AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ಕುರುಂಜಿ ಅರಳುವ ಕಾಲದಂತೆ, ದೇಹಕ್ಕೆ ಕಾಮ ಅರಳುವ ಕಾಲ ಇದೆಯೋ?

Indraneela Story by A. Vennila : ಮೊಲೆಗಳನ್ನು ಹೇಗೆ ಉಜ್ಜಿ ಸ್ನಾನ ಮಾಡುತ್ತೇನೆ ಎಂಬುದು ನೆನಪೇ ಇಲ್ಲ. ಭಾರವಾಗಿದ್ದ ಮೊಲೆಗಳನ್ನು ಮಗುವನ್ನು ಎತ್ತಿ ಉಜ್ಜುವಂತೆ ಎಚ್ಚರಿಕೆಯಿಂದ ಉಜ್ಜಿದೆ. ತವಕದಿಂದ ಪುಟಿದು ತತ್ತರಿಸಿತು.

Literature: ನೆರೆನಾಡ ನುಡಿಯೊಳಗಾಡಿ; ಕುರುಂಜಿ ಅರಳುವ ಕಾಲದಂತೆ, ದೇಹಕ್ಕೆ ಕಾಮ ಅರಳುವ ಕಾಲ ಇದೆಯೋ?
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
ಶ್ರೀದೇವಿ ಕಳಸದ
|

Updated on:Mar 18, 2022 | 4:33 PM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಕಣ್ಣಲ್ಲಿ ನೀರು ತುಂಬಿಕೊಂಡಿತು. ಕಣ್ಣನ ಜತೆ ಜೀವಿಸಿದ್ದರೂ ಗಾಡ ನಿದ್ದೆಯಲ್ಲಿ ಕಾಣುವ ಕಣ್ಣ ಅನ್ಯನಾಗಿಯೇ ಕಂಡ. ಯಾಳಿನಿಗೂ ಆದಿಗೂ ನಡುವೆ ಇದ್ದ ಸಣ್ಣ ಅಂತರದಲ್ಲಿ ಭಾಮಾ ಮುದುಡಿ ಮಲಗಿಕೊಂಡಳು. ಎರಡು ಕೈಗಳನ್ನೂ ಆಗಲಿಸಿ ಇಬ್ಬರ ಮೇಲೂ ಹಾಕಿದಳು. ಕಣ್ಣೀರು ರೆಪ್ಪೆಯನ್ನು ಒದ್ದೆ ಮಾಡಿ, ಕೆನ್ನೆಯ ನೆನಸಿ, ಕುತ್ತಿಗೆಯವರೆಗೆ ಹರಿಯಿತು. ರಾತ್ರಿಯ ಅಂಜಿಕೆ ಮರೆಯಾಗಿ, ಬೆಳಗಿನಜಾವ ಉತ್ಸಾಹವಿತ್ತು. ಹೊಸ ದಿನದಂತೆ ತಾನೂ ಹೊಸದಾಗಿ ಹುಟ್ಟಿದಂತೆ ಇತ್ತು. ಯಾಳಿನಿಯೂ ಆದಿಯೂ ಏಳುವ ಮುನ್ನವೇ, ಹೆಸರುಬೇಳೆಯನ್ನು ಅರೆದು, ಮೊಸರಿನೊಂದಿಗೆ ಬೆರಸಿ ಮುಖಕ್ಕೆ ಹಚ್ಚಿಕೊಂಡೆ. ಕನ್ನಡಿಯ ಮುಂದೆ ಒಂದು ನಿಮಿಷ ನಿಂತು ಮುಖ ನೋಡಿ ಎಷ್ಟು ದಿನಗಳಾಯಿತು! ಚೆನ್ನಾಗಿ ಪರಾಂಬರಿಸಬೇಕು. ಫೇಸ್ ಪ್ಯಾಕ್ ಹಾಕಿಕೊಂಡು ಟಿವಿಯಲ್ಲಿ ತೋರಿಸುವಂತೆ ಒಂದು ಜಾಗದಲ್ಲಿ ಕೂರಲಾಗಲಿಲ್ಲ. ಕಣ್ಣಿನ ಪಕ್ಕ ಸೋರುವುದನ್ನು ಒರೆಸುತ್ತಾ ಅಡಿಗೆಯನ್ನು ಪ್ರಾರಂಭಿಸಿಬಿಟ್ಟೆ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 15) 

