ರಾಯಚೂರಿನಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ
ರಾಯಚೂರು ಜಿಲ್ಲೆಯ ಜಾಗಿರ ವೆಂಕಟಾಪುರದ ಹಳ್ಳದ ಮೇಲಿನ ಸೇತುವೆ ಭಾರಿ ಮಳೆಯಿಂದ ಕೊಚ್ಚಿ ಹೋಗಿದೆ. ಫತ್ತೇಪುರ ಮತ್ತು ಜಾಗಿರ ವೆಂಕಟಾಪುರ ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿದೆ. ಕಳೆದ ವರ್ಷ ಇದೇ ಸೇತುವೆಯಲ್ಲಿ ಒಬ್ಬರು ಕೊಚ್ಚಿ ಹೋಗಿದ್ದರು. ಹೊಸ ಸೇತುವೆ ನಿರ್ಮಾಣ ಆರಂಭವಾಗಿದ್ದರೂ, ಹಳೆಯ ಸೇತುವೆ ಕುಸಿದಿರುವುದರಿಂದ ಜನರು ಪರದಾಡುತ್ತಿದ್ದಾರೆ. ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಜಾಗಿರ ವೆಂಕಟಾಪುರ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕೊಚ್ಚಿ ಹೋಗಿದೆ. ಸತತ ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಹಳ್ಳದ ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಫತ್ತೇಪುರ ಹಾಗೂ ಜಾಗಿರ ವೆಂಕಟಾಪುರ ಗ್ರಾಮಗಳ ನಡುವಿನ ಸಂಪರ್ಕ ಕಡಿತವಾಗಿದೆ. ಸೇತುವೆ ಕೊಚ್ಚಿ ಹೋಗಿರುವುದರಿಂದ ಜನ ಪರದಾಡುತ್ತಿದ್ದಾರೆ. ಕಳೆದ ವರ್ಷ ಇದೇ ಸೇತುವೆ ಮೇಲೆ ಹರಿದ ಹಳ್ಳದ ನೀರಿನಲ್ಲಿ ಓರ್ವ ಬ್ಯಾಂಕ್ ಸಿಬ್ಬಂದಿ ಕೊಚ್ಚಿ ಹೋಗಿದ್ದರು. ಹೀಗಾಗಿ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಹೊಸ ಸೇತುವೆ ಕಾಮಗಾರಿ ಆರಂಭವಾಗಿದೆ. ಈ ಮಧ್ಯೆ ಹಳೆ ಸೇತುವೆ ಕೊಚ್ಚಿ ಹೋಗಿರುವ ಹಿನ್ನೆಲೆ ಸಂಚಾರ ಬಂದ್ ಆಗಿದೆ. ವಾಹನಗಳು ಸಂಚಾರ ಸ್ಥಗಿತವಾಗಿದ್ದರಿಂದ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
Follow Us
Latest Videos
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
