Music : ಭೀಮಪಲಾಸ; ಮಾರ್ಚ್ 20ರಿಂದ ಧಾರವಾಡದಲ್ಲಿ ಪಂ. ಭೀಮಸೇನ ಜೋಶಿ ಜನ್ಮಶತಮಾನೋತ್ಸವ ಸಂಗೀತ ಸಭೆ

Pt. Bhimsen Joshi Birth Centenary Concerts : ‘ಎಷ್ಟೋ ಊರುಗಳಲ್ಲಿ ತಡರಾತ್ರಿಯಾದರೂ, ಕಾರ್ಯಕ್ರಮ ಮುಗಿದರೂ ಸಭಾಂಗಣದ ಹೊರಗೆ ನೂರಾರು ಕಲಾರಸಿಕರು ಮತ್ತೂ ಶಾಸ್ತ್ರೀಯ ಸಂಗೀತ ಕೇಳಬೇಕೆಂಬ ಆಶಯ ವ್ಯಕ್ತಪಡಿಸುತ್ತಲೇ ಇರುತ್ತಿದ್ದರು.’ ಸಮೀರ ಜೋಶಿ

Music : ಭೀಮಪಲಾಸ; ಮಾರ್ಚ್ 20ರಿಂದ ಧಾರವಾಡದಲ್ಲಿ ಪಂ. ಭೀಮಸೇನ ಜೋಶಿ ಜನ್ಮಶತಮಾನೋತ್ಸವ ಸಂಗೀತ ಸಭೆ
ಪಂಡಿತ ಭೀಮಸೇನ ಜೋಶಿ
Follow us
ಶ್ರೀದೇವಿ ಕಳಸದ
|

Updated on:Mar 19, 2022 | 7:44 PM

Bhimapalas – Pt. Bhimsen Joshi Birth Centenary Concerts :ಭೀಮಪಲಾಸ – ಭೀಮಸೇನ್ ಜೋಶಿ ಜನ್ಮಶತಮಾನೋತ್ಸವ’ದ ಅಂಗವಾಗಿ ಮಾರ್ಚ್ 20ರಿಂದ 30ರವರೆಗೆ ಧಾರವಾಡದ ಸೃಜನಾ, ಅಣ್ಣಾಜಿರಾವ್ ಶಿರೂರ್​ ರಂಗಮಂದಿರದಲ್ಲಿ ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಹನ್ನೊಂದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ಜಿ.ಬಿ. ಜೋಶಿ ಸ್ಮಾರಕ ಪ್ರತಿಷ್ಠಾನ ಮತ್ತು ‘ಕ್ಷಮತಾ’ ಸಂಸ್ಥೆಯು ಜಂಟಿಯಾಗಿ ಆಯೋಜಿಸಿವೆ. ಈ ಕಾರ್ಯಕ್ರಮದಲ್ಲಿ ಸುಮಾರು 60 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಕಲಾವಿದರೊಂದಿಗೆ ವಿವಿಧ ರಾಜ್ಯಗಳಿಂದ ಆಗಮಿಸಲಿರುವ ಕಲಾವಿದರುಗಳ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದನ, ನೃತ್ಯವನ್ನು ಸವಿಯಲು ಧಾರವಾಡದ ಕಲಾರಸಿಕರು ಉತ್ಸುಕರಾಗಿ ಕಾಯುತ್ತಿದ್ದಾರೆ. ಜೊತೆಗೆ ಜಗತ್ತಿನ ಯಾವ ಮೂಲೆಯಿಂದಲೂ ಈ ಸಭಾಕಾರ್ಯಕ್ರಮಗಳ ನೇರಪ್ರಸಾರವನ್ನು Vividlipi YouTube ಮೂಲಕ ಯಾರೂ ಆಸ್ವಾದಿಸಬಹುದಾಗಿದೆ.  