“ಅಯ್ಯೋ, ಏನಮ್ಮಾ ಭೂತದ ಹಾಗೆ” ಎಂದು ಅಪರೂಪಕ್ಕೆ ಮೊದಲು ಎದ್ದು ಬಂದ ಆದಿ ಕೂಗಿದ. “ಭೂತವೇ, ಆಂಡಾಳ್ ಭೂತ” :ಯಾಕಮ್ಮಾ ಇದು, ಯಾಕೆ ಹಚ್ಚಿಕೊಂಡಿದ್ದೀಯಾ?” “ಹೆಸರುಬೇಳೇ ಕಣೋ, ಮುಖ ಪಳಪಳಂತ ಹೊಳೆಯುತ್ತೆ” “ನೀನು ಚೆನ್ನಾಗಿಯೇ ಇದ್ದೀಯಲ್ಲಾ . ಕೇಶವನ ಅಮ್ಮನ ಮುಖ ತುಂಬ ಬ್ಲಾಕ್ ಮಾರ್ಕ್ ಇದೆ. ನೀನು ಫೇರ್ ಅಂಡ್ ಲವ್ಲಿ ಹಾಕ್ಕೋ ಅಮ್ಮ” “ಇದೇ ನ್ಯಾಚುರಲ್ ಮರಿ” ಹಲ್ಲುಜ್ಜಲು ಹೊರಗೆ ಹೊರಟುಹೋದ. ಯಾಳಿನಿ ಬಂದಕೂಡಲೇ ಬಾಯಿಬಿಟ್ಟು ಜೋರಾಗಿ ನಕ್ಕಳು. “ಯಾಕಮ್ಮಾ, ನಿನಗೆ ಈ ಕೆಲಸ? ಮುದುಕಿ ಆಗೋದೇ. ಫೇಸ್ ಪ್ಯಾಕ್ ಹಾಕ್ಕೊಂಡು ನೀನು ಯಾವ ಬ್ಯೂಟಿ ಕಾಂಪಿಟೇಷನ್-ಗೆ ಹೋಗ್ತೀಯಾ ?” “ಯಾಕೆ, ಕಾಂಪಿಟೇಷನ್-ಗೆ ಹೋದರೆ ಮಾತ್ರ ಸುಂದರವಾಗಿರಬೇಕೇ?” “ನೀನೂsss, ಕಾಂಪಿಟೇಷನಿಗೆ ಹೋದರೂ….” “ನನಗೆ ನಾನು ಚೆನ್ನಾಗಿ ಇರಬೇಕು. ಸುಂದರವಾಗಿರಬೇಕೂಂತ ಅರ್ಥ ಅಲ್ಲ” “ಅಪ್ಪ ಪಾಪ, ಬೆಳಗ್ಗೇನೇ ಅವರಿಗೆ ಶಾಕ್ ಇದೆ” ಕಣ್ಣ ಎಂಟು ಗಂಟೆಗೆ ಎದ್ದೇಳುತ್ತಾನೆ. ಹೆಸರುಬೇಳೆ ಹಚ್ಚಿಕೊಂಡು ಅರ್ಧ ಗಂಟೆಯಾಗಿದೆ. ಯಾಳಿನಿ ಹೇಳಿದಂತೆ, ಕಣ್ಣ ಬೆಳಗ್ಗೆಯೇ ಮನಸ್ಸಿಗೆ ನೋವಾಗುವಂತೆ ಏನಾದರೂ ಹೇಳಿಬಿಟ್ಟರೇ?”

ಟವಲನ್ನು ತೆಗೆದುಕೊಂಡು ಸ್ನಾನದ ಕೋಣೆಗೆಯೊಳಗೆ ಹೋದೆ. ಹೊಸದಾಗಿ ದೇಹವನ್ನು ನೋಡುವಂತೆ ಅಂದಿತ್ತು. ಪ್ರತಿ ಭಾಗವನ್ನು ಬಹಳ ಎಚ್ಚರಿಕೆಯಿಂದ ಉಜ್ಜಿ ಸ್ನಾನ ಮಾಡಿದೆ. ಕಾಲು ಬೆರಳುಗಳನ್ನು ಎರಡು ಸಲ ಉಜ್ಜಿ ಹೊಳೆಯುವಂತೆ ಮಾಡಿದೆ. ಮೊಳಕೈ, ಮೊಳಕಾಲುಗಳಲ್ಲಿ ಸ್ವಲ್ಪ ಕಪ್ಪಾಗಿದ್ದ ಜಾಗವನ್ನು ಬ್ರಷಿಂದ ಉಜ್ಜಿದೆ. ಮೊಲೆಗಳನ್ನು ಹೇಗೆ ಉಜ್ಜಿ ಸ್ನಾನ ಮಾಡುತ್ತೇನೆ ಎಂಬುದು ನೆನಪೇ ಇಲ್ಲ. ಭಾರವಾಗಿದ್ದ ಮೊಲೆಗಳನ್ನು ಮಗುವನ್ನು ಎತ್ತಿ ಉಜ್ಜುವಂತೆ ಎಚ್ಚರಿಕೆಯಿಂದ ಉಜ್ಜಿದೆ. ತವಕದಿಂದ ಪುಟಿದು ತತ್ತರಿಸಿತು.

