Literature: ನೆರೆನಾಡ ನುಡಿಯೊಳಗಾಡಿ; ಒಂದು ಮುತ್ತು ಕೇಳಲಾಗಲಿಲ್ಲ, ಕೊಡಲೂ ಆಗಲಿಲ್ಲ, ನಾನು ಸ್ವತಂತ್ರಳೇ?

Indraneela Story by A. Vennila : ಉಳಿದವರು ಹೇಳುವುದು ಇರಲಿ, ಕಣ್ಣ ಏನು ಹೇಳುತ್ತಾನೆ? ನಾನು ಸಂಸಾರಕ್ಕೆ ಲಾಯಕ್ಕಿಲ್ಲ ಎಂದೂ ಕೈಬಿಡುತ್ತಾನೆಯೇ? ನಿನ್ನ ಜತೆ ಇದ್ದರೆ ಮಕ್ಕಳೂ ಹಾಳಾಗುತ್ತಾರೆ ಎಂದು ವಿಚ್ಛೇದನ ನೀಡುತ್ತಾನೋ?

Literature: ನೆರೆನಾಡ ನುಡಿಯೊಳಗಾಡಿ; ಒಂದು ಮುತ್ತು ಕೇಳಲಾಗಲಿಲ್ಲ, ಕೊಡಲೂ ಆಗಲಿಲ್ಲ, ನಾನು ಸ್ವತಂತ್ರಳೇ?
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
Follow us
ಶ್ರೀದೇವಿ ಕಳಸದ
|

Updated on:Mar 18, 2022 | 4:33 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : “ಇನ್ನೂ ಟೀ ಕೊಡಲಿಲ್ಲ. ಯಾವಾಗ ಟಿಫನ್ ಮಾಡೋದು? ಮೀಯುವ ಸಂಭ್ರಮ ದೀರ್ಘವಾಯಿತಲ್ಲಾ.” ಮತ್ತೆ ಕೆರಳಿಸಿದ. ಸ್ನಾನ ಮಾಡಿ ಇನ್ನೂ ಒದ್ದೆ ಹೋಗದ ಅವನನ್ನು ಎಳೆದು ಮುತ್ತು ಕೊಡಬೇಕೆಂದಿತ್ತು. ಮುತ್ತು ಕೊಡುವ ಕನಸಿನೊಂದಿಗೆ ನಗುತ್ತಾ ನಗುತ್ತಾ ಹಾದು ಹೋದ ನನ್ನನ್ನು, ಕಣ್ಣ ವ್ಯತ್ಯಾಸವಾಗಿ ನೋಡಿದ. ಆಫೀಸಿನಲ್ಲಿ ನಾನು ಹೇಳಿದ ಗುಡ್ ಮಾರ್ನಿಂಗ್ ಹೊಸದಾಗಿತ್ತು. ತಾಜಾವಾಗಿ ನಕ್ಕೆ. ಗೆಳತಿಯರನ್ನು ಮುಟ್ಟಿ ಮಾತನಾಡಿಸಿದೆ. ಚುರುಕಾಗಿ ಕೆಲಸ ಮಾಡಿದೆ. ನನ್ನ ದೇಹ ಲಘುವಾಗಿರುವಂತೆ, ಎಲ್ಲರ ಕಣ್ಣಿಗೂ ಹೊಳೆಯುವಂತೆ ಕಾಣುತ್ತಿದೆ ಎಂದು ನಾನೇ ಅಂದುಕೊಂಡೆ. ಸತ್ಯ ಮಾತ್ರ ಹತ್ತಿರ ಬಂದು ಕೇಳಿದಳು. “ಮೇಂ, ಐ ಲೈನರ್ ಹಾಕಿದ್ದೀರಾ? ಅಂದವಾಗಿದೆ ಮೇಂ. ಕಣ್ಣು ದೊಡ್ಡದಾಗಿರುವವರು ಹಾಕಿದರೆ ಮಾತ್ರ ಚೆನ್ನಾಗಿರುತ್ತೆ ಅಂತ ಹೇಳ್ತಾರೆ. ಬಟ್, ಅವರು ಕಾಡಿಗೆ ಹಾಕಿದ ಕಣ್ಣನ್ನು ಹೊರಳಿಸಿದರೆ ಭಯ ಆಗುತ್ತೆ. ಸಣ್ಣ ಕಣ್ಣಿಗೆ ಕಾಡಿಗೆ ಹಾಕಿದರೆ ಎದ್ದು ಕಾಣುತ್ತೆ. ಡೈಲಿ ಹಾಕಿ ಮೇಂ” ಎಂದಳು. ರೇವತಿ ಊಟದ ಸಮಯದವರೆಗೆ ಹತ್ತಿರ ಬರಲಿಲ್ಲ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 16)

