ಇಂದು ನ್ಯೂಸ್​9 ಜಾಗತಿಕ ಶೃಂಗಸಭೆಯ ಅಂತಿಮ ದಿನ, ಫುಟ್ಬಾಲ್ ಪಂದ್ಯ

ದೇಶದ ನಂಬರ್​1 ನ್ಯೂಸ್​ ನೆಟ್​ವರ್ಕ್​ ಟಿವಿ9 ಹಮ್ಮಿಕೊಂಡಿರುವ ನ್ಯೂಸ್​9 ಜಾಗತಿಕ ಶೃಂಗಸಭೆ ಅಂತಿಮ ಘಟ್ಟಕ್ಕೆ ಬಂದಿದೆ. ಜರ್ಮನಿಯ ಸ್ಟಟ್​ಗಾರ್ಟ್​ನಲ್ಲಿ ನಡೆಯುತ್ತಿದೆ. ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ: ಜಾಗತಿಕ ಪ್ರಕಾಶಮಾನ ತಾಣದ ಒಳಗೆ ವಿಷಯದ ಕುರಿತು ಮಾತನಾಡಿದರು.

ಇಂದು ನ್ಯೂಸ್​9 ಜಾಗತಿಕ ಶೃಂಗಸಭೆಯ ಅಂತಿಮ ದಿನ, ಫುಟ್ಬಾಲ್ ಪಂದ್ಯ
ಶೃಂಗಸಭೆ
Follow us
ನಯನಾ ರಾಜೀವ್
|

Updated on: Nov 23, 2024 | 9:11 AM

ದೇಶದ ನಂಬರ್​1 ನ್ಯೂಸ್​ ನೆಟ್​ವರ್ಕ್​ ಟಿವಿ9 ಹಮ್ಮಿಕೊಂಡಿರುವ ನ್ಯೂಸ್​9 ಜಾಗತಿಕ ಶೃಂಗಸಭೆ ಅಂತಿಮ ಘಟ್ಟಕ್ಕೆ ಬಂದಿದೆ. ಜರ್ಮನಿಯ ಸ್ಟಟ್​ಗಾರ್ಟ್​ನಲ್ಲಿ ನಡೆಯುತ್ತಿದೆ. ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ: ಜಾಗತಿಕ ಪ್ರಕಾಶಮಾನ ತಾಣದ ಒಳಗೆ ವಿಷಯದ ಕುರಿತು ಮಾತನಾಡಿದರು.

ಶೃಂಗಸಭೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ಇಂದಿನ ಮಾಹಿತಿ ಯುಗದಲ್ಲಿ ಭಾರತದ ಮಾಧ್ಯಮ ಸಮೂಹ ಜರ್ಮನಿ ಮತ್ತು ಜರ್ಮನಿಯ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದರು. ಇದರೊಂದಿಗೆ ದೇಶ ಮತ್ತು ಜಗತ್ತಿನ ಇತರ ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಕಾರ್ಪೊರೇಟ್ ದಿಗ್ಗಜರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್​ದಾಸ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹವಾಮಾನ ಬದಲಾವಣೆ ಮತ್ತು AI ಕುರಿತು ಅವರು ಪ್ರಮುಖ ವಿಷಯಗಳನ್ನು ಹೇಳಿದರು. ಶೃಂಗಸಭೆಯ ಎರಡನೇ ದಿನದ ಅತಿಥಿಗಳ ಆಗಮನಕ್ಕೆ ಅವರು ಕೃತಜ್ಞತೆ ವ್ಯಕ್ತಪಡಿಸಿದರು. ಮೊದಲ ದಿನ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಧನ್ಯವಾದ ಅರ್ಪಿಸಿದರು.

ಮತ್ತಷ್ಟು ಓದಿ: ಜರ್ಮನ್, ಸಂಸ್ಕೃತದ ನಡುವೆ ಆಳವಾದ ಸಂಬಂಧವಿದೆ: ಟಿವಿ9 ನೆಟ್​ವರ್ಕ್​ ಎಡಿಟೋರಿಯಲ್ ಡೈರೆಕ್ಟರ್ ಹೇಮಂತ್ ಶರ್ಮಾ

ಶೃಂಗಸಭೆಯ ಕೊನೆಯ ದಿನ ಇಂದು ಅಂದರೆ ಶನಿವಾರ ಶೃಂಗಸಭೆಯ ಮೂರನೇ ಮತ್ತು ಕೊನೆಯ ದಿನವಾಗಿದೆ. ಇಂದು VfB Stuttgart ಮತ್ತು VfL Bochum ನಡುವೆ ಫುಟ್ಬಾಲ್ ಪಂದ್ಯ ನಡೆಯಲಿದೆ.

