
ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ
ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ
ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್
ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್
ಪ್ರಜ್ವಲ್ ಪ್ರಕರಣ: ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?
ಪ್ರಜ್ವಲ್ ಪ್ರಕರಣ: ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?
ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ
ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ
ವಿಡಿಯೋ: ಆಂಬ್ಯುಲೆನ್ಸ್‌ನಲ್ಲೇ ಬಂದು SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ!
ವಿಡಿಯೋ: ಆಂಬ್ಯುಲೆನ್ಸ್‌ನಲ್ಲೇ ಬಂದು SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ!
ಯುಗಾದಿ ವರ್ಷ ಭವಿಷ್ಯ;ಗ್ರಹಗಳ ಸಂಚಾರ ಮತ್ತು ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಯುಗಾದಿ ವರ್ಷ ಭವಿಷ್ಯ;ಗ್ರಹಗಳ ಸಂಚಾರ ಮತ್ತು ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ: 2 ಕೋಟಿ ರೂ. ಹಣ ಸೀಜ್
ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ: 2 ಕೋಟಿ ರೂ. ಹಣ ಸೀಜ್
ಇದನ್ನು ನಿರೀಕ್ಷಿಸಿರಲಿಲ್ಲ; ಲವ್ ಮಾಕ್ಟೇಲ್ 3 ಸೂಪರ್ ಎಂದ ಸೆಲೆಬ್ರೆಟಿಗಳು
ಇದನ್ನು ನಿರೀಕ್ಷಿಸಿರಲಿಲ್ಲ; ಲವ್ ಮಾಕ್ಟೇಲ್ 3 ಸೂಪರ್ ಎಂದ ಸೆಲೆಬ್ರೆಟಿಗಳು
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