AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಇಯಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್; ಇಲ್ಲಿದೆ ಕಾರ್ಯಕ್ರಮದ ವಿವರ

News9 Global Summit 2025 UAE: ನ್ಯೂಸ್9 ಗ್ಲೋಬಲ್ ಸಮಿಟ್ 2025 ಕಾರ್ಯಕ್ರಮ ಯುಎಇಯ ತಾಜ್ ದುಬೈನಲ್ಲಿ ಇವತ್ತು ಜೂನ್ 19ರಂದು ನಡೆಯುತ್ತಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ವಿವೇಕ್ ಒಬೇರಾಯ್, ಏಕ್ತಾ ಕಪೂರ್, ಸುನೀಲ್ ಶೆಟ್ಟಿ ಹಾಗೂ ಹಲವು ಗಣ್ಯ ಉದ್ಯಮಿಗಳು, ರಾಜತಾಂತ್ರಿಕರು ಪಾಲ್ಗೊಳ್ಳಲಿದ್ದಾರೆ. ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ಸಂಬಂಧದ ಕುರಿತ ಚರ್ಚೆಗಳು ನಡೆಯಲಿವೆ.

ಯುಎಇಯಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್; ಇಲ್ಲಿದೆ ಕಾರ್ಯಕ್ರಮದ ವಿವರ
ನ್ಯೂಸ್9 ಗ್ಲೋಬಲ್ ಸಮಿಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 19, 2025 | 11:43 AM

Share

ದುಬೈ, ಜೂನ್ 19: ಜರ್ಮನಿಯಲ್ಲಿ ಗ್ಲೋಬಲ್ ಸಮಿಟ್ ನಡೆಸಿದ್ದ ಟಿವಿ9 ನೆಟ್ವರ್ಕ್ ಈ ವರ್ಷ ಯುಎಇಯಲ್ಲಿ ಆಯೋಜಿಸಿದೆ. ಇಂದು ಗುರುವಾರ 8 ಗಂಟೆಯವರೆಗೂ ವಿವಿಧ ಉಪನ್ಯಾಸ, ಚರ್ಚಾ ಕಾರ್ಯಕ್ರಮಗಳು ನಡೆಯಲಿವೆ. ಭಾರತ ಮತ್ತು ಯುಎಐ ಮಧ್ಯೆ ಪ್ರಬಲ ವ್ಯಾಪಾರ ಸಂಬಂಧ ಇರುವುದು, ಹಾಗೂ ಯುಎಇಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ಸಮುದಾಯದವರು ನೆಲಸಿರುವುದು ನ್ಯೂಸ್9 ಗ್ಲೋಬಲ್ ಸಮಿಟ್ (News9 Global Summit) ಆಯೋಜನೆಗೆ ಪ್ರಶಸ್ತ ಸ್ಥಳವೆನಿಸಿದೆ. ಎರಡೂ ದೇಶಗಳ ನಡುವಿನ ಸಂಬಂಧ ಹೇಗಿದೆ, ಅದನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹೇಗೆ ಎಂಬಿತ್ಯಾದಿ ವಿಚಾರಗಳು ಈ ಸಮಿಟ್​​ನ ಮುಖ್ಯ ಅಜೆಂಡಾ ಆಗಿವೆ. ತಾಜ್ ದುಬೈ ಹೋಟೆಲ್​​ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಯುಎಇಯಲ್ಲಿ 36 ಲಕ್ಷ ಭಾರತೀಯ ಸಮುದಾಯದವರಿದ್ದಾರೆ. ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಭಾರತೀಯರು ಯುಎಇ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವುದು ವಾಸ್ತವ. ಹಾಗೆಯೇ, ಯುಎಇಯಲ್ಲಿ ಇರುವ ಭಾರತೀಯರು ತಮ್ಮ ಕುಟುಂಬಗಳಿಗೆ ಕಳುಹಿಸುವ ಹಣದಿಂದ ಭಾರತದ ಆರ್ಥಿಕತೆಗೂ ಪುಷ್ಟಿ ಕೊಡುತ್ತಿದೆ. ಭಾರತ ಮತ್ತು ಯುಇಎ ಮಧ್ಯೆ ಸಾಕಷ್ಟು ಕೊಡುಕೊಳ್ಳು ವ್ಯವಹಾರ ಮತ್ತು ಸೌಹಾರ್ದಯುತ ಸಂಬಂಧ ನೆಲಸಿದೆ.

