Literature: ನೆರೆನಾಡ ನುಡಿಯೊಳಗಾಡಿ; ಹೆಂಗಸೂ ಅಂದರೆ ದೇಹವನ್ನು ಕಟ್ಟಿಹಾಕಬೇಕು, ಮನಸ್ಸನ್ನು ಅಡಗಿಸಿಡಬೇಕು

Indraneela Story by A. Vennila : ಸೂಳೆಯೂ ಕಾಸಿಗಾಗಿಯೇ ಹಲ್ಲುಕಚ್ಚಿ ಮಲಗುತ್ತಾಳೆ. ಸಂತೋಷವಾಗಿಯೇ ಮಲಗುತ್ತಾಳೆಯೆ? ಸಂಸಾರದಲ್ಲಿ ಯಾವಳಾದರೂ ಗಂಡನ ಜತೆ ಮಲಗಬೇಕು, ಏಳಬೇಕು ಎಂದು ಹೊರಗೆ ಹೇಳಿಕೊಂಡು ತಿರುಗುತ್ತಾಳೇನೇ?

Literature: ನೆರೆನಾಡ ನುಡಿಯೊಳಗಾಡಿ; ಹೆಂಗಸೂ ಅಂದರೆ ದೇಹವನ್ನು ಕಟ್ಟಿಹಾಕಬೇಕು, ಮನಸ್ಸನ್ನು ಅಡಗಿಸಿಡಬೇಕು
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
Follow us
ಶ್ರೀದೇವಿ ಕಳಸದ
|

Updated on:Mar 18, 2022 | 3:39 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಅಮ್ಮ ಹೊರಟು ಬಂದುಬಿಡುತ್ತಾಳೆ. “ನಿನ್ನನು ಹೆತ್ತು ಬೆಳಸಿದ್ದಕ್ಕೆ, ಇದೇ ಏನೇ ನೀನು ನನಗೆ ತಂದು ಕೊಡುವ ಒಳ್ಳೆಯ ಹೆಸರು? ಎರಡು ಮಕ್ಕಳನ್ನು ಹೆತ್ತ ಮೇಲೆ ಶರೀರ ಸುಖ ಕೇಳುತ್ತಿದೆಯೇ? ಮಕ್ಕಳನ್ನು ಸಾಕಿದೆವಾ, ಓದಿಸಿದೆವಾ, ಅವನ್ನು ಬೆಳೆಸಿದೆವಾ ಅಂತ ಇಲ್ಲದೆ, ಗಂಡನ ಜತೆ ಯಾವಾಗ ಮಲಗಬೇಕು ಎಂದು ಕೇಳುತ್ತೀಯಲ್ಲೇ? ನನ್ನ ಹೊಟ್ಟೆಯಲ್ಲೇ ಹುಟ್ಟಿದೆಯಾ? ಅಕ್ಕಪಕ್ಕದಲ್ಲಿ ವಿಷಯ ಸೋರಿದರೆ, ಮುಖಕ್ಕೆ ಉಗಿಯುತ್ತಾರೆ, ಕಣೇ. ಸೂಳೇ ಸಹ ಕಾಸಿಗಾಗಿಯೇ ದಿನ ಪೂರ್ತಿ ಮಲಗುತ್ತಾಳೆ. ಅವಳೇನು ಬರುವವನೊಂದಿಗೆಲ್ಲಾ ಸಂತೋಷವಾಗಿಯೇ ಮಲಗುತ್ತಾಳೆ? ಪಾಪ, ಹೊಟ್ಟೆ ಪಾಡು ಎಂದು ಹಲ್ಲು ಕಚ್ಚಿಕೊಂಡು ಮಲಗುತ್ತಾಳೆ. ಸಂಸಾರದಲ್ಲಿ ಯಾವಳಾದರೂ ಗಂಡನ ಜತೆ ಮಲಗಬೇಕು, ಏಳಬೇಕು ಎಂದು ಹೊರಗೆ ಹೇಳಿಕೊಂಡು ತಿರುಗುತ್ತಾಳೇನೇ? ಹುಡುಕಿ ಬಂದರೆ ಇಲ್ಲ ಅಂತ ಹಿಂತಿರುಗಿ ಕಳಿಸದೆ ಮಲಗಬೇಕು. ಅದಲ್ಲವೇ ಹೆಂಗಸು? ಹಣ ಆಸ್ತಿ ಸಂಪಾದಿಸಿದೆವೇ, ಸಂಸಾರ ನಡೆಸಿದೆವೇ ಅಂತ ಇಲ್ಲದೆ, ಊರಲ್ಲಿಲ್ಲದ ಅಪರೂಪವಾಯಿತಲ್ಲಾ” ಎಂದು ನನ್ನನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತಾಳೆ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 14)