‘ಕೊರೊನಾ ಕಾಲಘಟ್ಟದಲ್ಲಿಯೂ ನಮಗೆ ಇಷ್ಟೊಂದು ಜನಸ್ಪಂದನೆ, ಪ್ರೋತ್ಸಾಹ ಸಿಗುತ್ತದೆ ಎಂದು ಭಾವಿಸಿರಲೇ ಇಲ್ಲ. ಊರುಊರುಗಳಲ್ಲಿಯೂ ಭೀಮಸೇನ ಜೋಶಿಯವರ ಅಭಿಮಾನಿಗಳಿದ್ದಾರೆ. ಶಾಸ್ತೀಯ ಸಂಗೀತವನ್ನು ಕೇಳಲು ಎಲ್ಲಾ ವರ್ಗದ, ವಯೋಮಾನದವರು ತುದಿಗಾಲ ಮೇಲೆ ನಿಂತಿದ್ದಾರೆ. ಒಂದು ವರ್ಷದ ಈ ಕಾರ್ಯಕ್ರಮ ಮುಕ್ತಾಯದ ಹಂತಕ್ಕೆ ಬಂದರೂ ಬೇರೆ ಬೇರೆ ಊರುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಕೋರಿಕೆಗಳು ಬರುತ್ತಲೇ ಇವೆ’ ಎನ್ನುತ್ತಾರೆ ಪ್ರತಿಷ್ಠಾನದ ಖಜಾಂಚಿ ಸಮೀರ ಜೋಶಿ.

‘ಭೀಮಪಲಾಸ – ಭೀಮಸೇನ್ ಜೋಶಿ ಜನ್ಮಶತಮಾನೋತ್ಸವ’ದ ಅಂಗವಾಗಿ ಏರ್ಪಡಿಸಿದ ಮೊದಲ ಸಂಗೀತ ಸಭೆ ಧಾರವಾಡದಲ್ಲಿ 2021ರ ಫೆಬ್ರುವರಿ 7ರಂದು ನಡೆಯಿತು. ಪ್ರತೀ ತಿಂಗಳು ಬೇರೆ ಬೇರೆ ಕಲಾವಿದರಿಂದ ಪ್ರಸ್ತುತಗೊಳ್ಳುತ್ತಿದ್ದ ಈ ಸಂಗೀತ ಸಭೆ ಕ್ರಮೇಣ ಕುಮಟಾ, ಬೆಳಗಾವಿ, ಕುಂದಾಪುರ, ಪುತ್ತೂರು, ದಾವಣಗೆರೆ, ಹುಬ್ಬಳಿ ರಾಜ್ಯದ ವಿವಿಧ ಪ್ರಮುಖ ನಗರಗಳಲ್ಲಿ ಕಲಾರಸಿಕರ ಸಮ್ಮುಖದಲ್ಲಿ ಮತ್ತು ಆನ್​ಲೈನ್​ ನೇರಪ್ರಸಾರದಲ್ಲಿ ಪ್ರಸ್ತುತಗೊಂಡು ಜನಮನಸೂರೆಗೊಂಡಿತು.  

ಜನ್ಮಶತಮಾನೋತ್ಸವದ ಅಂಗವಾಗಿ ಏರ್ಪಡಿಸಿರುವ ಸಂಗೀತ ಸಭೆಗಳು ಮುಂದಿನ ದಿನಗಳಲ್ಲಿ ಹೊಸಪೇಟೆ, ಮಂಡ್ಯ ಮತ್ತು ಭೀಮಸೇನ ಜೋಶಿಯವರ ಹುಟ್ಟೂರಾದ ಗದಗ ಜಿಲ್ಲೆಯ ರೋಣ ಮತ್ತು ಅವರು ಸಂಗೀತಾಭ್ಯಾಸ ಮಾಡಿದ ಕುಂದಗೋಳದಲ್ಲಿ ಪ್ರಸ್ತುತಗೊಂಡು ಸಂಪನ್ನಗೊಳ್ಳಲಿವೆ.