ಭಾರತ-ಜರ್ಮನಿ ಕೃಷಿ ಕ್ಷೇತ್ರದಲ್ಲಿ ಪರಸ್ಪರ ಸಹಾಯ ಮಾಡಬಹುದು ಟಿವಿ9 ಆಯೋಜಿಸಿದ್ದ ಎರಡನೇ ನ್ಯೂಸ್ 9 ಜಾಗತಿಕ ಶೃಂಗಸಭೆಯಲ್ಲಿ ಜರ್ಮನಿಯ ಆಹಾರ ಮತ್ತು ಕೃಷಿ ಸಚಿವ ಸೆಮ್ ಒಜ್ಡೆಮಿರ್ ಅವರು AI ಕುರಿತು ಮಾತನಾಡಿದರು. ಈ ಮೂಲಕ ಕೃಷಿ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯುವ ಬಗ್ಗೆ ಮಾತನಾಡಿದರು. ಎಐಯೊಂದಿಗೆ ಭಾರತ ಮತ್ತು ಜರ್ಮನಿ ಕೃಷಿ ವಲಯದಲ್ಲಿ ಪರಸ್ಪರ ಸಹಾಯ ಮಾಡಬಹುದು ಎಂದು ಓಜ್ಡೆಮಿರ್ ಹೇಳಿದರು.

Mercedes-Benz ಇಂಡಿಯಾದ MD ಮತ್ತು CEO ಸಂತೋಷ್ ಅಯ್ಯರ್ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಡ್ರೈವಿಂಗ್ ಎ ಬಿಲಿಯನ್ ಆಸ್ಪಿರೇಷನ್ ವಿಷಯದ ಕುರಿತು ಮಾತನಾಡಿದ ಅವರು, ಭಾರತದಲ್ಲಿ ನಾವು 20 ಸಾವಿರ ಐಷಾರಾಮಿ ಕಾರುಗಳ ಮಾರಾಟದ ಅಂಕಿಅಂಶವನ್ನು ತಲುಪಿದ್ದೇವೆ. ಭಾರತದಲ್ಲಿ ಐಷಾರಾಮಿ ಜೀವನಶೈಲಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. ತಮ್ಮ ಭಾಷಣದಲ್ಲಿ ಅಯ್ಯರ್ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಒತ್ತು ನೀಡಿದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಶೃಂಗಸಭೆಯಲ್ಲಿ ಪಾಲ್ಗೊಂಡರು. ತಮ್ಮ ಭಾಷಣದಲ್ಲಿ ಅವರು ಜರ್ಮನ್ ಕಂಪನಿಗಳಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಕರೆ ನೀಡಿದರು. ಕರ್ನಾಟಕದಲ್ಲಿ ಹೂಡಿಕೆಗೆ ಸೂಕ್ತ ವಾತಾವರಣವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಭೆ ನಡೆಯಲಿದ್ದು, ಇದರಲ್ಲಿ ಜರ್ಮನಿ ಪಾಲುದಾರ ರಾಷ್ಟ್ರವಾಗಿ ಭಾಗವಹಿಸಲಿದೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಶೃಂಗಸಭೆಯಲ್ಲಿ ಪಾಲ್ಗೊಂಡರು.  ಹೂಡಿಕೆಯ ವಿಷಯದಲ್ಲಿ ವಿಶ್ವದ ಕಂಪನಿಗಳಿಗೆ ಗುಜರಾತ್ ಅತ್ಯಂತ ಆದ್ಯತೆಯ ತಾಣವಾಗಿದೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯು ಗುಜರಾತ್ ಅನ್ನು ಹೂಡಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಲು ಸಹಾಯ ಮಾಡಿದೆ ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?