“ಹೆಂಗಸೂ ಅಂದರೆ ದೇಹವನ್ನು ಕಟ್ಟಿಹಾಕಬೇಕು. ಮನಸ್ಸನ್ನು ಅಡಗಿಸಿಡಬೇಕು” ಪ್ರತಿ ಕೈಗೆಲಸಕ್ಕೂ ಒಂದೊಂದು ಮಾತು ಆಡುತ್ತಾಳೆ.

“ನಾನು ಹೋಗೋರ್ ಬರೋರ್ ಜತೆ ಮಲಗಬೇಕೆಂದು ಕೇಳುತ್ತಿದ್ದೇನೆಯೇ. ಕಣ್ಣನ ಜತೆಯಲ್ಲವೇ ಕೇಳುತ್ತಿದ್ದೇನೆ? ಇಷ್ಟು ವರ್ಷ ಕೇಳಿದನೇ? ನನಗೆ ನಾನು ಅರ್ಥವಾಗಲಿಲ್ಲವೇ? ನಾನು ಕಂಡುಕೊಳ್ಳದಿದ್ದರೂ ದೇಹ ಹಿಂಸೆ ಮಾಡುತ್ತಿದೆಯಲ್ಲಾ? ನಾನು ಎಲ್ಲ ಹೆಂಗಸರ ಹಾಗೆಯೇ ಇದ್ದನಲ್ಲಾ. ಮೈಮೇಲೆ ಭೂತ ಬಂದಂತೆ ಆಗಿದೆಯಲ್ಲಾ.” ದೇಹವನ್ನು ನೋಡಿ ಭಯ ಬಿದ್ದೇ ಸನ್ಯಾಸಿಗಳಾದರೋ? ಒಳಗಿಂದೂ ಹೆಡೆ ಎತ್ತಿ ಆಡುವ ನಾಗವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾಗದೆ, ಕಾಯವನ್ನು ತೊರೆಯಲು ಸನ್ಯಾಸಿಗಳು ಬಯಸಿದರೋ? ಅಲ್ಪಸುಖ ಎಂದು ಕ್ಷುಲ್ಲಕವಾಗಿ ಹೇಳಿದರೆ ಮತ್ತೆ ಹೀಗಾಗದಿರಲಿ ಎಂಬ ಮುಂದಾಲೋಚನೆಯೋ?