ಕಾರ್ಯಕ್ರಮದ ಲೈವ್ ವೀಕ್ಷಿಸಿ

ಕಳೆದ ವರ್ಷ ನ್ಯೂಸ್9 ಗ್ಲೋಬಲ್ ಸಮಿಟ್ ಜರ್ಮನಿಯಲ್ಲಿ ಪದಾರ್ಪಣೆಗೊಂಡಿತ್ತು. ಟಿವಿ9 ನೆಟ್ವರ್ಕ್ ಗ್ರೂಪ್ ಇತ್ತೀಚಿನ ವರ್ಷಗಳಿಂದ ಸಾಕಷ್ಟು ಜಾಗತಿಕ ಮತ್ತು ರಾಷ್ಟ್ರೀಯ ಸಮಾವೇಶಗಳನ್ನು ಮಾಡಿ ಗಮನ ಸೆಳೆದಿದೆ. ಬೇರೆ ಮಾಧ್ಯಮಗಳಿಗೂ ಮಾದರಿ ಎನಿಸಿದೆ.

ಯುಎಇಯಲ್ಲಿ ನ್ಯೂಸ್9 ಗ್ಲೋಬಲ್ ಸಮಿಟ್​ನ ಕಾರ್ಯಕ್ರಮದ ವೇಳಾಪಟ್ಟಿ

  • ಬೆಳಗ್ಗೆ 10 ಗಂಟೆಯ ನಂತರ: ಟಿವಿ9 ನೆಟ್ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರಿಂದ ಸ್ವಾಗತ ಭಾಷಣ
  • ಭಾರತ-ಯುಎಐ ಸಹಭಾಗಿತ್ವದ ಬಗ್ಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಂದ ಭಾಷಣ
  • ಯುಎಇಗೆ ಭಾರತೀಯ ರಾಯಭಾರಿಯಾಗಿರುವ ಸಂಜಯ್ ಸುಧೀರ್ ಅವರಿಂದ ಭಾಷಣ
  • ಭಾರತ-ಯುಎಇ ವ್ಯಾಪಾರ ಮತ್ತು ತಂತ್ರಜ್ಞಾನ ಸಂಬಂಧ ಬಗ್ಗೆ ಚರ್ಚಾ ಕಾರ್ಯಕ್ರಮ. ದುಬೈನ ಭಾರತೀಯ ಕೌನ್ಸುಲ್ ಜನರಲ್ ಸತೀಶ್ ಸಿವನ್, ಹಮ್ದನ್ ಅಲ್​ಶಂಸಿ, ಸಿದ್ಧಾರ್ಥ್ ಬಾಲಚಂದ್ರನ್, ನೋವಾ ರಫೋರ್ಡ್, ಅಮೇಯ ಪ್ರಭು ಅವರಿಂದ ಭಾಗಿ.
  • ಐಎಂಇಸಿ ವಿಚಾರದ ಬಗ್ಗೆ ಚರ್ಚಾ ಕಾರ್ಯಕ್ರಮ. ಟ್ರಾನ್ಸ್​​ವರ್ಲ್ಡ್ ಗ್ರೂಪ್ ಛೇರ್ಮನ್ ರಮೇಶ್ ಎಸ್ ರಾಮಕೃಷ್ಣನ್, ಯುಎಸ್​​​ಐಎಸ್​​ಪಿಎಫ್ ಸಿಇಒ ಮುಕೇಶ್ ಆಘಿ, ಅಮ್ಜದ್ ತಾಹ ಅವರು ಮಾತನಾಡಲಿದ್ದಾರೆ.
  • ಹೊಸ ವಿಶ್ವ ಶ್ರೇಣಿ ಬಗ್ಗೆ ವಿಚಾರ ವಿನಿಮಯ: ಲವೀಶ್ ಭಂಡಾರಿ, ಜಯಂತ್ ದಾಸಗುಪ್ತ, ಸುರೇಶ್ ವೈದ್ಯನಾಥನ್, ಅಜಯ್ ಬಿಂದ್ರೂ ಅವರಿಂದ ಚರ್ಚೆ.
