Viral: ಮರಳಶಿಲ್ಪದ ಧ್ವಂಸ ಕೃತ್ಯದಲ್ಲಿ ತೊಡಗಿದ್ದ ಹದಿಹರೆಯದ ಹುಡುಗಿಯರ ಬಂಧನ

Honolulu : ಸ್ವಾದವಿರದ ಬರ್ಗರ್​, ಪಿಝಾ ತಟ್ಟೆಗಳಿಗಿಂತ ವೇಗವಾಗಿ ಈಕೆ ಶಿಲ್ಪವನ್ನು ಧ್ವಂಸ ಮಾಡುತ್ತಿದ್ದಾಳೆ. ಪುಣ್ಯಕ್ಕೆ ಗಾಜನ್ನು ಒಡೆದಿಲ್ಲ. ಈಕೆಯ ಬಗ್ಗೆ ಕನಿಕರವಾಗುತ್ತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Viral: ಮರಳಶಿಲ್ಪದ ಧ್ವಂಸ ಕೃತ್ಯದಲ್ಲಿ ತೊಡಗಿದ್ದ ಹದಿಹರೆಯದ ಹುಡುಗಿಯರ ಬಂಧನ
ಹೊನೊಲುಲುವಿನ ರಾಯಲ್​ ಹವಾಯಿನ್​ ಹೋಟೆಲ್​ನಲ್ಲಿರುವ ಮರಳ ಶಿಲ್ಪವನ್ನು ಧ್ವಂಸಗೊಳಿಸುತ್ತಿರುವ ಯುವತಿ
Follow us
ಶ್ರೀದೇವಿ ಕಳಸದ
|

Updated on:Jun 13, 2023 | 12:55 PM

Sand Sculpture: ಕಲೆ ತನ್ನೊಂದಿಗೆ ತಾನು ಇರುವುದು ಹೇಗೆ ಎನ್ನುವ ತಾಳ್ಮೆಯನ್ನು ಮನುಷ್ಯನಿಗೆ ಕಲಿಸಿಕೊಡುತ್ತದೆ. ತನ್ನೊಳಗಿನ ನಿರಾಕಾರಕ್ಕೆ ಆಕಾರ ಕೊಟ್ಟುಕೊಳ್ಳುವುದು ಹೇಗೆಂದು ನಿರ್ದೇಶಿಸುತ್ತದೆ. ತನ್ನ ಸುತ್ತಮುತ್ತಲಿನದನ್ನು ಸಾವಧಾನವಾಗಿ ಅರ್ಥ ಮಾಡಿಕೊಳ್ಳುವ ಬಗೆ ಹೇಗೆಂದು ತಿಳಿಸಿಕೊಳ್ಳುತ್ತದೆ. ಅನ್ಯದ ಕಡೆ ಆಸಕ್ತಿ ಮೂಡುವಂತೆ ಮಾಡಿ ಅದರೊಂದಿಗೆ ಒಳಗೊಳ್ಳುವುದು ಹೇಗೆಂದು ಯೋಚಿಸಲು ಸಹಾಯ ಮಾಡುತ್ತದೆ. ಆದರೆ ಕಲೆಯ ಧ್ಯಾನ ಮತ್ತು ಸ್ಪರ್ಶದಿಂದ ದೂರ ಉಳಿದ ಮನುಷ್ಯ ತನ್ನ ವಿಕಾರಗಳನ್ನೆಲ್ಲ ಸಮಯ, ಸಂದರ್ಭ, ಸ್ಥಳವನ್ನು ಗಮನಿಸದೇ ಹೊರಹಾಕುವ ಸಾಧ್ಯತೆ ಇರುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ  ಗಮನಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಸೆರೆಯಾಗಿರುವುದು ರಾಯಲ್​ ಹವಾಯಿನ್​ ಹೋಟೆಲ್​ನಲ್ಲಿ. ಇಲ್ಲೊಂದು ಮರಳ ಶಿಲ್ಪವಿದೆ. ಒಬ್ಬಾಕೆ ಇದರ ಮೇಲೆ ವಸ್ತುಗಳನ್ನೆಸೆದು ಧ್ವಂಸ ಮಾಡಲು ಯತ್ನಿಸುತ್ತಿದ್ದಾಳೆ. ಇನ್ನೊಬ್ಬಾಕೆ ಮೊಬೈಲ್​ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದಾಳೆ. ಇವರಿಬ್ಬರೂ ಹೀಗೆ ಯಾಕೆ ಸೂಕ್ಷ್ಮತೆ ಕಳೆದುಕೊಂಡು ವರ್ತಿಸುತ್ತಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಇವರಿಬ್ಬರ ಬೇಜವಾಬ್ದಾರಿ ವರ್ತನೆಯ ವಿರುದ್ಧ ಕ್ರಮ ಕೈಗೊಂಡ ಹೊನೊಲುಲು ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ. ಸದ್ಯ, ಈ ಕಲಾಕೃತಿಯ ಕರ್ತೃ ತಕ್ಷಣವೇ ಅದನ್ನು ಮರುರೂಪಿಸಿ ಒಪ್ಪಗೊಳಿಸಿದ್ದಾರೆ.

ಇದನ್ನೂ ಓದಿ : Viral: ಟೈ ಕಟ್ಟಿಕೊಳ್ಳುವುದು ಹೀಗೆ; ಸಂದರ್ಶನಕ್ಕೆ ಹೊರಟಿದ್ದ ಯುವಕನಿಗೆ ಅಜ್ಜನ ಪಾಠ 

ಈತನಕ 23 ಮಿಲಿಯನ್​ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಇವರಿಬ್ಬರ ಕೃತ್ಯಕ್ಕೆ ಅನೇಕರು ಬೇಸತ್ತು ಪ್ರತಿಕ್ರಿಯಿಸುತ್ತಿದ್ದಾರೆ. ಸ್ವಾದವಿರದ ಬರ್ಗರ್​, ಪಿಝಾ ತಟ್ಟೆಗಳಿಗಿಂತ ವೇಗವಾಗಿ ಈಕೆ ಮರಳಿನ ಶಿಲ್ಪವನ್ನು ಧ್ವಂಸ ಮಾಡುತ್ತಿದ್ದಾರೆ. ಪುಣ್ಯಕ್ಕೆ ಗಾಜನ್ನು ಆಕೆ ಒಡೆದಿಲ್ಲ. ಈಕೆಯ ಬಗ್ಗೆ ಕನಿಕರವಾಗುತ್ತಿದೆ, ಪೋಷಕರು ಶಿಸ್ತಿನ ಜೀವನದ ಬಗ್ಗೆ ಹೇಳಿಕೊಟ್ಟಿದ್ದರೆ ಈಕೆ ಹೀಗೆ ವರ್ತಿಸುತ್ತಿರಲಿಲ್ಲ… ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ಧಾರೆ.

ಎಲ್ಲವನ್ನೂ ಪೋಷಕರ ತಲೆಗೇ ಕಟ್ಟಿದರೆ ಹೇಗೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:50 pm, Tue, 13 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