Viral: ಟೈ ಕಟ್ಟಿಕೊಳ್ಳುವುದು ಹೀಗೆ; ಸಂದರ್ಶನಕ್ಕೆ ಹೊರಟಿದ್ದ ಯುವಕನಿಗೆ ಅಜ್ಜನ ಪಾಠ

Tie a tie knot : ಈ ಯುವಕನಿಗೆ ತಾನು ಕಟ್ಟಿಕೊಂಡ ಟೈ ಸರಿಯಾಗಿಲ್ಲ ಎಂದೆನ್ನಿಸಿದೆ. ಆ ಕಸಿವಿಸಿ ಗ್ರಹಿಸಿದ ಕೆಂಪುಕೋಟಿನ ವಯಸ್ಸಾದ ಮಹಿಳೆ ಪಕ್ಕದಲ್ಲಿದ್ದ ತನ್ನ ಗಂಡನ ಮೊಣಕೈಗೆ ತಿವಿದು ಅವನೆಡೆ ಗಮನ ಹರಿಸುವಂತೆ ಮಾಡಿದ್ದಾಳೆ.

Viral: ಟೈ ಕಟ್ಟಿಕೊಳ್ಳುವುದು ಹೀಗೆ; ಸಂದರ್ಶನಕ್ಕೆ ಹೊರಟಿದ್ದ ಯುವಕನಿಗೆ ಅಜ್ಜನ ಪಾಠ
ಸಂದರ್ಶನಕ್ಕೆ ಹೊರಟಿದ್ದ ಯುವಕನಿಗೆ ಟೈ ಕಟ್ಟಿಕೊಳ್ಳುವುದು ಹೇಗೆಂದು ಕಲಿಸುತ್ತಿರುವ ಹಿರಿಯ ನಾಗರಿಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 13, 2023 | 11:21 AM

Humanity : ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಾವೆಲ್ಲ ಹೇಗಿದ್ದೆವು ನೆನಪಿಸಿಕೊಳ್ಳಿ. ಬಸ್​ಸ್ಟ್ಯಾಂಡಿನಲ್ಲಿ, ಆಸ್ಪತ್ರೆಯಲ್ಲಿ ಕುಳಿತಾಗ ಇರಬಹುದು. ಬಸ್ಸಿನಲ್ಲಿ, ರೈಲಿನಲ್ಲಿ ಪ್ರಯಾಣಿಸುವಾಗ ಇರಬಹುದು. ನಮ್ಮ ಮಧ್ಯೆ ಸಂವಹನವಿರುತ್ತಿತ್ತು. ಅಪರಿಚಿತರಾದರೂ ಅನುವುತನುವು ಆಲಿಸುತ್ತಿದ್ದೆವು. ನಾಲ್ಕಾರು ಮಾತುಗಳಾಡುತ್ತ ಮನಸ್ಸು ಹಗೂರ ಮಾಡಿಕೊಳ್ಳುತ್ತಿದ್ದೆವು. ಸಣ್ಣಪುಟ್ಟ ಸಹಾಯದಿಂದ ಮನಸ್ಸು ತೃಪ್ತಿಗೊಳಿಸಿಕೊಳ್ಳುತ್ತಿದ್ದೆವು. ಆದರೆ ಈಗ? ನಮ್ಮಿಡೀ ಬದುಕನ್ನು ಜಂಗಮವಾಣಿಯ ಕೈವಶಕ್ಕೊಪ್ಪಿಸಿ ತಲೆತಗ್ಗಿಸಿ ಹೊರಟುಬಿಟ್ಟಿದ್ದೇವೆ. ಇದರ ಕೊನೆಯೆಲ್ಲಿ ಗೊತ್ತಿಲ್ಲ. ಇರಲಿ, ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.