ಭಾಗ 12 : Literature: ನೆರೆನಾಡ ನುಡಿಯೊಳಗಾಡಿ; ದೇಹಸುಖ ಬೇಕೆಂದು ಒಬ್ಬ ಸಂಸಾರಿ ಹೆಣ್ಣು ಕಾಯುತ್ತಿದ್ದಾಳೆ ಎಂದರೆ

ಕುರುಂಜಿ ಅರಳುವ ಕಾಲದಂತೆ, ದೇಹಕ್ಕೆ ಕಾಮ ಅರಳುವ ಕಾಲ ಇದೆಯೋ? ಎಷ್ಟು ವರ್ಷಕ್ಕೊಮ್ಮೆ ಅರಳುತ್ತದೆ? ಮುಟ್ಟು ನಿಲ್ಲುವ ಕಾಲ ಎಂದು ಡಾಕ್ಟರ್ ಹೇಳಿದರೋ? ದೇಹ ಅರಳುವುದನ್ನು ನಿಲ್ಲಿಸುವ ಕಾಲವೋ? ನಂದುವುದಕ್ಕೆ ಮೊದಲು ದೀಪ ಪ್ರಕಾಶವಾಗಿ ಉರಿಯುತ್ತದೆ ಎನ್ನುತ್ತಾರಲ್ಲಾ? ದೇಹವೂ ಕಾಮದ ಕೊನೆಯ ಘಟ್ಟದಲ್ಲಿ ಇದೆಯೇ? ಆನಂದದ ಉತ್ತುಂಗವನ್ನು ಕಂಡುಕೊಂಡು ಶಾಂತವಾಗುತ್ತದೆಯೋ? ಐವತ್ತು ವಯಸ್ಸಿನ ಮೇಲೆ ಕಾಮದ ಶೇಷ ಇರುವುದಿಲ್ಲವೋ? ವಿದೇಶಗಳಲ್ಲಿ ಅರವತ್ತು ವಯಸ್ಸಿನಲ್ಲಿ ಮಕ್ಕಳನ್ನು ಹೆರುವುದರ ಬಗ್ಗೆ ಓದಿದ್ದೇವಲ್ಲಾ? ಅವರ ದೇಹಗಳು ಮಾತ್ರ ಕಾಮಕ್ಕೆ ಸದಾ ಹೇಗೆ ಸಿದ್ಧವಾಗಿರುತ್ತದೆ? ಮಗು ಹೆರಲು ಯಾಕೆ ಕಾಮ? ತಪ್ಪು. ತಪ್ಪು. ಕಾಮವಿಲ್ಲದ ಕೂಡುವಿಕೆಯಲ್ಲೂ ಎಕ್ಸ್ ಕ್ರೋಮೊಸೋಂಗಳೂ, ವೈ ಕ್ರೋಮೊಸೋಂಗಳೂ ಒಂದಾಗಿ ಸೇರುತ್ತವೆ.

ಮುಟ್ಟು ನಿಂತು ಹೋದರೆ ಫಲ ನೀಡುವುದ ನಿಲ್ಲಿಸುವ ಮರದಂತೆ ದೇಹ ಆಗುತ್ತದೋ? ಸಾಯುವವರೆಗೆ ಹಸಿವಿದೆ. ಕಾಮ ಮಾತ್ರ ಯಾಕೆ ಇಲ್ಲದೆ ಹೋಗುತ್ತದೆ? ಇರಬಾರದೆಂದು ನಾವೇ ತೀರ್ಮಾನಿಸಿ ಬಿಡುತ್ತೇವೆಯೇ?

“ಒಳಗೇ ನಿದ್ರೆ ಮಾಡಿಬಿಟ್ಟೆಯಾ? ಗಂಟೆ ಎಷ್ಟಾಯಿತು ಗೊತ್ತೇ? ಅರ್ಧ ಗಂಟೆಯಿಂದ ಸ್ನಾನ ಮಾಡುತ್ತಿದ್ದೀಯ. ನೀನು ಸ್ನಾನ ಮಾಡುತ್ತಿದ್ದೆಯಾ? ಬಾತ್ರೂಮ್ ಸ್ನಾನ ಮಾಡುತ್ತಿದೆಯೇ?” ಕಣ್ಣನ ಕಾಡುಕೂಗು ಕೇಳಿಸಿತು. ಅವಸರದಿಂದ ನೀರು ಸುರಿದುಕೊಂಡು ಹೊರಗೆ ಬಂದೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 13 : Literature: ನೆರೆನಾಡ ನುಡಿಯೊಳಗಾಡಿ; ಹೆಂಗಸೂ ಅಂದರೆ ದೇಹವನ್ನು ಕಟ್ಟಿಹಾಕಬೇಕು, ಮನಸ್ಸನ್ನು ಅಡಗಿಸಿಡಬೇಕು

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi 

Published On - 3:46 pm, Fri, 18 March 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