ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು: ಪ್ರಶಾಂತ್ ಮನ ಮಿಡಿಯುವ ಮಾತು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಮೃತಪಟ್ಟ ಘಟನೆ ಬಗ್ಗೆ ಗಾಯಾಳು ಪ್ರಶಾಂತ್ ಎಂಬುವವರು ದುರಂತದ ಭೀಕರತೆ ಬಿಚ್ಚಿಟ್ಟಿದ್ದಾರೆ. ಗೇಟ್ ನಂಬರ್ 7 ಬಳಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರಿಂದ ಉಂಟಾದ ಈ ದುರಂತದಲ್ಲಿ ಅವರು ತೀವ್ರ ಸಂಕಷ್ಟ ಅನುಭವಿಸಿರುವುದಾಗಿ ಹೇಳಿದ್ದಾರೆ.
ಬೆಂಗಳೂರು, ಜೂನ್ 08: ಕಾಲ್ತುಳಿತದಿಂದ ಆರ್ಸಿಬಿಯ (RCB) 11 ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದ ಭೀಕರತೆಯನ್ನು ಗಾಯಾಳು ಪ್ರಶಾಂಶ್ ಎಂಬುವವರು ಬಿಚ್ಚಿಟ್ಟಿದ್ದಾರೆ. ಸ್ಟೇಡಿಯಂನ ಗೇಟ್ ನಂ.7ರ ಬಳಿ 1 ಲಕ್ಷ ಜನರು ಸೇರಿದ್ದರು. ಕೈಮುಗಿದು ಕೇಳಿಕೊಂಡರು ಸಹ ಸೆಕ್ಯೂರಿಟಿ ಗೇಟ್ ತೆಗೆಯಲಿಲ್ಲ. ನಾನು ರಸ್ತೆಯಲ್ಲೇ ಒಂದು ಗಂಟೆ ಬಿದ್ದು ಒದ್ದಾಡಿದ್ದೆ. ಇದು ಸರ್ಕಾರ ಮಾಡಿದ ಎಡವಟ್ಟು ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.