AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್ 1ರಿಂದ ಹೊಸ ಪ್ಯಾನ್ ಅಪ್ಲಿಕೇಶನ್ ನಿಯಮಗಳು ಜಾರಿಗೆ; ಅರ್ಜಿ ಪ್ರಕ್ರಿಯೆ ಸುಲಭವಿರಲ್ಲ

New PAN application rules from upcoming 2026-27 FY: ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್​ಗೆ ಅರ್ಜಿ ಸಲ್ಲಿಸಲು ಇರುವ ನಿಯಮಗಳು ಬದಲಾವಣೆಯಾಗಲಿವೆ. ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಪ್ಯಾನ್ ಪಡೆಯಲು ಆಧಾರ್ ದಾಖಲೆ ಇದ್ದರೆ ಸಾಕಾಗುವುದಿಲ್ಲ, ಹೆಚ್ಚುವರಿ ದಾಖಲೆಗಳು ಬೇಕಾಗಬಹುದು. ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್, ಡಿಎಲ್, ಪಾಸ್​ಪೋರ್ಟ್ ಇತ್ಯಾದಿ ದಾಖಲೆಯನ್ನು ಕೇಳಬಹುದು.

ಏಪ್ರಿಲ್ 1ರಿಂದ ಹೊಸ ಪ್ಯಾನ್ ಅಪ್ಲಿಕೇಶನ್ ನಿಯಮಗಳು ಜಾರಿಗೆ; ಅರ್ಜಿ ಪ್ರಕ್ರಿಯೆ ಸುಲಭವಿರಲ್ಲ
ಪ್ಯಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 18, 2026 | 7:44 PM

Share

ನವದೆಹಲಿ, ಮಾರ್ಚ್ 18: ಒಬ್ಬ ವ್ಯಕ್ತಿಯ ಹಣಕಾಸು ಕಾರ್ಯಗಳಿಗೆ ಪ್ಯಾನ್ (PAN- Permanent Account Number) ಈಗ ಬಹಳ ಮುಖ್ಯವಾಗಿರುವ ದಾಖಲೆ ಎನಿಸಿದೆ. ಆದಾಯ ತೆರಿಗೆ ಇಲಾಖೆಯು ಈ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಒದಗಿಸುತ್ತದೆ. ವ್ಯಕ್ತಿಯ ಬಹುತೇಕ ಹಣಕಾಸು ಚಟುವಟಿಕೆಯನ್ನು ದಾಖಲಿಸಲು ಪ್ಯಾನ್ ಸಹಾಯವಾಗುತ್ತದೆ. ಹೀಗಾಗಿ, ಪ್ಯಾನ್ ನಿಯಮಗಳಲ್ಲಿ ಆಗುವ ಬದಲಾವಣೆ ಬಹಳ ಮಹತ್ವ ಎನಿಸುತ್ತದೆ. ಆದಾಯ ತೆರಿಗೆ ಇಲಾಖೆ ಏಪ್ರಿಲ್ 1ರಿಂದ ನಿಯಮ ಪರಿಷ್ಕರಣೆ ಮಾಡಿದೆ.

ಏಪ್ರಿಲ್ 1ರಿಂದ ಹೊಸ ಪ್ಯಾನ್ ಅಪ್ಲಿಕೇಶನ್ ನಿಯಮಗಳು ಜಾರಿಗೆ ಬರಲಿವೆ. ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ನೀವು ಪ್ಯಾನ್ ಪಡೆಯಲು ಆಧಾರ್ ದಾಖಲೆ ನೀಡುವುದು ಮಾತ್ರ ಅಗತ್ಯವಾಗಿತ್ತು. ಬಹಳ ಸುಲಭವಾಗಿ ಅಪ್ಲಿಕೇಶನ್ ಸಲ್ಲಿಸಿ, ಪ್ಯಾನ್ ಪಡೆಯಬಹುದಿತ್ತು. ಮಾರ್ಚ್ 31ರ ನಂತರ ಇದರಲ್ಲಿ ಬದಲಾವಣೆ ಆಗಲಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ಹೊಸ ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಆಧಾರ್ ದಾಖಲೆ ನೀಡಿದರೆ ಸಾಲದು. ಹೆಚ್ಚಿನ ದಾಖಲೆಗಳು ಬೇಕಾಗುತ್ತದೆ. ವ್ಯಕ್ತಿಯ ಜನ್ಮ ದಿನಾಂಕದ ಋಜುವಾತಿಗೆ ಆಧಾರ್ ಸಾಕಾಗುವುದಿಲ್ಲ. ಹೆಚ್ಚುವರಿ ದಾಖಲೆ ಬೇಕಾಗುತ್ತದೆ.

