ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಶಾಸಕರ 1 ತಿಂಗಳ ಸಂಬಳ ನೀಡುತ್ತೇವೆ: ಆರ್ ಅಶೋಕ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಒಂದು ತಿಂಗಳ ಸಂಬಳ ನೀಡುವುದಾಗಿ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ನಿಧಾನ ಪ್ರತಿಕ್ರಿಯೆಯನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ. ಕಾರ್ಯಕ್ರಮದ ಆಹ್ವಾನವಿಲ್ಲದಿರುವುದನ್ನು ಅವರು ವಿಷಾದಿಸಿದ್ದಾರೆ.
ಚಿನ್ನಾಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರ ಕುಟುಂಬಳಿಗೆ ಶಾಸಕರು, ವಿಧಾನಪರಿಷತ್ ಸದಸ್ಯರು ಒಂದು ತಿಂಗಳ ಸಂಬಳ ನೀಡುತ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಹಣವನ್ನು ಕೊಡುತ್ತೇವೆ. ರಾಜ್ಯ ಸರ್ಕಾರ ಪರಿಹಾರ ಕೊಡುವುದರಲ್ಲಿ ಮೀನಮೇಷ ಎಣಿಸಿದೆ ಎಂದು ವಾಗ್ದಾಳಿ ಮಾಡಿದರು.
ಇದು ಸರ್ಕಾರಿ ಕಾರ್ಯಕ್ರಮ ಅಂತ ಅವರೇ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಾರ್ಯಕ್ರಮಕ್ಕೆ ಆಮಂತ್ರಣ ಇರಲಿ, ನನಗೆ ಒಂದು ಕಾಲ್ ಸಹ ಮಾಡಲಿಲ್ಲ. ನಾನು ಬಿಡಿ, ನಮ್ಮ ಉಪಾಧ್ಯಕ್ಷರಿಗಾದರೂ ಆಹ್ವಾನ ನೀಡಬೇಕಿತ್ತು. ಲೋಕೋಪಯೋಗಿ ಇಲಾಖೆ ಕೂಡ ಒಂದು ಪತ್ರ ಬರೆದಿದೆ. 60/40 ಕಾರ್ಯಕ್ರಮಕ್ಕೆ ವೇದಿಕೆ ಹಾಕಬೇಕು ಅಂತ ಹೇಳಿದ್ದರು. ವೇದಿಕೆಯಲ್ಲಿ 20 ರಿಂದ 35 ಜನರು ಇರಬೇಕು ಅಂತ ಹೇಳಿತ್ತು. ಆದರೆ, ಆಟಗಾರರನ್ನ ಬಿಟ್ಟು ವೇದರಿಕೆ ಮೇಲೆ ಸೇರಿದ್ದು ಎಷ್ಟು ಜನ? ಎಂದು ಪ್ರಶ್ನಿಸಿದರು.