‘ಪ್ರತೀ ಊರಿನಲ್ಲಿಯೂ ಸ್ಥಳೀಯ, ಕಿರಿಯ ಕಲಾವಿದರು ಮತ್ತು ಪರಊರಿನ ಹಿರಿಯ ಕಲಾವಿದರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದೆವು. ಆನ್​ಲೈನ್​ನಲ್ಲಿ ನೇರಪ್ರಸಾರದ ವ್ಯವಸ್ಥೆಯೂ ಇದ್ದಿದ್ದರಿಂದ ಸಾಕಷ್ಟು ಸ್ಥಳೀಯ ಪ್ರತಿಭೆಗಳು ಜಗತ್ತಿನಾದ್ಯಂತ ಸಂಗೀತರಸಿಕರನ್ನು ತಲುಪಲು ಅನುಕೂಲವಾಯಿತು. ಉಳಿದಂತೆ, ಪಂ. ವೆಂಕಟೇಶಕುಮಾರ್, ಪ್ರವೀಣ ಗೋಡ್ಖಿಂಡಿ, ಸಂಗೀತಾ ಕಟ್ಟಿ, ಜಯತೀರ್ಥ ಮೇವುಂಡಿ, ಕೈವಲ್ಯಕುಮಾರ್ ಅವರಿಗಿರುವ ಅಭಿಮಾನಿವರ್ಗವನ್ನು ವಿವರಿಸಲಸಾಧ್ಯ. ತಡರಾತ್ರಿಯಾದರೂ, ಕಾರ್ಯಕ್ರಮ ಮುಗಿದರೂ ಸಭಾಂಗಣದ ಹೊರಗೆ ನೂರಾರು ಕಲಾರಸಿಕರು ಮತ್ತೂ ಸಂಗೀತ ಕೇಳಬೇಕೆಂಬ ಆಶಯ ವ್ಯಕ್ತಪಡಿಸುತ್ತಿದ್ದುದನ್ನು ನೋಡಿದರೆ ಶಾಸ್ತ್ರೀಯ ಸಂಗೀತ ಉಜ್ವಲದ ಹಾದಿಯಲ್ಲೇ ಸಾಗುತ್ತಿದೆ ಎಂಬ ವಿಶ್ವಾಸ ಹೆಚ್ಚುತ್ತಿದೆ’ ಎನ್ನುತ್ತಾರೆ ಸಮೀರ.

ಇದನ್ನೂ ಓದಿ : Hindustani Classical Music : ಅಭಿಜ್ಞಾನ ; ನುರಿತ ಸಂಗೀತಗಾರರೂ ಒಮ್ಮೊಮ್ಮೆ ರಾಗವನ್ನು ಕರಾರುವಾಕ್ಕಾಗಿ ಗುರುತಿಸಲಾರದೆ ಸೋಲುತ್ತಾರೆ ಯಾಕೆ ಗೊತ್ತೆ?

bhimapalas Pandit Bhimsen Joshi Birth Centenary Concerts in Dharwad

ಜಿ. ಬಿ. ಜೋಶಿ ಪ್ರತಿಷ್ಠಾನದ ಖಜಾಂಚಿ, ಸಮನ್ವಯಕಾರ ಸಮೀರ ಜೋಶಿ

ಧಾರವಾಡದಲ್ಲಿ ನಡೆಯುವ ಸಂಗೀತ ಸಭೆಯ ವಿವರ ಈ ಕೆಳಗಿನಂತಿದೆ. 

20ನೇ ತಾರೀಖಿನಂದು ದೆಹಲಿಯ ಕಲಾವಿದ ರಾಜೇಂದ್ರ ಪ್ರಸನ್ನ ಅವರ ಭಾನ್ಸುರಿವಾದನ, ಹುಬ್ಬಳ್ಳಿಯ ಜಯತೀರ್ಥ ಮೇವುಂಡಿಯವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಪುಣೆಯ ರಾಮದಾಸ್ ಪಲ್ಸುಲೆಯವರ ತಬಲಾ ಸೋಲೋ, ನಿಷಾದ್ ಬಾಕ್ರೆ ಮತ್ತು ಅನುರಾಧಾ ಕುಬೇರ್ ಅವರ ಗಾಯನ ಕಾರ್ಯಕ್ರಮವಿರುತ್ತದೆ.

21ರಂದು ಅಲಿಬಾಗ್​ನ ಮುಗ್ಧಾ ವೈಶಂಪಾಯನ, ಮುಂಬೈನ ಶೌನಕ್ ಅಭಿಷೇಕಿ ಗಾಯನವಿರುತ್ತದೆ.

22ರಂದು ಪುಣೆಯ ವಿನಯ ರಾಮದಾಸನ್, ಮಂಜೂಷಾ ಕುಲಕರ್ಣಿ ಪಾಟೀಲ ಅವರ ಗಾಯನವಿರುತ್ತದೆ.

23ರಂದು ಕೊಲ್ಕತ್ತೆಯ ತ್ರೋಯಿಲಿ ದತ್ತಾ, ಮೋಯ್ಸಿಲೀ ದತ್ತಾ ಅವರಿಂದ ಸರೋದ್​ ವಾದನ ಮತ್ತು ಬ್ರಜೇಶ್ವರ ಮುಖರ್ಜಿ ಅವರಿಂದ ಗಾಯನವಿರುತ್ತದೆ.

24ರಂದು ಕೊಲ್ಕತ್ತೆಯ ಕಲ್ಯಾಣ್​ಜಿತ್ ದಾಸ್ ಅವರಿಂದ ಸಿತಾರ್, ಮನಾಲಿ ಬೋಸ್ ಅವರಿಂದ ಗಾಯನವಿರುತ್ತದೆ.