“ಏನು ಭಾಮಾ, ವೆಡ್ಡಿಂಗ್ ಡೇ ನಾ? ಮಿಂಚ್ತಿದ್ದೀಯಲ್ಲಾ?” ಎಂದಳು ಊಟದ ವಿರಾಮದಲ್ಲಿ. “ವೆಡ್ಡಿಂಗ್ ಡೇ ಅಂದರೆ ಆಫೀಸಿಗೆ ಬರ್ತಾರೇನು? ಬರ್ತ್ಡೇ ಆಗಿರಬೇಕು” ಎಂದಳು ಉಷಾ. “ಮಕ್ಕಳು ಹುಟ್ಟು ಹಬ್ಬವನ್ನು ಮಾತ್ರ ಸೆಲಿಬ್ರೇಟ್ ಮಾಡ್ತೀನಿ ಅಂತ ಗೊತ್ತಲ್ಲಾ?” “ಇಲ್ಲವಲ್ಲಾ, ಈವತ್ತು ಏನೋ ವಿಶೇಷವಾಗಿದೆಯಲ್ಲಾ. ಹುಣಸೆಹಣ್ಣು ಹಾಕಿ ಉಜ್ಜಿದ ದೀಪದಂತೆ ಪಳಿಚ್ ಅಂತ ಇದ್ದೀಯಾ” ಎಂದಳು ರೇವತಿ. ನನ್ನ ಸಂತೋಷವನ್ನು ಅವರು ಗಮನಿಸಿದ್ದು ಮುಖದ ಮೇಲೆ ಹೆಮ್ಮೆ ಮೂಡಿಸಿತು. “ಹೀಗೆ ಬರಬೇಕು. ನಲವತ್ತು ವ್ಯಯಸ್ಸಾದರೇ ಸೂತಕದ ಮನೆಗೆ ಹೋಗುವ ಹಾಗೆಯೇ ಇರಬೇಕೇನು? ನನ್ನ ಮಕ್ಕಳೂ ಸಹ ಹೇಳ್ತಾರೆ. ಈ ಸೀರೆ ಉಡಬೇಡ ಅಮ್ಮ, ಆ ಸೀರೆ ಉಡಬೇಡ ಅಮ್ಮ ಅಂತ. ನನಗೆ ಇಷ್ಟವಾದುದನ್ನೇ ಉಡುತ್ತೇನೆ ಎಂದು ಹೇಳಿಬಿಡುತ್ತೇನೆ” ಎಂದಳು ರೇವತಿ. “ನಿನಗೆ ಇಷ್ಟವಾದಾಗ ನಿನ್ನ ಮನೆಯವರನ್ನು ಕರೆದಿದ್ದೀಯಾ?” ಎಂದು ಕೇಳಲು ಬಾಯಿಗೆ ಬಂದಿತು.

ಆಫೀಸಿನ ಗೆಳತಿಯರ ಬಳಿ ಸೀರೆಯ ಕಥೆಯನ್ನೆಲ್ಲಾ ಮಾತನಾಡಬಹುದು ಆದರೆ ಅಂತರಂಗದವರೆಗೆ ಹೋಗಲು ಸಾಧ್ಯವಿಲ್ಲ. ಬಾಯನ್ನು ಕಟ್ಟಿಹಾಕಿದೆ.

