ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಅಮಾನತುಗೊಂಡಿರುವ ದಯಾನಂದ ಅವರ ವಿಡಿಯೋ ವೈರಲ್ ಆಗಿದೆ. 30 ವರ್ಷ ಸರ್ವಿಸ್‌ನಲ್ಲಿ ಒಂದು ದಿನಾ ಸಹ ರಜೆ ಹಾಕಿಲ್ಲ. ಫ್ಯಾಮಿಲಿ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲ. ಅಷ್ಟೇ ಅಲ್ಲ ಮಂಗಳೂರಿನಲ್ಲಿ ಗಲಾಟೆಯ ಸನ್ನಿವೇಶದಲ್ಲಿ ಇದ್ದ ಆರತಕ್ಷತೆಯನ್ನ (ಎಂಗೇಜ್ಮೆಂಟ್) ಒಂದು ದಿನ ಮೂಂದೂಡಿದ್ದರು. ಇನ್ನು ಇಬ್ಬರ ಮಕ್ಕಳ ನಾಮಕಾರಣಕ್ಕೂ ಹೋಗಿಲ್ಲ. ದಕ್ಷ ಅಧಿಕಾರಿ ದಯಾನಂದ್ ಅವರ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.
ಬೆಂಗಳೂರು, (ಜೂನ್ 08): ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ #rcb ಆಟಗಾರರ ಅಭಿನಂದನಾ ಕಾರ್ಯಕ್ರಮದ ಗೊಂದಲ ಮತ್ತು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಘನಗೋರ ಕಾಲ್ತುಳಿತದ ಪ್ರಕರಣ ಇಡಿ ದೇಶದಾದ್ಯಂತ ಚರ್ಚೆ ಆಗುತ್ತಿದೆ. ಕರ್ನಾಟಕ ಸರ್ಕಾರವೇನೊ ತಮ್ಮ ತಪ್ಪೇನು ಇಲ್ಲವೆನ್ನುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಆದಿಯಾಗಿ ಐವರು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿ ಕೈ ತೊಳೆದುಕೊಂಡಿದೆ. ಆದರೆ ಈಗ ಒಂದೊಂದೆ ಸತ್ಯ ಹೊರ ಬರುತ್ತಿದೆ. ವಿಧಾನಸೌಧದ ಮುಂದೆ ನಡೆಸಲು ಇಚ್ಛಿಸಿದ್ದ ಕಾರ್ಯಕ್ರಮಕ್ಕೆ ಸಮಯ ಬೇಕಾಗುತ್ತದೆ. ಎಂದು ವಿಧಾನಸೌಧದ ಡಿಸಿಪಿ ಡಿಪಿಎಆರ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಹಾಗದರೆ DPAR ಯಾಕೆ ಕಾರ್ಯಕ್ರಮ ನಡೆಸಲು ಒಪ್ಪಿಕೊಂಡಿತು? ಎನ್ನುವ ಪ್ರಶ್ನೆ ಉದ್ಭವಿಸಿದೆ. ಇನ್ನು ಅಮಾನತುಗೊಂಡಿರುವ ದಯಾನಂದ ಅವರ ವಿಡಿಯೋ ವೈರಲ್ ಆಗಿದೆ. 30 ವರ್ಷ ಸರ್ವಿಸ್‌ನಲ್ಲಿ ಒಂದು ದಿನಾ ಸಹ ರಜೆ ಹಾಕಿಲ್ಲ. ಫ್ಯಾಮಿಲಿ ಕಾರ್ಯಕ್ರಮಕ್ಕೂ ಹೋಗುತ್ತಿರಲಿಲ್ಲ. ಅಷ್ಟೇ ಅಲ್ಲ ಮಂಗಳೂರಿನಲ್ಲಿ ಗಲಾಟೆಯ ಸನ್ನಿವೇಶದಲ್ಲಿ ಇದ್ದ ಆರತಕ್ಷತೆಯನ್ನ (ಎಂಗೇಜ್ಮೆಂಟ್) ಒಂದು ದಿನ ಮೂಂದೂಡಿದ್ದರು. ಇನ್ನು ಇಬ್ಬರ ಮಕ್ಕಳ ನಾಮಕಾರಣಕ್ಕೂ ಹೋಗಿಲ್ಲ. ದಕ್ಷ ಅಧಿಕಾರಿ ದಯಾನಂದ್ ಅವರ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.