Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

Rabindranath Tagore ; ಕಣ್ಣೆದುರಿನ ತಮ್ಮ ನವವಧುವಿಗಿಂತ ಭವಿಷ್ಯದಲ್ಲಿ ಹುಟ್ಟಬಹುದಾಗಿದ್ದ ತಮ್ಮ ಮಕ್ಕಳ ಮುಖಗಳನ್ನೇ ಅವರು ಹೆಚ್ಚು ಸ್ಪಷ್ಟವಾಗಿ ಕಂಡಿದ್ದರು. ಅಂತರಪಟ ಸರಿದಾಗ ವಧೂವರರು ಪರಸ್ಪರ ನೋಡಲು ಆತುರರಾಗಿರುತ್ತಾರೆಯೇ ಹೊರತು ಪ್ರಾಯಶಃ ಇಂಥ ದೂರದೃಷ್ಟಿ ಇರುವುದಿಲ್ಲ.

Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’
ರವೀಂದ್ರನಾಥ ಟ್ಯಾಗೋರ್, ರೇಣುಕಾ ನಿಡಗುಂದಿ
Follow us
ಶ್ರೀದೇವಿ ಕಳಸದ
|

Updated on:Mar 25, 2022 | 1:27 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ದೇಶಕಾಲವನ್ನೂ ಮೀರಿ ನಿಲ್ಲುವ ರವೀಂದ್ರನಾಥ ಟ್ಯಾಗೋರರ ಭಾಷೆ ಕಾವ್ಯದಷ್ಟು ಮಧುರ ಮತ್ತು ಮೃದು. ನೊಬೆಲ್ ಪ್ರಶಸ್ತಿ ಪಡೆದ ಇವರು ವಿಶ್ವಮಾನವ ಕವಿಯಷ್ಟೇ ಅಲ್ಲ, ಮಹತ್ವದ  ಕಥೆಗಾರ, ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ ಮತ್ತು ಚಿತ್ರಕಲಾವಿದರೂ ಆಗಿದ್ದರು. “ಕಾಬೂಲಿವಾಲಾ” ರವೀಂದ್ರರ ಶ್ರೇಷ್ಠ ಕಥೆಗಳಲ್ಲಿ ಮುಖ್ಯವಾದದ್ದು. ಈ ಕಥೆ ವಿಶ್ವದ ಸರ್ವಶ್ರೇಷ್ಠ ಕಥೆಗಳ ಸಾಲಿಗೆ ಸಲ್ಲಿದೆ. ಅವರ ಪ್ರತಿಯೊಂದೂ ಕಥೆಯೂ ಮಾನವೀಯ ಪ್ರೇಮದ ಮೂಸೆಯಿಂದ  ಜನಸಾಮಾನ್ಯರ ಬದುಕನ್ನು, ಸಮಾಜದ ತರತಮಗಳನ್ನು, ಮನುಷ್ಯ ಸಂಬಂಧಗಳ ಸ್ವಾರ್ಥ ಪೊಳ್ಳುತನಗಳನ್ನು ಶೋಧಿಸಿ ಚಿಂತನೆಗೆ ಹಚ್ಚುತ್ತವೆ. ಟಾಲಸ್ಟಾಯ್ ಕೂಡ ಸಾಮಾನ್ಯರ ಕಥೆಗಳನ್ನು ಬರೆದವರು. ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎಂಬ ಕುವೆಂಪು ತಮ್ಮ ಕಾದಂಬರಿಯಲ್ಲಿ ಧೀಮಂತ ಸ್ತ್ರೀಯರನ್ನು ಅಂತಃಕರಣದಿಂದ ಚಿತ್ರಿಸಿದರು. ಪ್ರಸ್ತುತ ರವೀಂದ್ರನಾಥ್ ಟ್ಯಾಗೋರರ “ಪುತ್ರಯಜ್ಞ” ಕಥೆ ನನ್ನ ಮನಸ್ಸನ್ನು ಆವರಿಸಿದ್ದು ಅಲ್ಲಿನ ಮಾನವೀಯ ಮೃದು ಸಂವೇದನೆಯ ಕಾರಣಕ್ಕೆ. ಪ್ರಿತೃಪ್ರಧಾನ ವ್ಯವಸ್ಥೆಯಲ್ಲಿ “ಗಂಡು ಸಂತಾನ” ದಿಂದಲೇ ಸದ್ಗತಿ ಎನ್ನುವ ಮೌಢ್ಯಕ್ಕೆ.