25ರಂದು ಕೊಲ್ಕತ್ತೆಯ ಐವಿ ಬ್ಯಾನರ್ಜಿ, ಅರ್ಷದ್ ಅಲಿ ಖಾನ್ ಅವರಿಂದ ಗಾಯನವಿರುತ್ತದೆ.

26ರಂದು ಕೊಲ್ಕತ್ತೆಯ ಶಾಶ್ವತಿ ಚೌಧರಿ, ಬೆಂಗಳೂರಿನ ಪೂರ್ಣಿಮಾ ಭಟ್ ಕುಲಕರ್ಣಿ ಮತ್ತು ಫಯಾಝ್ ಖಾನ್ ಅವರಿಂದ ಗಾಯನವಿರುತ್ತದೆ.

27ರಂದು ಶೋಲಾಪುರದ ಭೀಮಣ್ಣ ಜಾಧವ ಅವರಿಂದ ಸುಂದರೀವಾದನ, ಧಾರವಾಡದ ಎಂ. ವೆಂಕಟೇಶಕುಮಾರ, ಕೈವಲ್ಯಕುಮಾರ ಗುರವ ಅವರಿಂದ ಗಾಯನವಿರುತ್ತದೆ. ಪೊವಾಯ್​ನ ಹರ್ಷ ನಾರಾಯಣ ಅವರಿಂದ ಸಾರಂಗೀವಾದನವೂ ಇರುತ್ತದೆ.

27ರಂದು ಮುಂಬೈನ ಚೇತನ ಪಾಠಕ ಅವರಿಂದ ಗಾಯನವಿರುತ್ತದೆ. ಪುಣೆಯ ರುಚಿರಾ ಕೇದಾರ ಅವರ ‘ಮೋಹಿನಿ’ ತಂಡದಿಂದ ನೃತ್ಯಸಂಗೀತ ಕಾರ್ಯಕ್ರಮವಿರುತ್ತದೆ. ಶೀತಲ್ ಕೊಲ್ವಾಲ್ಕರ್ ಅವರ ಕಥಕ್​ಗೆ ಸಹನಾ ಬ್ಯಾನರ್ಜಿ ಸಿತಾರ್, ಸಾವನಿ ತಲ್ವಾಲ್ಕರ್ ತಬಲಾ, ಅದಿತಿ ಗರಡೆ ಹಾರ್ಮೋನಿಯಂ, ಅನುಜಾ ಬುರುಡೆ ಪಖಾವಾಜ್ ಸಾಥ್ ನೀಡಲಿದ್ದಾರೆ.

28ರಂದು ಉಜ್ಜೈನದ ಸುಧಾಕರ ದಿಯೋಲೆ ಅವರ ಗಾಯನ, ಬೆಂಗಳೂರಿನ ಪ್ರವೀಣ ಗೋಡ್ಖಿಂಡಿ ಮತ್ತು ಷಡಜ್ ಗೋಡ್ಖಿಂಡಿ ಭಾನ್ಸುರಿವಾದನವಿರುತ್ತದೆ.

29ರಂದು ನಾಸಿಕ್​ನ ಮಂಜರಿ ಅಸ್ನಾರೆ, ಪುಣೆಯ ಆನಂದ ಭಾಟೆಯವರ ಗಾಯನ ಕಾರ್ಯಕ್ರಮವಿರುತ್ತದೆ.

30ರಂದು ಮುಂಬೈನ ವರದಾ ಗೋಡ್ಬೋಲೆ, ಹೊಸದೆಹಲಿಯ ಹರೀಶ ತಿವಾರಿ ಅವರಿಂದ ಗಾಯನವಿದ್ದು ಈ ಮೂಲಕ ಹನ್ನೊಂದು ದಿನದ ಈ ಸಭೆಯು ಸಂಪನ್ನಗೊಳ್ಳಲಿದೆ.

ಇದನ್ನೂ ಓದಿ : ನಾಕುತಂತಿಯ ಮಿಡಿತ: ಕ್ಯಾಸೆಟ್​ ಸುರುಳಿ ಬಿಚ್ಚಿದ ಧಾರವಾಡದ ಅಹೋರಾತ್ರಿ ಸಂಗೀತ ಸಭೆಯ ನೆನಪುಗಳ ಮೆಲುಕು

Published On - 7:32 pm, Sat, 19 March 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?