Literature: ನೆರೆನಾಡ ನುಡಿಯೊಳಗಾಡಿ; ದೇಹಸುಖ ಬೇಕೆಂದು ಒಬ್ಬ ಸಂಸಾರಿ ಹೆಣ್ಣು ಕಾಯುತ್ತಿದ್ದಾಳೆ ಎಂದರೆ

Literature: ನೆರೆನಾಡ ನುಡಿಯೊಳಗಾಡಿ; ದೇಹಸುಖ ಬೇಕೆಂದು ಒಬ್ಬ ಸಂಸಾರಿ ಹೆಣ್ಣು ಕಾಯುತ್ತಿದ್ದಾಳೆ ಎಂದರೆ
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ

Indraneela Story by A. Vennila : ರಾತ್ರಿಯಲ್ಲೇ ಸಾವಿರ ಶಬ್ದಗಳು ಕೇಳಿಸುತ್ತವೆ. ಸಣ್ಣ ಶಬ್ದವೂ ಸ್ಪಷ್ಟವಾಗಿ ಕೇಳುತ್ತದೆ. ಬೆಕ್ಕಿನ ಮೃದು ಪಾದಗಳ ಶಬ್ದ ಸಹ ಹತ್ತಿರದಲ್ಲಿ ಕೇಳಿಸುತ್ತದೆ. ಜಿರಳೆ ಪಟಪಟಿಸುವುದು, ದುಂಬಿಯ ರೆಕ್ಕೆಯ ಶಬ್ದ ಎಲ್ಲವೂ ಸ್ಪಷ್ಟವಾಗಿ ಕೇಳುತ್ತವೆ.

ಶ್ರೀದೇವಿ ಕಳಸದ | Shridevi Kalasad

|

Mar 18, 2022 | 3:14 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : “ಈ ಬಿಸಿಲಲ್ಲೇ ಆಟವಾಡುತ್ತಿದ್ದೀರಿ?” ದೊಡ್ಡಮ್ಮನ ದನಿ ದೂರದಿಂದ ಕೇಳಿದ ಕೂಡಲೇ ಗಾಬರಿಯಾಯಿತು. ಹೆದರಿ ಎದ್ದೆ. ಮಡಿಲಲ್ಲಿದ್ದ ಮಣ್ಣಿನ ಕುಡಿಕೆ ಕೆಳಗೆ ಬಿದ್ದು ಒಡೆದು ಹೋಯಿತು. ತುಂಬೆ ಹೂಗಳು ಚದುರಿ ಬಿದ್ದವು. ದೇಹ ನಡುಗಿತು. ಜಯಂಟ್ ವೀಲಿನಲ್ಲಿ ತಿರುಗುತ್ತಿರುವಾಗ, ಒಂದೇ ಎಳೆತಕ್ಕೆ ನಿಲ್ಲಿಸಿ ಇಳಿಸಿದಂತೆ ನೆಲೆ ತಪ್ಪಿ ನಿಂತೆ. “ಈ ಉಬ್ಬುಹಲ್ಲಿನ ಮುದುಕಿ ಮನೆಯಲ್ಲಿ ಹೇಳಿ ಬಿಡುತ್ತಾಳೆ ಕಣೇ, ಸಂಜೆ ಬರ್ತೀವಿ” ಸುಂದರಿಯೂ ಸುಮತಿಯೂ ಹೊರಟುಹೋದರು. ಉತ್ತರ ಹೇಳಲು ಆಗಲಿಲ್ಲ. ದೇಹ ಇನ್ನೂ ನೆಲಕ್ಕೆ ಇಳಿಯಲಿಲ್ಲ. ಎರಡು ಹೆಜ್ಜೆ ಹೋದ ಸುಂದರಿ ತಿರುಗಿ ನೋಡಿದಳು. ನನ್ನ ಕಾಲಿನ ಅಡಿಯಲ್ಲಿ ಬಾಲ ಆಡಿಸುತ್ತಾ ನಿಂತ ಮಣಿಯನ್ನು ನೋಡಿ, ‘‘ಮಣಿ ಇಷ್ಟು ಹೊತ್ತು ಎಲ್ಲೇ ಇತ್ತು?” ಕೇಳಿದಳು. “ನಾನು ನೋಡಲಿಲ್ಲವಲ್ಲಾ” ಎಂದೇ. “ಎಲ್ಲೋ ಕಂಡ ಕಡೆ ಬಾಯಿಟ್ಟು ಬಂದಿದೆ. ನಾಲಿಗೆ ಚಾಚಿಕೊಂಡು ನಿಂತಿದೆ ನೋಡು” ಎಂದು ಬೈದುಕೊಂಡೇ ನಡೆದಳು.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 13)