ಕಥೆ : ಪುತ್ರಯಜ್ಞ | ಮೂಲ : ರವೀಂದ್ರನಾಥ ಟ್ಯಾಗೋರ | ಕನ್ನಡಕ್ಕೆ : ರೇಣುಕಾ ನಿಡಗುಂದಿ    

(ಭಾಗ 1)

ಇಡೀ ಹಳ್ಳಿಗೇ ವೈದ್ಯನಾಥರು ಅತಿ ತಿಳಿವಳಿಕೆಯ ವ್ಯವಹಾರಸ್ಥ ವ್ಯಕ್ತಿಯಾಗಿದ್ದರು. ಆದುದರಿಂದಲೇ ಅವರು ವರ್ತಮಾನದ ಎಲ್ಲಾ ಕೆಲಸಕಾರ್ಯಗಳನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಒಂದು  ದೂರದೃಷ್ಟಿಯಿಂದಲೇ ಮಾಡುತ್ತಿದ್ದರು. ಅವರು ಲಗ್ನವಾದಾಗಲೂ ಕಣ್ಣೆದುರಿನ ತಮ್ಮ ನವವಧುವಿಗಿಂತ  ಮುಂದೆ ಭವಿಷ್ಯದಲ್ಲಿ ಹುಟ್ಟಬಹುದಾಗಿದ್ದ ತಮ್ಮ ಮಕ್ಕಳ ಮುಖಗಳನ್ನೇ ಹೆಚ್ಚು ಸ್ಪಷ್ಟವಾಗಿ ಕಂಡಿದ್ದರು.  ವಿವಾಹದ ಸಮಯದಲ್ಲಿ ಅಂತರಪಟ ಸರಿದಾಗ ವಧೂವರರು ಪರಸ್ಪರ ನೋಡಲು ಆತುರರಾಗಿರುತ್ತಾರೆಯೇ ಹೊರತು ಪ್ರಾಯಶಃ ಇಂಥ ದೂರದೃಷ್ಟಿ ಸಾಮಾನ್ಯವಾಗಿ ಇರುವುದಿಲ್ಲ. ಅವರು ಲೋಕದ ವ್ಯವಹಾರಗಳಲ್ಲಿ ಚತುರ ವ್ಯಕ್ತಿಯಾಗಿದ್ದರಿಂದಲೇ ಅವರಿಗೆ  ಮನಸ್ಸಿಗೆ ಹಿತಕೊಡುವ ಭಾವನಾತ್ಮಕ ಪ್ರೇಮಕ್ಕಿಂತ ಮುಂದೆ ತಮಗೆ ಪಿಂಡದಾನವನ್ನು ಮಾಡಬಲ್ಲ ಸಂತಾನವೇ ಅತ್ಯಂತ ಮಹತ್ವದ್ದಾಗಿತ್ತು. “ಪುತ್ರಾರ್ಥೆ ಕ್ರಿಯತೇ ಭಾರ್ಯಾ’  ಎನ್ನುವ ಲೋಕೋಕ್ತಿಯನ್ನು ಅಕ್ಷರಶಃ  ಪಾಲಿಸುವುದಕ್ಕಾಗಿಯೇ ಅವರು ವಿನೋದಿನಿಯನ್ನು ಲಗ್ನವಾಗಿದ್ದರು.

ಆದರೆ ಈ ಜಗತ್ತಿನಲ್ಲಿ ಅತಿ ಬುದ್ಧಿವಂತರೆನಿಸಿಕೊಂಡವರೇ ಮೋಸಹೋಗುತ್ತಾರೆ. ತುಂಬು ತಾರುಣ್ಯದ ವಿನೋದಿನಿ ತನ್ನ ಆ ಮಹತ್ವದ ಕರ್ತವ್ಯವನ್ನು ಪಾಲಿಸದೇ ಹೋದಾಗ ವೈದ್ಯನಾಥರಿಗೆ ಇನ್ನು ತಮಗೆ ‘ಘೋರ’ ನರಕದ ಬಾಗಿಲೇ ಗತಿಯೆನಿಸಿ ಅತ್ಯಂತ ಚಿಂತಿತರಾದರು. ತಮ್ಮ ಮರಣದ ನಂತರ ಈ ಅಪಾರ ಸಂಪತ್ತನ್ನು ಅನುಭೋಗಿಸುವವರಾರು? ಇದೇ ಚಿಂತೆಯಲ್ಲಿ ‘ಇದ್ದಾಗ ಉಣಲಿಲ್ಲ ಉಡಲಿಲ್ಲ’ ಎನ್ನುವಂತೆ ಆರಾಮವಾಗಿ ತಿಂದುಂಡು ತಮ್ಮ ಸಂಪತ್ತಿನ ಸುಖವನ್ನು ಅನುಭವಿಸುವ ಬದಲು ಅವರು ಸಾಯುವ ಮೊದಲೇ ಲೌಕಿಕದಿಂದ ವೈರಾಗ್ಯವನ್ನು ತಾಳಿದರು. ನಾನೂ ಮೊದಲೇ ಹೇಳಿಬಿಟ್ಟಿದ್ದೇನೆ, ಅವರಿಗೆ ವರ್ತಮಾನಕ್ಕಿಂತ ಭವಿಷ್ಯವೇ ಹೆಚ್ಚು ಮಹತ್ವದ್ದಾಗಿತ್ತು ಎಂದು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಒಂದು ಮುತ್ತು ಕೇಳಲಾಗಲಿಲ್ಲ, ಕೊಡಲೂ ಆಗಲಿಲ್ಲ, ನಾನು ಸ್ವತಂತ್ರಳೇ?

