AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಭಾಪತಿ ಹೊರಟ್ಟಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ ಇನ್​ಸ್ಪೆಕ್ಟರ್ ಅಮಾನತು: ಎಸ್​ಪಿ ಅಮಾನತಿಗೆ ಸಲೀಂ ಅಹ್ಮದ್ ಆಗ್ರಹ

ಬಸವರಾಜ ಹೊರಟ್ಟಿಯವರದ್ದು ಸಾಂವಿಧಾನಿಕ ಹುದ್ದೆ. ಅವರು ಬೆಂಗಳೂರಲ್ಲಿದ್ದಾಗ ಜಾತಿನಿಂದನೆ ಪ್ರಕರಣ ದಾಖಲಾಗಿದೆ ಎಂದು ಸಲೀಮ್ ಅಹ್ಮದ್ ಹೇಳಿದರು.

ಸಭಾಪತಿ ಹೊರಟ್ಟಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ ಇನ್​ಸ್ಪೆಕ್ಟರ್ ಅಮಾನತು: ಎಸ್​ಪಿ ಅಮಾನತಿಗೆ ಸಲೀಂ ಅಹ್ಮದ್ ಆಗ್ರಹ
ಕಾಂಗ್ರೆಸ್ ನಾಯಕ ಸಲೀಮ್ ಅಹ್ಮದ್
TV9 Web
| Edited By: |

Updated on:Mar 12, 2022 | 1:10 PM

Share

ಧಾರವಾಡ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Hortti) ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಲೀ ಅಹ್ಮದ್ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿರುವ ಇನ್​ಸ್ಪೆಕ್ಟರ್ ಅಮಾನತು ಮಾಡಲಾಗಿದೆ ಆದರೆ ಇಷ್ಟೇ ಸಾಲದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನಸುಕಿನ 3 ಗಂಟೆಗೆ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭಾಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಸವರಾಜ ಹೊರಟ್ಟಿಯವರದ್ದು ಸಾಂವಿಧಾನಿಕ ಹುದ್ದೆ. ಅವರು ಬೆಂಗಳೂರಲ್ಲಿದ್ದಾಗ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಕ್ತಕ್ರಮದ ಭರವಸೆ ನೀಡಿದ್ದಾರೆ. ಹೊರಟ್ಟಿ ನಮ್ಮ ಪಕ್ಷದವರಲ್ಲ, ಆದರೆ ನಮ್ಮ ಸಭಾಪತಿ. ಈಗ ನಾವು ಧ್ವನಿ ಎತ್ತಿದ್ದೇವೆ. ಸೋಮವಾರದೊಳಗೆ ಕ್ರಮ ತೆದುಕೊಳ್ಳಲಾಗುವುದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಎಸ್​ಪಿ ಮೇಲೆ ಕ್ರಮ‌ ಕೈಗೊಳ್ಳದಿದ್ದರೆ ಪುನಃ ಹೋರಾಟ ಮಾಡುತ್ತೇವೆ. ಸಭಾಪತಿ ಮೇಲೆ ಪ್ರಕರಣ ದಾಖಲಿಸುವಾಗ ಸರ್ಕಾರದ ಅನುಮತಿ ಪಡೆಯಬೇಕಿತ್ತು ಎಂದು ಅವರು ತಿಳಿಸಿದರು.

ಹೊರಟ್ಟಿ ನಮ್ಮ ಪಕ್ಷದವರಲ್ಲ. ಆದರೆ ಅವರು ನಮ್ಮ ಸಭಾಪತಿ. ಹೀಗಾಗಿ ನಾವು ಧ್ವನಿ ಎತ್ತಿದ್ದೇವೆ. ಈಗ ಇನ್ಸಪೆಕ್ಟರ್ ಅಮಾನತು ಮಾಡಿದ್ದಾರೆ. ನಾವು ಎಸ್​ಪಿ ಅಮಾನತು ಆಗಬೇಕೆಂದು ಆಗ್ರಹಿಸುತ್ತಿದ್ದೇವೆ. ಎಸ್​ಪಿ ವಿರುದ್ಧ ಕ್ರಮ ಜರುಗಿಸದಿದ್ದರೆ ಪುನಃ ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಎಸ್​ಪಿ ಅವರದು ತಪ್ಪು ಎಂದು ನಾನು ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಪಕ್ಷ ತೊರೆಯುವ ಕುರಿತು ಪ್ರತಿಕ್ರಿಯಿಸಿದ ಅವರು, ಇಬ್ರಾಹಿಂ ನಮ್ಮ ಪಕ್ಷದ ನಾಯಕರು. 2007ರಲ್ಲಿ ಪಕ್ಷಕ್ಕೆ ಬಂದರು. ಅವರಿಗೆ 2013ರಲ್ಲಿ ಭದ್ರಾವತಿಯ ಸಂಗಮೇಶ ಅವರ ಬದಲಿಗೆ ಟಿಕೆಟ್ ಕೊಡಲಾಗಿತ್ತು. ಅದರ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ಅದಾದ ಬಳಿಕ ಅನೇಕ ಹುದ್ದೆಗಳನ್ನು ಅವರಿಗೆ ನೀಡಲಾಗಿದೆ. ಎರಡು ಬಾರಿ ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. 2019ರಲ್ಲಿ ಎಸ್.ಆರ್. ಪಾಟೀಲರನ್ನು ತೆಗೆದು ತಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವಂತೆ ಕೇಳಿದರು. ಅದು ಸಾಧ್ಯವಿಲ್ಲವೆಂದು ಪಕ್ಷವು ಹೇಳಿತು. ಅವತ್ತಿನಿಂದ ಎರಡು ವರ್ಷ ಪಕ್ಷದ ಯಾವುದೇ ಪ್ರಚಾರಕ್ಕೆ ಅವರು ಬರಲಿಲ್ಲ. ಆದರೂ ಅವರು ಪಕ್ಷ ಬಿಡೋದಿಲ್ಲ ಎನ್ನುವ ವಿಶ್ವಾಸವಿದೆ. ಪಕ್ಷವು ಅವರಿಗೆ ಏನು ಕೊಡಬೇಕೋ ಅದನ್ನೆಲ್ಲ ಕೊಟ್ಟಿದೆ ಎಂದರು.

ಇದನ್ನೂ ಓದಿ: NPS: ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಲು ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯ

ಇದನ್ನೂ ಓದಿ: ಸಭಾಪತಿ ವಿರುದ್ಧ ಎಫ್​ಐಆರ್: ಬೆಳಗಿ‌ನ ಜಾವ 3 ಗಂಟೆಗೆ ಧಾರವಾಡ ಎಸ್.ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ಗರಂ

Published On - 12:59 pm, Sat, 12 March 22

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