  • ಭಾರತ-ಯುಎಇ ವ್ಯಾಪಾರ ಸಂಬಂಧದ ಬಗ್ಗೆ ವಿಚಾರ ಮಂಡನೆ: ಯುಎಇ ಸಚಿವಾಲಯದ ಕಾರ್ಯದರ್ಶಿ ಎಚ್.ಇ. ಅಬ್ದುಲ್ ಅಜೀಜ್ ಅಲ್ ನುವೇಮಿ ಅವರಿಂದ ಭಾಷಣ.
  • ದುಬೈನಲ್ಲಿ ಹೂಡಿಕೆ ಅವಕಾಶ: ಈ ವಿಚಾರದ ಬಗ್ಗೆ ಉದ್ಯಮಿ ಎಚ್.ಇ. ಫಾಹದ್ ಅಲ್ ಗೆರ್ಗಾವಿ ಅವರಿಂದ ಭಾಷಣ.
  • ಮಧ್ಯಾಹ್ನದ ನಂತರ ಬಾಲಿವುಡ ನಟ ಹಾಗೂ ಹೂಡಿಕೆದಾರರೂ ಆದ ವಿವೇಕ್ ಒಬೇರಾಯ್ ಅವರಿಂದ ಭಾಷಣ.
  • ಎಐ ವಿಚಾರದ ಬಗ್ಗೆ ಚರ್ಚೆ: ಉದ್ಯಮಿಗಳಾದ ಅರ್ಜುನ್ ಪ್ರಸಾದ್, ಅಬೇದ್ ಬೆನೈಚೌಚೆ, ಕುಲ್ದೀಪ್ ಮಿರಾನಿ, ಸತ್ಯಮಿತ್ರ ಮಾನ್ ಅವರು ಭಾಗಿ.
  • ಭಾರತ-ಯುಎಇ ಸ್ಟಾರ್ಟಪ್ ಕಾರಿಡಾರ್ ವಿಚಾರದ ಬಗ್ಗೆ ವಿಚಾರ ವಿನಿಮಯ: ಸೋಮದತ್ತ ಸಿಂಗ್, ಡಾ ಸುವಾದ್ ಅಲ್ ಶಂಸಿ ಭಾಗಿ.
  • ಆಲ್ಟರ್ನೇಟ್ ಇನ್ವೆಸ್ಟ್​ಮೆಂಟ್ ಬಗ್ಗೆ ಚರ್ಚೆ: ಆಂಡ್ರ್ಯೂ ನೇಯ್ಲರ್, ಮುರಳಿ ಮಲಯಪ್ಪನ್, ಪಂಕಜ್ ರಜ್ದಾನ್, ಫಿರೋಜ್ ಅಜೀಜ್ ಭಾಗಿ.
  • ಡೈವರ್ಸಿಟಿ ಡಿವಿಡೆಂಡ್ ಥೀಮ್ ಬಗ್ಗೆ ಚರ್ಚೆ: ಕ್ಲಾಡಿಯಾ ಪಿಂಟೋ, ಶಾಲಿನಿ ಪಸ್ಸಿ ಭಾಗಿ.
  • ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್ ಅವರಿಂದ ಏಕ್ತಾ ಕಪೂರ್ ಮತ್ತು ಸುನೀಲ್ ಶೆಟ್ಟಿ ಅವರೊಂದಿಗೆ ಸಂವಾದ ಕಾರ್ಯಕ್ರಮ.
  • ರಾತ್ರಿ 10 ಗಂಟೆಯವರೆಗೂ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮಗಳು ನಡೆಯುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:39 am, Thu, 19 June 25