ತೆವಳುತ್ತಿದ್ದ ಸಣ್ಣ ಜೀರುಂಡೆಯನ್ನು ಗುರಿ ಇಟ್ಟು ಕಾದಿತ್ತು ಹಲ್ಲಿ. ಜೀವವಿಲ್ಲದ ಜಂತುವಿನಂತೆ ಗೋಡೆಗೆ ಅಂಟಿಕೊಂಡಿದ್ದ ಹಲ್ಲಿಯ ಪಕ್ಕದಲ್ಲಿ ಜೀರುಂಡೆ ಸರಿಯಿತು. ಮುಂದೆ ಹಲ್ಲಿ ಇರುವ ಎಚ್ಚರಿಕೆಯಲ್ಲಿ ಹಿಂತಿರುಗಿ ಹೋಯಿತು. ಮತ್ತೆ ಮರಳಿತು. ಆಗ ಹಲ್ಲಿ ಚಲನೆಯಿಲ್ಲದೆ ಇತ್ತು. ಜೀರುಂಡೆಗೆ ಏನು ತೋರಿತೋ, ಮತ್ತೆ ಹಿಂತಿರುಗಿತು. ಹಲ್ಲಿಯ ಕಡೆ ಮೆಲ್ಲಗೆ ಹೋಯಿತು. ಹಲ್ಲಿ ಸ್ವಲ್ಪವೂ ಚಲನೆಯಿಲ್ಲದೆ ಇತ್ತು. ಹಿಂಜರಿಯುತ್ತಾ ಜೀರುಂಡೆ ಮುಂದುವರೆಯಿತು. ಹಲ್ಲಿಗೂ ಜೀರುಂಡೆಗೂ ಅಂತರ ಕಡಿಮೆಯಾಯಿತು.

ಜೀರುಂಡೆ ತಲೆ ಎತ್ತಿ ಹಲ್ಲಿಯನ್ನು ನೋಡಿತು. ಹಲ್ಲಿಯ ಬಳಿ ಚಲನೆ ಇರಲಿಲ್ಲ. ಕಣ್ಣುಗಳು ಅರ್ಧ ತೆರೆದ ಹಾಗೆಯೇ ಇತ್ತು. ಜೀರುಂಡೆ ತನ್ನ ರೆಕ್ಕೆಯನ್ನು ಮೆಲ್ಲಗೆ ತೆರೆದು ಮುಚ್ಚಿತು. ಕೆಲವು ಕ್ಷಣ ತಡಮಾಡಿತು. ಬಂದ ದಾರಿಯಲ್ಲಿ ಹಿಂತಿರುಗಲು ಮುಂದಾಯಿತು ಜೀರುಂಡೆ. ತಿರುಗಿದ ಕ್ಷಣದಲ್ಲಿ ಹಲ್ಲಿ ನಾಲಿಗೆಯನ್ನು ಚಾಚಿತು. ಜೀರುಂಡೆ ಇದ್ದ ಜಾಗ ಖಾಲಿ ಜಾಗವಾಯಿತು. ಹಲ್ಲಿ ನಾಲಿಗೆಯನ್ನು ಹೊರಗೆ ಚಾಚಿದ್ದು, ಜೀರುಂಡೆ ಒಳಗೆ ಹೋದದ್ದೂ ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ ನಡೆದುಹೋಯಿತು.

ಕೋಣೆಯಲ್ಲಿ ವ್ಯಥೆ ತುಂಬಿತ್ತು. ರಾತ್ರಿಯ ನಿರಾಳತೆ ದುಃಖವನ್ನು ಹೆಚ್ಚುಮಾಡಿತು. ರಾತ್ರಿಯನ್ನು ತಮಾಷೆಯಾಗಿ ನೋಡುವುದು ಹೆದರಿಕೆಯನ್ನು ತಂದಿತು. ದೂರದಲ್ಲಿ ಕೇಳುವ ಬೆಕ್ಕಿನ ದನಿ ರಾತ್ರಿಗೆ ಅಸಾಧಾರಣ ವಾತಾವರಣವನ್ನು ತಂದಿತು. ಬೆಕ್ಕಿನ ಮೃದುವಾದ ದನಿಯನ್ನು ಕೇಳಿದ್ದೇನೆ. ಕಟುವಾದ ದನಿಯಲ್ಲಿ ಬೆಕ್ಕಿನ ಚೀರುವ ದನಿಯನ್ನು ಈವರೆಗೆ ಕೇಳಿ ಅರಿಯದ್ದು. ನಾಯಿಯ ಊಳೂ, ಬೆಕ್ಕಿನ ಚೀರುವಿಕೆಯೂ ರಾತ್ರಿಗೆ ಕ್ರೂರ ಮುಖವನ್ನು ಕೊಟ್ಟವು. ಕತ್ತಲು ಕೊಡುವ ಅಮಾನುಷ್ಯಕ್ಕೆ ಅಂಜಿಯೇ ರಾತ್ರಿ ಎಲ್ಲರೂ ನಿದ್ದೆ ಮಾಡಲು ಕಲಿತುಕೊಂಡರೋ!