ಬಸ್ಸಿಗಾಗಿ ನಿಂತಿರುವಾಗ, ಬಸ್ಸಿನಲ್ಲಿ ಹತ್ತಿದ ಮೇಲೂ ನನ್ನ ವಯಸ್ಸಿನ ಹೆಂಗಸರನ್ನು ಗಮನಿಸಿದೆ. ಶೋಕ ತುಂಬಿದ ಮುಖಗಳು. ದೇಹದ ಬಗ್ಗೆ ಅಕ್ಕರೆಯಿಲ್ಲದ ಮುಖಗಳು. ಮಾತನಾಡಲೂ ನಗಲೂ ಏನೂ ಇಲ್ಲ ಎಂದು ಸೂಚನೆ ನೀಡುವ ಮುಖಗಳು. ಕಾಲುಗಳು ಮಂಕಾಗಿದ್ದವು. ಎಣ್ಣೆಯ ಪಸೆ ತುಂಬಿದ ಕುತ್ತಿಗೆಗಳು. ಅಪರೂಪಕ್ಕೆ ಕೆಲವು ಹೆಂಗಸರು ಪಳಿಚ್ ಅಂತ ಇದ್ದರು. ಎಳೆಯ ವಯಸ್ಸಿನ ಹುಡಿಗಿಯರು ಕಾರಣವೇ ಇಲ್ಲದೆ ಮಾತನಾಡಿ ನಗುತ್ತಿದ್ದರು. ದೊಡ್ಡ ವಯಸ್ಸಿನ ಹೆಂಗಸರು ಮನೆಯಲ್ಲಿ ಕಾಯುತ್ತಿರುವ ಕೆಲಸಗಳಿಗೆ ಬಸ್ಸಿನಲ್ಲೇ ಚಿಂತೆ ಮಾಡುತ್ತಿದ್ದರು. ಕೆಲಸಗಳ ಹೊರತು ಅವರ ಆಲೋಚನೆಗಳಲ್ಲಿ ಬೇರೇನೂ ಇರಲಿಲ್ಲ. ಇವರ ಬಳಿ ಒಂದು ದಿನವಾದರೂ ತನಗೆ ಹಿಡಿಸಿದ ಕಾಮವನ್ನು ಕೊಡು ಎಂದು ದೇಹ ಕೇಳಿದೆಯೇ? ದೇಹ ಕೇಳುವುದನ್ನು ಅರ್ಥಮಾಡಿಕೊಳ್ಳುವಷ್ಟು ಸಮಾಧಾನವಾಗಿದ್ದಾರೆಯೇ? ಎಣ್ಣೆಯಿಲ್ಲದೆ ಕರಕಲಾದ ಬತ್ತಿಯಂತೆಯೇ ಮಂಕಾದ ಗುಂಪಿನ ಪ್ರತಿನಿಧಿಯಾಗಿ ನಾನೂ ಇದ್ದೇ? ಇದ್ದೇ ಏನು, ಇದ್ದೇನೆ ? ಇರುವೆ? ಕಣ್ಣನ ಬಳಿ ಒಂದು ಮುತ್ತು ಕೇಳಲು ಆಗಲಿಲ್ಲ? ನಾನಾಗಿ ಒಂದು ಮುತ್ತು ಕೊಡಲೂ ಆಗಲಿಲ್ಲ. ನಾನು ಸ್ವತಂತ್ರ ಹಕ್ಕಿಯೇ?

ಭಾಗ 13 : Literature: ನೆರೆನಾಡ ನುಡಿಯೊಳಗಾಡಿ; ಹೆಂಗಸೂ ಅಂದರೆ ದೇಹವನ್ನು ಕಟ್ಟಿಹಾಕಬೇಕು, ಮನಸ್ಸನ್ನು ಅಡಗಿಸಿಡಬೇಕು

ಮನೆ ಒಂಟಿಯಾಗಿತ್ತು. ಎಂದೂ ಇರುವುದೇ. ಇಂದೇ ನೋಡುತ್ತಿದ್ದೇನೆ. ಯಾಳಿನಿಯೂ ಆದಿಯೂ ಬರಲು ಇನ್ನೂ ಒಂದು ಗಂಟೆ ಸಮಯವಿದೆ. ಬಾಗಿಲನ್ನು ಹಾಕಿ ಮಲಗುವ ಕೋಣೆಗೆ ಹೋದೆ. ನಿದ್ದೆ ಮಾಡಲೇ ಎಂಬ ಅನಿಸಿಕೆ. ನಿದ್ದೆ ಬರಲಿಲ್ಲ. ಚೀಲವನ್ನು ಮಂಚದ ಮೇಲೆ ಹಾಕಿ, ಆಳೆತ್ತರದ ಕನ್ನಡಿಯ ಮುಂದೆ ನಿಂತೆ. ಕನ್ನಡಿಯಲ್ಲಿ ಕಂಡ ಆಕಾರವನ್ನು ನೋಡಿದೆ. ಯಾವ ವ್ಯತ್ಯಾಸವೂ ತಿಳಿಯಲಿಲ್ಲ.

