Viral Video: ಝನ್ನತ್ ಮಿರ್ಚಿ ಐಸ್ಕ್ರೀಮ್; ‘ನನ್ನ ಶತ್ರುಗಳಿಗೂ ತಿನ್ನಿಸಲಾರೆ!’ ನೆಟ್ಟಿಗರ ಶಪಥ
Ice Cream : ನೀವೇನಂತೀರಿ? ಎಂದು ಕೇಳಲು ನಮಗಂತೂ ಖಂಡಿತ ಧೈರ್ಯವಿಲ್ಲ. ಆದರೆ ಈ ವಿಡಿಯೋ ನೋಡಿದಮೇಲೆ ನಿಮ್ಮೊಳಗಿನ ಸೋಮವಾರದ ಸೋಮಾರಿಭೂತ ತಂತಾನೇ ಬಿಟ್ಟೋಡುವುದರಲ್ಲಿ ಎರಡು ಮಾತಿಲ್ಲ!
Monday Blues : ಯಾಕಾದರೂ ಈ ಸೋಮವಾರ ಬರತ್ತಪ್ಪಾ ಅಂತ ತೂಕಡಿಸಿಕೊಂಡು ನೀವು ಕೆಲಸ ಮಾಡ್ತಾ ಇರಬಹುದು. ನಿಮ್ಮ ಈ ಮಂಡೇ ಬ್ಲ್ಯೂಸ್ ಓಡಿಸೋದಕ್ಕೆ ಆಪ್ಟಿಕಲ್ ಇಲ್ಲ್ಯೂಷನ್, ಬ್ರೇನ್ ಟೀಸರ್ಗಳು ಸಾಕಾಗ್ತಿಲ್ಲವೇನೋ ಎನ್ನಿಸಿ ಈಗ ಇಂದೋರ್ನಿಂದ ನಿಮಗೆ ಈ ವಿಶೇಷ ಐಸ್ಕ್ರೀಮ್ ತಗೊಂಬಂದಿದೀವಿ. ಬಹುಶಃ ಹೀಗೊಂದು ಐಸ್ಕ್ರೀಮ್ ಜಗತ್ತಿನಲ್ಲಿದೆ ಅಂತಾನೇ ನಿಮಗೆ ಗೊತ್ತಿರಲಿಲ್ಲ ಅಲ್ವಾ? ನೋಡಿ ಇದನ್ನು ನೋಡಿದ ಮೇಲೆ ತಿಂತೀರಾ ಅಥವಾ…
ಇದನ್ನೂ ಓದಿView this post on Instagram
ಇಂದೋರ್ನ (Indore) ಸರಾಫ್ ಬಝಾರ್ನ ಬೀದಿ ಮಾರಾಟಗಾರರೊಬ್ಬರು ಈ ಮೆಣಸಿನಕಾಯಿ ಐಸ್ಕ್ರೀಮ್ನ ಪ್ರಯೋಗ ಮಾಡಿದ್ದಾರೆ. 2.5 ಲಕ್ಷ ನೆಟ್ಟಿಗರು ಇದನ್ನು ನೋಡಿ ದವಡೆಕಚ್ಚಿ ಕೂತಿದಾರೆ. ಈ ವಿಡಿಯೋ ನೋಡುತ್ತಿರುವ ನಿಮಗೆ ಏನೆನ್ನಿಸುತ್ತಿದೆ ಎಂದು ನಾವು ಕೆಳಲಾದೀತೆ? ಈ ಐಸ್ಕ್ರೀಮ್ ಅನ್ನು ವ್ಯಾಪಾರಿಯು ತನ್ನ ಮೆನು ಕಾರ್ಡ್ನಲ್ಲಿ ಸೇರಿಸಿದ್ದಾನೆ. ಇದರ ಬೆಲೆ ಕೇವಲ ರೂ. 100!
ಇದನ್ನೂ ಓದಿ : Viral Video: ”ಅವನು ನಿಮ್ಮ ಮಗನಲ್ಲವೆ?”; ಜೆನ್ನಿಫರ್ ಟೀಚರ್ ಕನ್ನಡದ ಹೊಸ ರೀಲಿನೊಂದಿಗೆ
ವ್ಯೂವ್ಸ್ ಲೈಕ್ಸ್ ಶೇರ್ಗಾಗಿ ಹಪಹಪಿಸುವ ಫುಡ್ಬ್ಲಾಗರ್ಗಳು, ಅವರು ಹೇಳಿದಂತೆ ಕುಣಿಯುವ ಬೀದಿಬದಿ ವ್ಯಾಪಾರಸ್ಥರಿಗೆ ಕೊನೆಯೇ ಇಲ್ಲವೇ? ಎಂಬಂತಾಗಿದೆ. ಒಟ್ಟಾರೆ ನೆಟ್ಟಿಗರು ಇಂಥ ವಿಲಕ್ಷಣ ತಿಂಡಿ ತಿನಿಸುಗಳನ್ನು ನೋಡಿ ನೋಡಿ ರೋಸಿಹೋಗಿದ್ದಾರೆ. ಆದರೂ ನೆಟ್ಟಿಗರ ಕೋಪ ನೆಟ್ಮೂಲಕವೇ ಶಮನವಾಗಬೇಕಲ್ಲ! ಅನೇಕರು ಪ್ರತಿಕ್ರಿಯಿಸಿದ್ಧಾರೆ.
ಇದನ್ನೂ ಓದಿ : Viral Video: ಸ್ವಯಂವಿವಾಹಿತೆ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ
ನನಗೆ ಮಸಾಲೆ ಪದಾರ್ಥಗಳೆಂದರೆ ಬಹಳ ಇಷ್ಟ. ಆದರೆ ಇಂಥ ಮೂರ್ಖತನದ ತಿಂಡಿತಿನಿಸು ಸವಿಯಲು ಎಂದೂ ಧೈರ್ಯ ಮಾಡಲಾರೆ. ಮಿತ್ರಾ, ಇದನ್ನು ನನ್ನ ಶತ್ರುಗಳಿಗೂ ತಿನ್ನಿಸುವುದಿಲ್ಲ! ಇದಕ್ಕೆ ಅರಿಷಿಣ, ಗರಂ ಮಸಾಲಾ, ತಡ್ಕಾ ಇಲ್ಲವಾದ್ದರಿಂದ ಇದರಲ್ಲಿ ಅಂಥಾ ಮಜಾ ಏನಿಲ್ಲ ಬಿಡಿ. ಇದನ್ನು ನೋಡಿ ನನ್ನ ಮತ್ತು ನಿಮ್ಮ ಹೃದಯ ಆತ್ಮಹತ್ಯೆ ಮಾಡಿಕೊಂಡಿಬಹುದು… ಅಂತೆಲ್ಲ ಜನ ಮಾತನಾಡಿಕೊಂಡಿದ್ದಾರೆ.
ನೀವೇನಂತೀರಿ ಎಂದು ಕೇಳಲು ನಮಗಂತೂ ಖಂಡಿತ ಧೈರ್ಯವಿಲ್ಲ. ಆದರೆ ಇದನ್ನು ನೋಡಿದ ನಿಮಗೆ ನಿಮ್ಮೊಳಗಿನ ಸೋಮವಾರದ ಸೋಮಾರಿಭೂತ ನಿಮ್ಮನ್ನು ಬಿಟ್ಟು ಓಡಿಹೋಗಿರುತ್ತದೆ, ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:24 am, Mon, 12 June 23