ಭಾಗ 11 : Literature: ನೆರೆನಾಡ ನುಡಿಯೊಳಗಾಡಿ; ದೇವರನ್ನು ವಿವಾಹವಾದರೆ, ತನ್ನ ಅಗತ್ಯಕ್ಕೆ ಅವನನ್ನು ಕರೆಯಬಾರದೇ?

ಕತ್ತಲು ಯಾಕೆ ಭಯ ಮೂಡಿಸುತ್ತದೆ? ಹಗಲಿನಂತೆಯೇ ರಾತ್ರಿಯೂ ಕೆಲಸಗಳನ್ನು ಮಾಡುತ್ತಿದ್ದರೆ, ಕತ್ತಲಿನ ಭಯ ದೂರವಾಗುವುದಲ್ಲವೇ? ರಾತ್ರಿ ಕೆಲಸಕ್ಕೆ ಹೋಗಿ ಬರುವವರು ಕತ್ತಲನ್ನು ನೋಡಿ ಹೆದರುತ್ತಾರೆಯೇ? ಯಂತ್ರಗಳು ರಾತ್ರಿ, ಹಗಲು ನೋಡದೆ ಚಲಿಸುವಂತೆ ಮನುಷ್ಯ ಯಂತ್ರಗಳು ಚಲಿಸಲು ಸಾಧ್ಯವಿಲ್ಲವೇ?

ರಾತ್ರಿ ಶಾಂತವಾದದ್ದು ಎನ್ನುತ್ತೇವೆ. ರಾತ್ರಿಯಲ್ಲೇ ಸಾವಿರ ಶಬ್ದಗಳು ಕೇಳಿಸುತ್ತವೆ. ಸಣ್ಣ ಶಬ್ದವೂ ಸ್ಪಷ್ಟವಾಗಿ ಕೇಳುತ್ತದೆ. ಬೆಕ್ಕಿನ ಮೃದು ಪಾದಗಳ ಶಬ್ದ ಸಹ ಹತ್ತಿರದಲ್ಲಿ ಕೇಳಿಸುತ್ತದೆ. ಜಿರಳೆ ಪಟಪಟಿಸುವುದು, ದುಂಬಿಯ ರೆಕ್ಕೆಯ ಶಬ್ದ ಎಲ್ಲವೂ ಸ್ಪಷ್ಟವಾಗಿ ಕೇಳುತ್ತವೆ.

ರಾತ್ರಿಯನ್ನು ಜೀವನದಲ್ಲಿ ಗಮನಿಸಿ ಇರಲೇ ಇಲ್ಲ. ಮದುವೆಯಾದಾಗ ರಾತ್ರಿ ಪೂರ್ತಿ ಎಚ್ಚರವಾಗಿದ್ದೇನೆ. ಕಣ್ಣನ ಜತೆ ಮಾತನಾಡುವುದು ಕೂಡುವುದು ಹೀಗೆ ರಾತ್ರಿಗಳು ಕಳೆದಿವೆ. ರಾತ್ರಿಯ ಶಬ್ದಗಳೊಂದಿಗೆ ನಮ್ಮ ಸದ್ದುಗಳೂ ಕಲೆತಿವೆ. ರಾತ್ರಿಯ ಶಬ್ದಗಳನ್ನು ನಾವು ಕೇಳಿಯೇ ಇರಲಿಲ್ಲ. ಈಗತಾನೇ ಎಚ್ಚರಗೊಂಡಿದ್ದೇನೆ. ಈ ಒಂದು ವಾರದಲ್ಲಿ ನನ್ನೊಳಗೆ ಎಷ್ಟು ಬದಲಾವಣೆಗಳು.

ಒಳ್ಳೆಯದೇ? ಕೆಟ್ಟದ್ದೇ? ನನಗೆ ಒಳ್ಳೆಯದು ಮಾಡುತ್ತದೆಯೇ? ಹಳ್ಳಕ್ಕೆ ಬೀಳಿಸುತ್ತದೆಯೇ? ದೇಹ ಸುಖ ಬೇಕೆಂದು ಒಬ್ಬ ಸಂಸಾರಿ ಹೆಣ್ಣು ಕಾಯುತ್ತಿದ್ದಾಳೆ ಎಂದರೆ ಜನ ಉಗಿಯುವುದಿಲ್ಲವೇ?

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 12 : Literature: ನೆರೆನಾಡ ನುಡಿಯೊಳಗಾಡಿ; ಸಾವಿರ ಸಲ ಒಂದಾಗಿ ಕಲೆತ ದೇಹ ತನ್ನಿಚ್ಛೆಯಂತೆ ಮುತ್ತು ಕೊಡಬೇಕೆಂದರೆ

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi 

Follow us on

Related Stories

Most Read Stories

Click on your DTH Provider to Add TV9 Kannada