ಸುಖದಲ್ಲಿ ಚಿಕ್ಕದು ದೊಡ್ಡದು ಉಂಟೇ? ಅಲ್ಪ ಸುಖ ಎಂದು ಹೇಳಿದರು? ಸ್ವಲ್ಪ ಸಮಯವೇ ಉಳಿಯುತ್ತದೆ ಎಂಬುದಕ್ಕಾಗಿಯೇ? ಗಂಡು ಹೆಣ್ಣು ಕೂಡುವುದು ಪಡೆಯುವುದು ಕೀಳೇ? ಉಳಿದ ಸುಖಗಳನ್ನು ಒಂಟಿಯಾಗಿ ಅನುಭವಿಸಬಹುದು. ಒಂಟಿಯಾಗಿ ನಗಬಹುದು. ಆಳಬಹುದು. ಕೋಪಿಸಿಕೊಳ್ಳಬಹುದು. ಕಾಮವನ್ನು ರುಚಿಸಲು ಇಬ್ಬರು ಬೇಕೇ ಬೇಕು. ಸ್ವಸುಖ ಕಂಡುಕೊಳ್ಳುವವವರೂ ಇದ್ದಾರಂತೆ. ನಮ್ಮ ಊರಿನಲ್ಲಿ ರಸ್ತೆಗಳಲ್ಲಿ ಇದ್ದಾರೆಯೇ? ಕೇಳಿಲ್ಲ. ಪ್ರಕೃತಿಯ ಕೂಡುವಿಕೆ ಎಂದರೆ ಎರಡೂ ಲಿಂಗವಲ್ಲವೇ? ಜನಾಂಗ ಬೆಳೆಯಲು ಬುನಾದಿಯಾದ ಸುಖವನ್ನು ಅಲ್ಪ ಸುಖ ಎನ್ನುತ್ತಾರೆಯೇ? ಮನುಷ್ಯರ ನಡುವೆ ನಡೆಯುವುದರಿಂದ ಅಲ್ಪ ಸುಖವೇ?

ಹಿರಿಯ ಸುಖ ಇದೆಯೇ? ದೇವರನ್ನು ಆರಾಧಿಸಿದರೆ ಹಿರಿಯ ಸುಖವೇ? ದೇವರನ್ನು ಆರಾಧಿಸಿದ್ದಾರೆ, ದೇವರನ್ನು ಪಡೆದಿದ್ದಾರೆಯೇ? ದೇವರ ಪಾದಕಮಲಗಳನ್ನು ಸೇರಿದರೆ, ಪರಮಸುಖ ಎಂದು ಹೇಳಬಹುದು. ಸೇರಿದ್ದಾಗಿ ಯಾರೂ ಹೇಳಲಿಲ್ಲವಲ್ಲಾ. ಹೇಳಿದವರು ಯಾರು ಪಡೆಯಲಿಲ್ಲವಲ್ಲಾ.

ಭಾಗ 12 : Literature: ನೆರೆನಾಡ ನುಡಿಯೊಳಗಾಡಿ; ಸಾವಿರ ಸಲ ಒಂದಾಗಿ ಕಲೆತ ದೇಹ ತನ್ನಿಚ್ಛೆಯಂತೆ ಮುತ್ತು ಕೊಡಬೇಕೆಂದರೆ 

ನೆಮ್ಮದಿಯಾಗಿ ನಡೆಯುತ್ತಿದ್ದ ಜೀವನದಲ್ಲಿ ಯಾಕೆ ಈ ದುಂಬಿಯ ಕೊರೆತ? ದೇಹವನ್ನು ನನ್ನ ಬುದ್ಧಿ ನಿಯಂತ್ರಿಸುವ ಶಕ್ತಿಯನ್ನು ಕಳೆದುಕೊಂಡಿತೆ? ಯಾಕೆ ನಿಯಂತ್ರಿಸಬೇಕು ಎಂದು ಮನಸ್ಸು ಹಟ ಮಾಡುತ್ತದೆಯೇ? ಸಂಸಾರದಲ್ಲಿ ದೇಹ ಸುಖಕ್ಕೆ ಯಾವ ಸ್ಥಾನವಿದೆ? ಬದುಕಿನ ಶಾಂತಿಯನ್ನು ನಾನೇ ಕೆಡವುತ್ತಿದ್ದೇನೆಯೇ? ಅರಳಿದ ದೇಹ. ಸುಖ ತುಂಬಿದ ಚಿಲುಮೆ. ಕೆರಳಿದ ಮನಸ್ಸಿನ ಉದ್ವೇಗ. ನಾನು ಕೇಳಲಿಲ್ಲವಲ್ಲಾ? ಮರೆಮಾಚಿಕೊಂಡು ಸುಳ್ಳಾಗಿ ಇರಬೇಕೇ? ನನ್ನನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವುದು ಸಂಸಾರದಲ್ಲಿ ಸಾಧ್ಯವಿಲ್ಲದ ಕಾರ್ಯವೇ? ಮಡದಿಯ ಮೇಲೆ ನಂಬಿಕೆ ಕಳೆದುಕೊಂಡ ರಾಜರು ಬೇಟೆಗೆ ಹೋಗುವಾಗ, ಉಕ್ಕಿನ ಕವಚದಿಂದ ಹೆಂಡತಿಯ ದೇಹಕ್ಕೆ ಬೀಗ ಹಾಕಿ, ಕೈಯಲ್ಲೇ ಬೀಗದ ಕೀಲಿಯನ್ನು ಕೊಂಡೊಯ್ಯುತ್ತಾರಂತಲ್ಲಾ? ನನ್ನ ದೇಹಕ್ಕೆ ನಾನೇ ಒಂದು ಉಕ್ಕಿನ ಕವಚ ಹಾಕಿಕೊಳ್ಳಬೇಕೇನು? ನನಗೆ ನಾನೇ ಒಂದು ಮುಖವಾಡ ಹಾಕಿಕೊಳ್ಳಬೇಕೇನು? ಹಾಕಿಕೊಂಡರೆ ತಪ್ಪಿಸಿಕೊಳ್ಳಬಹುದೇ?

