Adipurush: ಆಫ್ರಿಕಾದಲ್ಲಿ ‘ರಾಮ ಸಿಯಾ ರಾಮ್’, ಕಿಲಿ ನೀಮಾ ಲಿಪ್​ಸಿಂಕ್​ ವೈರಲ್

Adipurush : ವಿಡಿಯೋಗೆ ಬಂದ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ಜಗತ್ತಿನಲ್ಲಿರುವ ಮಿಲಿಯಗಟ್ಟಲೆ ಶ್ರೀರಾಭಕ್ತರೆಲ್ಲ ಇಲ್ಲಿಯೇ ಮೇಳೈಸಿದಂತಿದೆ. ಹನುಮಂತನಿಗೂ ಇಲ್ಲಿ ಪ್ರತಿಕ್ರಿಯಿಸಲು ಜಾಗ ಕೊಟ್ಟರೆ ಸರಿ, ಇಲ್ಲ ಓಂ ರಾವತ್ ಮತ್ತೆ ಅಳುವ ಸಾಧ್ಯತೆ ಇದೆ!

Adipurush: ಆಫ್ರಿಕಾದಲ್ಲಿ 'ರಾಮ ಸಿಯಾ ರಾಮ್', ಕಿಲಿ ನೀಮಾ ಲಿಪ್​ಸಿಂಕ್​ ವೈರಲ್
ಆದಿಪುರುಷ್ ಸಿನೆಮಾದ ಹಾಡಿಗೆ ಲಿಪ್​ ಸಿಂಕ್ ಮಾಡುತ್ತಿರುವ ಕಿಲಿ ಪೌಲ್​ ಮತ್ತು ನೀಮಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 12, 2023 | 1:25 PM

Kili Paul and Neema: ಪ್ರಪಂಚದಲ್ಲಿ ಎಲ್ಲೇ ಆದಿಪುರುಷ್ ಸಿನೆಮಾ ಪ್ರದರ್ಶನ ನಡೆಯಲಿ ಹನುಮಂತನಿಗೆ ಒಂದು ಸೀಟು ಕಾದಿರಿಸಿ ಎಂದು ಪ್ರಚಾರ ಸಂದರ್ಭದಲ್ಲಿ ನಿರ್ದೇಶಕ ಓಮ್ ರಾವತ್ (Om Raut) ಗದ್ಗದಿತರಾಗಿ ಹೇಳಿ ಟ್ರೋಲ್​ ಆದ ಸುದ್ದಿ ಓದಿದಿರಿ ಮತ್ತು ವಿಡಿಯೋ ಕೂಡ ಇತ್ತೀಚೆಗಷ್ಟೇ ನೋಡಿದಿರಿ. ಇದೀಗ ಇದೇ ಸಿನೆಮಾದಲ್ಲಿರುವ ಹಾಡೊಂದಿಗೆ ಆಫ್ರಿಕಾದ ತಾಂಜಾನಿಯಾದ ಸೋಶಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸ್​ರುಗಳಾದ ಕಿಲಿ ಪೌಲ್​ ಮತ್ತು ನೀಮಾ ಪೌಲ್ ಲಿಪ್​ ಸಿಂಕ್​ ಮಾಡಿದ್ದಾರೆ. ಈತನಕ ಈ ವಿಡಿಯೋ ಅನ್ನು ಒಂದೂವರೆ ಮಿಲಿಯನ್​ನಷ್ಟು ಜನರು ಇಷ್ಟಪಟ್ಟಿದ್ದಾರೆ. 8 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಎಂದಿನಂತೆ ಇವರ ಫಾಲೋವರ್ಸ್ ಈ ಅಣ್ಣತಂಗಿಯನ್ನು ಹುರಿದುಂಬಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kili Paul (@kili_paul)

ನೀವಿಬ್ಬರೂ ಪ್ರತಿಯೊಬ್ಬ ಸನಾತನಿಯ ಮನಸೂರೆಗೊಂಡಿದ್ದೀರಿ, ಜೈಶ್ರೀರಾಮ್​. ಭಾರತೀಯರಾದ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಜೈ ಶ್ರೀರಾಮ್​. ತುಂಬಾ ಪ್ರಿಯವಾಗಿದೆ, ನಿಮ್ಮಿಬ್ಬರಿಗೂ ದೇವರ ಆಶೀರ್ವಾದ ಇರಲಿ, ಜೈಶ್ರೀರಾಮ್​, ಇದು ತುಂಬಾ ಉತ್ತಮವಾದ ಪ್ರದರ್ಶನ, ಜೈ ಹನುಮಾನ್… ಹೀಗೆ ರಾಮ, ಹನುಮನ ಭಕ್ತರೆಲ್ಲ ಇಲ್ಲಿ ಒಟ್ಟಾಗಿ ಇವರ ರೀಲ್​ಗೆ ಜೈಕಾರ ಹಾಕುತ್ತಿದ್ದಾರೆ.

ಇದನ್ನೂ ಓದಿ : Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!

ವಿದೇಶಿಯರು ರಾಮಪ್ರಿಯರಾಗುತ್ತಿದ್ದಾರೆ. ಆದರೆ, ನಮ್ಮ ಭಾರತೀಯರು ಯಾವಾಗ ಬದಲಾವಣೆ ಆಗುವುದು ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಗರ್ವದಿಂದ ಹೇಳಿ ನಾವೆಲ್ಲ ಹಿಂದೂಗಳು ಎಂದು ಒಬ್ಬರು ಗರ್ಜಿಸಿದ್ಧಾರೆ. ಈ ವಿಡಿಯೋಗೆ ಬಂದ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ಜಗತ್ತಿನಲ್ಲಿರುವ ಶ್ರೀರಾಮಭಕ್ತರೆಲ್ಲ ಇಲ್ಲಿಯೇ ಮೇಳೈಸಿದಂತಿದೆ. ಹನುಮಂತನಿಗೂ ಪ್ರತಿಕ್ರಿಯಿಸಲು ಜಾಗ ಕೊಟ್ಟರೆ ಸರಿ, ಇಲ್ಲಾ ಓಂ ರಾವತ್​ ಮತ್ತೆ ಅತ್ತರೆ ಕಷ್ಟ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:59 pm, Mon, 12 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