“ನಿನಗೆ ಏನು ಬೇಕು? ಯಾಕೆ ಹೀಗೆ ಹಿಂಸಿಸುತ್ತೀಯಾ?” ದೇಹ ಮೌನವಾಗಿತ್ತು. ಎಲ್ಲರಿಗೂ ಕಾಮ ಇಲ್ಲವೇ? ತೀರಿದರೂ ತೀರದೆ ಹೋದರೂ ಎಲ್ಲರೂ ಓಡುತ್ತಲೇ ಇದ್ದಾರಲ್ಲಾ? ಹೊಟ್ಟೆ ಹಸಿವಿಗೆ ಅನ್ನ ಇಲ್ಲ ಎಂದರೆ ಚಿಂತೆ ಮಾಡಬಹುದು. ಉಳಿದವರ ಬಳಿ ಪರಿತಾಪವನ್ನೂ ಸಹ ಗಳಿಸಬಹುದು.

ದೇಹ ಹಸಿದಿದೆ ಎಂದರೆ ಅದರ ಅರ್ಥವೇನು? ಸುತ್ತಲೂ ಇರುವವರು ಏನು ಹೇಳುತ್ತಾರೆ? ನನಗೆ ಏನು ಹೆಸರಿಡಬಹುದು? ದೇಹದ ಕೊಬ್ಬು ಹೆಚ್ಚಾಗಿದೆ ಎನ್ನಬಹುದೇ? ಉಳಿದವರು ಹೇಳುವುದು ಇರಲಿ, ಕಣ್ಣ ಏನು ಹೇಳುತ್ತಾನೆ? ನಾನು ಸಂಸಾರಕ್ಕೆ ಲಾಯಕ್ಕಿಲ್ಲ ಎಂದೂ ಕೈಬಿಡುತ್ತಾನೆಯೇ? ನಿನ್ನ ಜತೆ ಇದ್ದರೆ ಮಕ್ಕಳೂ ಹಾಳಾಗುತ್ತಾರೆ ಎಂದು ವಿಚ್ಛೇದನ ನೀಡುತ್ತಾನೋ?

ಕಣ್ಣನ ಬಳಿ ನಾನು ಏನು ಕೇಳುತ್ತೇನೆ? ತನ್ನಷ್ಟಕ್ಕೆ ಅರಳಿ ನಿಂತಿರುವ ದೇಹವನ್ನು ಸಂತೋಷಪಡಿಸು ಎನ್ನುತ್ತೇನೆ. ಎಣ್ಣೆ ಸುರಿದು, ಬತ್ತಿ ಹಾಕಿ, ಹಚ್ಚಿಟ್ಟ ದೀಪದಲ್ಲಿ, ಇನ್ನೂ ಬೆಳಕು ಬರುವಂತೆ ಕುಡಿ ಸರಿಮಾಡಬೇಕು. ಉರಿವ ಬೆಂಕಿಯನ್ನು ನೀರು ಸುರಿದು ಆರಿಸಬೇಕು. ದೇಹ ಹಣತೆಯೇ? ಬೆಂಕಿಯ ಜ್ವಾಲೆಯೇ? ಮೊಸಳೆಗಳೂ ತಿಮಿಂಗಲಗಳೂ ಆಳವಾದ ಕಡಲಿನಲ್ಲಿ ಈಜುವುದು ತಿಳಿಯದೆ ಈಜುವಂತೆ, ದೇಹದೊಳಗೆ ಕಾಮ ಶಾಂತವಾಗಿದೆ. ಕಾಮವನ್ನು ಗುರುತಿಸದೆ ಹೋದರೇ ಶಾಂತವಾಗಿ ಇರುತ್ತದೆಯೇ? ಹಾಗಲ್ಲವೇ ಹದಿನೈದು ವರ್ಷಗಳಿಂದ ಇದ್ದೇನೆ. ದೇಹದ ಕೂಡುವಿಕೆಗೂ ಸಹ ಕಾಮ ಎಂದು ಹೆಸರಿಟ್ಟು ನಾನು ಕರೆದಿರಲಿಲ್ಲ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 14 : Literature: ನೆರೆನಾಡ ನುಡಿಯೊಳಗಾಡಿ; ಕುರುಂಜಿ ಅರಳುವ ಕಾಲದಂತೆ, ದೇಹಕ್ಕೆ ಕಾಮ ಅರಳುವ ಕಾಲ ಇದೆಯೋ?

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi 

Published On - 3:58 pm, Fri, 18 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