ಜೀರುಂಡೆಯ ನುಂಗಿದ ಗುರತೂ ಇಲ್ಲದೆ ಹಲ್ಲಿ ಮುಂದಿನ ಬೇಟೆಗಾಗಿ ಕಾಯುತ್ತಿತ್ತು. ಮಂಕು ಬೆಳಕಲ್ಲಿ, ಯಾಳಿನಿಯೂ, ಆದಿಯೂ ತುಂಬ ಸುಂದರವಾಗಿ ಕಾಣಿಸಿದರು. ಅವರ ನಿರಾಳತೆ ನನ್ನೊಳಗೆ ಆವರಿಸಿತು. ನಿದ್ದೆ ಕಳೆದುಕೊಂಡು, ಶಾಂತಿ ಇಲ್ಲದೆ, ಎಂಥ ಅವಸ್ಥೆ ಇದು.

ಹಾಸಿಗೆಯ ಹೊರಗೆ ಚಾಚಿದ್ದ ಕಣ್ಣನ ಕಾಲುಗಳನ್ನು ಹಿಡಿದಂತೆ ಹಾಸಿಗೆಯ ಮೇಲೆ ಒರಗಿದೆ. ಗೊಂದಲವೇ, ಭಯವೇ ಏನೆಂದು ಭಾವನೆಯನ್ನು ವಿಂಗಡಿಸಲಾಗಲಿಲ್ಲ. ಪ್ರೀತಿಯಿಂದ ಮಡಿಲಲ್ಲಿ ಹಾಕಿಕೊಂಡು ಎರಡೂ ಕೈಗಳಿಂದ ಆಲಿಂಗಿಸಿಕೊಂಡರೆ ಚೆನ್ನಾಗಿರುತ್ತದೆ. ತಲೆಯನ್ನು ಸವರಿ, ‘ನಾನಿದ್ದೇನೆ’ ಎಂದು ಕಾರ್ಯದಲ್ಲಿ ಅರಿವು ಮೂಡಿಸಿದರೆ ಶಾಂತವಾಗಬಹುದು. ‘ಏನು ನಿದ್ದೆ ಮಾಡಲಿಲ್ಲವೇ?” ಎಂದು ಕೇಳಿದರೂ ಸಾಕು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 13: Literature: ನೆರೆನಾಡ ನುಡಿಯೊಳಗಾಡಿ; ದೇಹಸುಖ ಬೇಕೆಂದು ಒಬ್ಬ ಸಂಸಾರಿ ಹೆಣ್ಣು ಕಾಯುತ್ತಿದ್ದಾಳೆ ಎಂದರೆ

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi 

Published On - 3:31 pm, Fri, 18 March 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್