ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ: ಹೈಕಮಾಂಡ್ಗೆ ರವಾನೆಯಾದ ಪತ್ರದಲ್ಲಿರುವ 10 ಅಂಶಗಳಿವು
ವಿಧಾನ ಪರಿಷತ್ ಸಭಾಪತಿಯೂ ಆಗಿರುವ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಅವರ ಬಿಜೆಪಿ ಸೇರ್ಪಡೆ ಪಕ್ಷದ ಹಿರಿಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿಯೂ ಆಗಿರುವ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ (Basavaraj Horatti) ಅವರ ಬಿಜೆಪಿ ಸೇರ್ಪಡೆ ಪಕ್ಷದ ಹಿರಿಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊರಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಆಕ್ಷೇಪಿಸಿರುವ ಅವರು, ತಮ್ಮ ನಿರ್ಧಾರಕ್ಕೆ 10 ಕಾರಣಗಳನ್ನೂ ನೀಡಿದ್ದಾರೆ. ಈ ಕುರಿತು ತಮ್ಮ ಆಕ್ಷೇಪ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಹಲವು ನಾಯಕರ ಸಹಿ ಇರುವ ಪತ್ರವೊಂದು ರವಾನೆಯಾಗಿದೆ. ಪತ್ರದ ಜೊತೆಗೆ ಹಲವು ದಾಖಲೆಗಳನ್ನೂ ಈ ಭಾಗದ ಬಿಜೆಪಿ ನಾಯಕರು ಹೈಕಮಾಂಡ್ಗೆ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೆ ಹೊರಟ್ಟಿ ಅವರನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬಾರದೆಂದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಂಶಗಳಿವು.
- ಬಸವರಾಜ್ ಹೊರಟ್ಟಿಗೆ ಈಗಾಗಲೇ 76 ವರ್ಷ ಆಗಿದೆ. ಪಕ್ಷದ ನಿಯಮದಂತೆ ಇವರಿಗೆ ಟಿಕೆಟ್ ನೀಡಲು ಅವಕಾಶವಿಲ್ಲ.
- ಹೊರಟ್ಟಿ ಒಟ್ಟಿಗೆ ಎರಡೆರೆಡು ವೇತನ ಪಡೆದಿರುವ ಆರೋಪ ಹೊಂದಿದ್ದಾರೆ. 1980ರಲ್ಲಿ ವಿಧಾನ ಪರಿಷತ್ಸ
- ಸದಸ್ಯರಾಗಿದ್ದರು. ಆದರೆ 1999ರವರೆಗೆ ಲ್ಯಾಮಿಂಗ್ಟನ್ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹುದ್ದೆ ಉಳಿಸಿಕೊಂಡು ವೇತನ ಪಡೆದಿದ್ದರು.
- ಧಾರವಾಡದಲ್ಲಿ ಎಸ್ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಸಿದ ಆರೋಪ ಇವರ ಮೇಲಿದೆ
- ಶಿಕ್ಷಣ ಸಂಸ್ಥೆ ವಿಚಾರದಲ್ಲಿ ಬಸವರಾಜ ಹೊರಟ್ಟಿ ಅವರ ಮೇಲೆ ಎಫ್ಐಆರ್ ದಾಖಲಾಗಿದೆ
- ಹಿಂದುತ್ವದ ವಿರುದ್ಧದ ಚಳವಳಿಯಲ್ಲಿ ಕಾಂಗ್ರೆಸ್ ಜೊತೆ ಹೊರಟ್ಟಿ ಗುರುತಿಸಿಕೊಂಡಿದ್ದರು
- ಬಿಜೆಪಿ ಪಕ್ಷದ ಸಿದ್ದಾಂತಗಳನ್ನು ಹೊರಟ್ಟಿ ಅವರು ಈವರೆಗೆ ಸಂಪೂರ್ಣವಾಗಿ ಒಪ್ಪಿಂಡಿಕೊಂಡಿಲ್ಲ
- ಹಾವೇರಿ, ಧಾರವಾಡ,, ಗದಗ, ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ
- ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ 17 ಶಾಸಕರು, 3 ಸಂಸತ್ ಸದಸ್ಯರು, 4 ವಿಧಾನ ಪರಿಷತ್ ಸದಸ್ಯರು, ಓರ್ವ ಸಭಾಪತಿ, 3 ಕ್ಯಾಬಿನೆಟ್ ಸಚಿವರು, ಓರ್ವ ಕೇಂದ್ರ ಸಚಿವರು, ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಇದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಒಬ್ಬರೆ ಒಬ್ಬ ಶಾಸಕರು ಇಲ್ಲ.
- ಬಸವರಾಜ್ ಹೊರಟ್ಟಿ ಒಬ್ಬ ಕಳಂಕಿತ ವ್ಯಕ್ತಿ, ಇಂತಹ ಕಳಂಕಿತ ವ್ಯಕ್ತಿಗೆ ಟಿಕೆಟ್ ಕೊಟ್ಟು ಸಾಧಿಸುವುದೇನಿದೆ?
ಇದನ್ನೂ ಓದಿ: ತಪ್ಪು ಮಾಡದವರು ಬಲಿಪಶು ಆಗುವುದು ಬೇಡ: ಬಸವರಾಜ ಹೊರಟ್ಟಿ
ಇದನ್ನೂ ಓದಿ: ಸಭಾಪತಿ ಹೊರಟ್ಟಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ ಇನ್ಸ್ಪೆಕ್ಟರ್ ಅಮಾನತು: ಎಸ್ಪಿ ಅಮಾನತಿಗೆ ಸಲೀಂ ಅಹ್ಮದ್ ಆಗ್ರಹ