15 ಎಸೆತಗಳಲ್ಲಿ 66 ರನ್; ಸೂರ್ಯನ ತಂಡದ ವಿರುದ್ಧ ಪೃಥ್ವಿ ಸ್ಫೋಟಕ ಬ್ಯಾಟಿಂಗ್
Prithvi Shaw Blasts 75 in Mumbai T20: ಪೃಥ್ವಿ ಶಾ ಅವರು ಮುಂಬೈ ಟಿ20 ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಟ್ರಯಂಫ್ಸ್ ನೈಟ್ಸ್ ಎಂಎನ್‌ಇ ವಿರುದ್ಧ 34 ಎಸೆತಗಳಲ್ಲಿ 75 ರನ್ ಬಾರಿಸಿದರು. ಪೃಥ್ವಿ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಪೃಥ್ವಿ ಅವರ ಈ ಇನ್ನಿಂಗ್ಸ್ನಿಂದಾಗಿ ನಾರ್ತ್ ಮುಂಬೈ ಪ್ಯಾಂಥರ್ಸ್ ತಂಡ 200 ರನ್‌ಗಳ ಗಡಿ ದಾಟಿತು.

ಸ್ಫೋಟಕ ದಾಂಡಿಗ ಪೃಥ್ವಿ ಶಾ (Prithvi Shaw) ಕಳೆದ ಹಲವು ವರ್ಷಗಳಿಂದ ಟೀಂ ಇಂಡಿಯಾದಿಂದ (Team India) ಹೊರಗುಳಿದಿದ್ದಾರೆ. ಪೃಥ್ವಿ ಶಾ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಅಂಡರ್ -19 ವಿಶ್ವಕಪ್ ಗೆದ್ದಿತ್ತು. ಇದರ ಜೊತೆಗೆ ಪೃಥ್ವಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಉತ್ತಮ ಆರಂಭವನ್ನು ಪಡೆದಿದ್ದರು. ಹೀಗಾಗಿ ಪೃಥ್ವಿ ಅವರನ್ನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಲಾಗುತ್ತಿತ್ತು. ಆದಾಗ್ಯೂ, ಪೃಥ್ವಿ ತಮ್ಮ ವಿಲಾಸಿ ಜೀವನಕ್ಕೆ ಜೋತು ಬಿದ್ದು, ತಂಡದಿಂದ ಹೊರಬಿದ್ದರು. ಟೀಂ ಇಂಡಿಯಾ ನಂತರ ಮುಂಬೈ ತಂಡದಿಂದಲೂ ಅವರನ್ನು ಕೈಬಿಡಬೇಕಾಯಿತು.ಇದೀಗ ಹೇಗಾದರೂ ಮಾಡಿ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಪೃಥ್ವಿ ಮುಂಬೈ ಟಿ20 ಲೀಗ್‌ನಲ್ಲಿ ಕೊನೆಗೂ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ.
75 ರನ್‌ಗಳ ಸ್ಫೋಟಕ ಇನ್ನಿಂಗ್ಸ್
ಮುಂಬೈ ಟಿ20 ಟೂರ್ನಮೆಂಟ್‌ನ 19 ನೇ ಪಂದ್ಯದಲ್ಲಿ ಟ್ರಯಂಫ್ಸ್ ನೈಟ್ಸ್ ಎಂಎನ್‌ಇ ವಿರುದ್ಧ ನಾರ್ತ್ ಮುಂಬೈ ಪ್ಯಾಂಥರ್ಸ್ ತಂಡದ ಪರ ಆಡುವಾಗ ನಾಯಕ ಪೃಥ್ವಿ ಬಿರುಸಿನ ಅರ್ಧಶತಕ ಬಾರಿಸಿದರು. ಪೃಥ್ವಿ ಅವರ ಅರ್ಧಶತಕದ ನೆರವಿನಿಂದ ನಾರ್ತ್ ಮುಂಬೈ ಪ್ಯಾಂಥರ್ಸ್ ತಂಡ 200 ರನ್‌ಗಳ ಗಡಿ ದಾಟಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಪೃಥ್ವಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಪೃಥ್ವಿ 75 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಪೃಥ್ವಿ ಆಡುತ್ತಿದ್ದ ವೇಗವನ್ನು ನೋಡಿದರೆ ಅವರಿಗೆ ಶತಕ ಬಾರಿಸುವ ಸುಲಭ ಅವಕಾಶವಿತ್ತು. ಆದರೆ ಅದು ಆಗಲಿಲ್ಲ. 10 ನೇ ಓವರ್‌ನ ಐದನೇ ಎಸೆತದಲ್ಲಿ ಪೃಥ್ವಿ ಔಟಾದರು.
Prithvi Shaw: 25 ಬೌಂಡರಿಗಳ ಸಹಿತ 128 ರನ್; ತಂಡದಿಂದ ಹೊರಬಿದ್ದ ಬಳಿಕ ಬುದ್ಧಿ ಕಲಿತ ಪೃಥ್ವಿ ಶಾ
3 ಸಿಕ್ಸರ್ ಮತ್ತು 12 ಬೌಂಡರಿ
ಅಂತಿಮವಾಗಿ ಪೃಥ್ವಿ 34 ಎಸೆತಗಳಲ್ಲಿ 220.59 ಸ್ಟ್ರೈಕ್ ರೇಟ್‌ನಲ್ಲಿ 75 ರನ್ ಗಳಿಸಿದರು. ಇದರಲ್ಲಿ ಪೃಥ್ವಿ ಕೇವಲ ಬೌಂಡರಿ ಸಿಕ್ಸರ್‌ಗಳಿಂದಲೇ 15 ಎಸೆತಗಳಲ್ಲಿ 66 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಪೃಥ್ವಿ 3 ಸಿಕ್ಸರ್ ಮತ್ತು 12 ಬೌಂಡರಿಗಳನ್ನು ಬಾರಿಸಿದರು. ಪೃಥ್ವಿ ಹೊರತುಪಡಿಸಿ, ಹರ್ಷಲ್ ಜಾಧವ್ ಕೂಡ 30 ಎಸೆತಗಳಲ್ಲಿ 46 ರನ್ ಗಳಿಸಿದರು. ಇತರರು ಸಹ ಕೊಡುಗೆ ನೀಡಿದರು. ಇದರಿಂದಾಗಿ, ನಾರ್ತ್ ಮುಂಬೈ ಪ್ಯಾಂಥರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 207 ರನ್ ಗಳಿಸಲು ಸಾಧ್ಯವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