ಜನನ ಪ್ರಮಾಣಪತ್ರ ಅಥವಾ ಬರ್ತ್ ಸರ್ಟಿಫಿಕೇಟ್, ವೋಟರ್ ಐಡಿ, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮತ್ತು ಎಸ್ಸೆಸ್ಸೆಲ್ಸಿ ಪ್ರಮಾಣಪತ್ರವನ್ನು ಕೇಳಲಾಗಬಹುದು. ಅಗತ್ಯಬಿದ್ದರೆ ಅಫಿಡವಿಟ್ ಹಾಗೂ ಇತರ ಸರ್ಕಾರಿ ದಾಖಲೆಗಳನ್ನೂ ಕೇಳಬಹುದು.

ಇದನ್ನೂ ಓದಿ: ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ

ಪ್ಯಾನ್ ಮತ್ತು ಆಧಾರ್​ನಲ್ಲಿ ವ್ಯಕ್ತಿಯ ಹೆಸರು ನಿಖರವಾಗಿ ಹೊಂದಿಕೆಯಾಗಬೇಕು

ಏಪ್ರಿಲ್ 1ರಿಂದ ಜಾರಿಯಾಗಲಿರುವ ಮತ್ತೊಂದು ಗಮನಾರ್ಹ ಪ್ಯಾನ್ ನಿಯಮವೆಂದರೆ ಹೆಸರಿನದ್ದು. ಆಧಾರ್​ನಲ್ಲಿರುವ ವ್ಯಕ್ತಿಯ ಹೆಸರು ಮತ್ತು ಅವರ ಪ್ಯಾನ್​ನಲ್ಲಿರುವ ಹೆಸರು ನಿಖರವಾಗಿ ಹೊಂದಿಕೆಯಾಗಬೇಕು. ಎಲ್ಲಾ ಇನಿಷಿಯಲ್​ಗಳೂ ಒಂದೇ ಇರಬೇಕು. ಉದಾಹರಣೆಗೆ, ಆಧಾರ್ ಕಾರ್ಡ್​ನಲ್ಲಿ ವ್ಯಕ್ತಿ ಹೆಸರು Subrahmanya K N ಎಂದಿದ್ದರೆ, ಪ್ಯಾನ್​ನಲ್ಲಿ Subramanya K N ಎಂದಿದ್ದರೆ ಆಗ ಅದು ಹೊಂದಿಕೆ ಆಗುವುದಿಲ್ಲ. ಪ್ಯಾನ್ ಅರ್ಜಿ ರಿಜೆಕ್ಟ್ ಆಗಬಹುದು. ಆಧಾರ್​ನಲ್ಲಿರುವಂತೆ ಹೆಸರನ್ನು ಹಾಗೆಯೇ ಬರೆಯಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಗಾಳಿ ಮಳೆಗೆ ಹಾರಿ ಹೋದ ಶಾಲಾ ಮೇಲ್ಚಾವಣಿ: ಮಕ್ಕಳು ಗ್ರೇಟ್​​ ಎಸ್ಕೇಪ್​​
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: ಹಕ್ಕುಪತ್ರ ವಿತರಣೆ
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!
ಎಂಥಾ ಕಾಲ ಬಂತಪ್ಪ: ಪೊಲೀಸ್​​ ಭದ್ರತೆಯಲ್ಲಿ LPG ಸಿಲಿಂಡರ್​​ಗಳ ವಿತರಣೆ!
ಡಿಜೆ ನಿಷೇಧಿಸುವಂತೆ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ!
ಡಿಜೆ ನಿಷೇಧಿಸುವಂತೆ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ!
ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ
ಐಪಿಎಲ್ ಟಿಕೆಟ್ ವಂಚನೆ ನಡೆಯುತ್ತಿದೆ ಎಚ್ಚರ
ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್
ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಆಪ್ತರಿಗೆ ರಿಲೀಫ್
ಪ್ರಜ್ವಲ್ ಪ್ರಕರಣ: ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?
ಪ್ರಜ್ವಲ್ ಪ್ರಕರಣ: ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?
ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ
ರಾಯಚೂರು: ಭಾರೀ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಚೀಲ ಭತ್ತ ಭಸ್ಮ