ಆದರೆ ಈಗಷ್ಟೇ ತಾರುಣ್ಯಕ್ಕೆ ಕಾಲಿಟ್ಟ ವಿನೋದಿನಿಯಿಂದ ಒಮ್ಮೆಗೇ ಈ ಪರಿಯ ಧಾರ್ಮಿಕ ಜ್ಞಾನವನ್ನು ಅಪೇಕ್ಷಿಸುವುದೂ ತರವಲ್ಲ. ಪಾಪ ಆಕೆಯ ಅತ್ಯಮೂಲ್ಯವಾದ ವರ್ತಮಾನ ಮತ್ತು ಈಗಷ್ಟೇ ಅರಳುತ್ತಿರುವ ಯೌವನ ಪ್ರೇಮದ ಸುಗಂಧವಿರದೇ ವ್ಯರ್ಥವಾಗಿ ಕಳೆದುಹೋಗುತ್ತಿತ್ತು, ಅವಳಿಗಂತೂ ಈ ಸ್ಥಿತಿಯೇ ಅತ್ಯಂತ ಶೋಚನೀಯವೆನಿಸುತ್ತಿತ್ತು. ಇಹದ ಮನಸಿನ ಹಸಿವೆಯ ಮುಂದೆ ಆಕೆ ಪರಲೋಕದ ಪಿಂಡದಾಹದ ವಿಷಯವನ್ನು ಮರೆತೇಬಿಟ್ಟಿದ್ದಳು. ಮನುವಿನ ಪವಿತ್ರ ನಿಯಮ ಮತ್ತು ಪತಿ ವೈದ್ಯನಾಥರ ಆಧ್ಯಾತ್ಮಿಕ ವ್ಯಾಖ್ಯಾನದ ದೆಸೆಯಿಂದ ಅವಳ ತಪಿತ ಮನಕ್ಕೆ ಸ್ವಲ್ಪವೂ ತೃಪ್ತಿಯೆಂಬುದು ಇದ್ದಿಲ್ಲ.

ಯಾರೇನು ಬೇಕಾದರೂ ಅನ್ನಲಿ, ಈ ಅವಸ್ಥೆಯಲ್ಲಿ ಜಗತ್ತಿನ ಎಲ್ಲಾ ಸುಖ ಹಾಗೂ ಕರ್ತವ್ಯಗಳಾಚೆಗೂ ಒಂದು ಮಿಡಿವ ಹೃದಯವಿದೆ. ಪ್ರೀತಿಸುವುದು ಮತ್ತು ಪ್ರೀತಿಸಲ್ಪಡಬೇಕು ಎಂಬುದು  ಹೆಣ್ಣಿನ ಸಹಜ  ಬಯಕೆಯಾಗಿರುತ್ತದೆ. ಆದರೆ ವಿನೋದಿನಿಯ ಭಾಗ್ಯದಲ್ಲಿ ಹೊಸ ಪ್ರೇಮದ ವಸಂತೋತ್ಸವಕ್ಕಿಂತ ಪತಿ, ಅತ್ತೆ ಮತ್ತು ಹಿರಿಯರ ಎತ್ತರದ ಆಕಾಶದಿಂದ  ಬೈಗುಳಗಳ ಆಲೀಕಲ್ಲುಗಳೇ ಸುರಿಯತೊಡಗಿದವು.  ಎಲ್ಲರೂ ಅವಳನ್ನು ಬಂಜೆಯ ಪಟ್ಟ ಕಟ್ಟತೊಡಗಿದರು. ಒಂದು ಹೂವಿನ ಗಿಡಕ್ಕೆ ಗಾಳಿ ಬೆಳಕು ಕಾಣದ ಕತ್ತಲ ಕೋಣೆಯೊಳಗಿಟ್ಟರೆ ಆ ಗಿಡದ ಅವಸ್ಥೆ ಏನಾಗಬೇಡ? ಅದೇ ಅವಸ್ಥೆ ವಿನೋದಿನಿಯ  ತಾರುಣ್ಯದಾಗಿತ್ತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ನೆರೆನಾಡ ನುಡಿಯೊಳಗಾಡಿ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 1:02 pm, Fri, 25 March 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