ಈ ಯುವಕ ಉದ್ಯೋಗ ಸಂದರ್ಶನಕ್ಕೆ ಹೊರಟಿದ್ದಾನೆ. ಸಂದರ್ಶನವೆಂದರೆ ಅಡಿಯಿಂದ ಮುಡಿಯವರೆಗೆ ಟಿಪ್​ ಟಾಪ್ ಆಗಿ ಹೊರಡಬೇಕು. ಯಾಕೋ ಏನೋ ಈ ಟ್ವೀಟ್​ನಲ್ಲಿರುವ ಯುವಕನಿಗೆ ತಾನು ಕಟ್ಟಿಕೊಂಡ ಟೈ ಸರಿಯಾಗಿಲ್ಲ ಎಂದೆನ್ನಿಸಿದೆ. ಆ ಕಸಿವಿಸಿಯನ್ನು ಗ್ರಹಿಸಿದ ಕೆಂಪುಕೋಟಿನೊಳಗಿನ ವಯಸ್ಸಾದ ಮಹಿಳೆ ಪಕ್ಕದಲ್ಲಿದ್ದ ತನ್ನ ಗಂಡನ ಮೊಣಕೈಗೆ ತಿವಿದು ಅವನೆಡೆ ಗಮನ ಹರಿಸುವಂತೆ ಮಾಡಿದ್ದಾಳೆ.

ಇದನ್ನೂ ಓದಿ : Viral Video: ಝನ್ನತ್ ಮಿರ್ಚಿ ಐಸ್ಕ್ರೀಮ್​; ‘ನನ್ನ ಶತ್ರುಗಳಿಗೂ ತಿನ್ನಿಸಲಾರೆ!’ ನೆಟ್ಟಿಗರ ಶಪಥ

ತಾನು ಕುಳಿತ ಜಾಗ ಬಿಟ್ಟು ಆ ಯುವಕನೆಡೆ ಹೋಗಿ ಟೈ ಕಟ್ಟಿಕೊಳ್ಳುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ ಆತ. ಈ ಫೋಟೋ ನೋಡಿದ ನೆಟ್ಟಿಗರ ಮನಸ್ಸು ಮೃದುವಾಗಿದೆ. ಮನುಷ್ಯನನ್ನು ಮನಷ್ಯ ಹುರಿದು ಮುಕ್ಕುವ ಈ ಜಗತ್ತಿನಲ್ಲಿ ತಾಳ್ಮೆಯಿಂದ ಮತ್ತು ಇನ್ನಿತರೇ ಹಂಗುಗಳನ್ನು ತೊರೆದು ಸಹಾಯ ಮಾಡುವ ಇಂಥ ಒಳ್ಳೆಯ ಜನರೂ ಇದ್ದಾರಲ್ಲ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಪ್ರೀತಿ ಹಂಚಲು ಇಂಥ ಕೆಲವರಾದರೂ ಇದ್ದುದಕ್ಕೆ ನಾವೆಲ್ಲ ಆರಾಮಾಗಿ ಬದುಕುತ್ತಿದ್ದೇವೆ ಎಂದು ಹಲವರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ಸ್ವಯಂವಿವಾಹಿತೆ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ

ಇನ್ನು ನಾವುಗಳು ಹೀಗೆ ದಯೆ, ಕರುಣೆ, ಸಹಾಯಕ್ಕೆ ಸಂಬಂಧಿಸಿದ ವಿಡಿಯೋಗೆ ಲೈಕ್​ ಒತ್ತಿ ಮತ್ತೊಂದು ವಿಡಿಯೋಗೆ ಶಿಫ್ಟ್ ಆಗುತ್ತಿದ್ದೇವೋ? ಅಥವಾ ಇವುಗಳ ನಿಜ ಅನುಭವನ್ನು ತಾಕಿಸಿಕೊಳ್ಳುವ ತಾಳ್ಮೆ, ಆಸಕ್ತಿ ಬೆಳೆಸಿಕೊಳ್ಳುತ್ತಿದ್ದೇವೋ? ಏನೇ ಆಗಲಿ ಬಾಗಿದ ಕತ್ತು ತಲೆಯನ್ನು ಎತ್ತುವತ್ತ ಗಮನ ಕೊಡಿ, ಎಲ್ಲ ರೀತಿಯಿಂದಲೂ ಇದು ಅಪಾಯಕಾರಿ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:20 am, Tue, 13 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