Optical Illusion: ಚಲಿಸಿದಂತೆ ತೋರುವ ಈ ಚಿತ್ರವನ್ನು ಚಲಿಸದಂತೆ ತಡೆಯಬಹುದೇ?
ನೇರಳೆ ಮತ್ತು ಹಳದಿ ಬಣ್ಣದ ಪಟ್ಟೆಗಳಿಂದ ಕೂಡಿರುವ ಈ ವೈರಲ್ ಆಪ್ಟಿಕಲ್ ಭ್ರಮೆ ಚಿತ್ರವು ಚಲಿಸುತ್ತಿರುವಂತೆ ತೋರುತ್ತದೆ. ಇದನ್ನು ಚಲಿಸದಂತೆ ಸ್ಥಿರವಾಗಿ ನೋಡಲು ಸಾಧ್ಯವಿದೆ. ಅದು ಹೇಗೆ ಎಂಬುದು ಇಲ್ಲಿದೆ.
ಆಪ್ಟಿಕಲ್ ಇಲ್ಯೂಷನ್ ವೈರಲ್ ಪೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಕಂಡುಬರುತ್ತವೆ. ಈ ಚಿತ್ರಗಳು ನಮ್ಮ ಕಣ್ಣುಗಳನ್ನು ಭ್ರಮೆಗೊಳಿಸುವಂತೆ ಮಾಡುತ್ತವೆ. ವಾಸ್ತವದಲ್ಲಿ ಸ್ಥಿರವಾಗಿರುವ ಆ ಚಿತ್ರಗಳು, ನಮಗೆ ಚಲಿಸಿದಂತೆ ಭಾಸವಾಗುತ್ತದೆ. ಇವುಗಳನ್ನು ಚಲನೆಯ ಭ್ರಮೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಸ್ಥಿರ ಚಿತ್ರಗಳು ಚಲಿಸುತ್ತಿರುವಂತೆ ಕಂಡುಬರುತ್ತದೆ. ನಮ್ಮ ಮೆದುಳು ಬೆಳಕಿನಲ್ಲಿನ ಬದಲಾವಣೆಯನ್ನು ಚಲನೆಯಂತೆ ಓದುವುದರಿಂದ, ಚಿತ್ರದಲ್ಲಿನ ರೇಖೆಗಳು ಚಲಿಸುವಂತೆ ತೋರುತ್ತವೆ. ಇದೇ ರೀತಿಯ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ನೇರಳೆ ಮತ್ತು ಹಳದಿ ಬಣ್ಣದ ಪಟ್ಟೆಗಳಿರುವ ಚಿತ್ರವು ಮೂರು ಆಯಾಮಗಳಲ್ಲಿ ಚಲಿಸಿದಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಅದು ಸ್ಥಿರ ಮತ್ತು ಸಮತಟ್ಟಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಆಪ್ಟಿಕಲ್ ಇಲ್ಯುಷನ್ ಚಿತ್ರವನ್ನು ನೋಡಿ, ಅದರಲ್ಲಿ ನೇರಳೆ ಮತ್ತು ಹಳದಿ ಬಣ್ಣದ ಎಲ್ಲಾ ಪಟ್ಟಿಗಳು ಚಲಿಸಿದಂತೆ ಕಾಣುತ್ತದೆ. ಬಹಳ ಹೊತ್ತು ಅದನ್ನೇ ನೋಡಿದಾಗ ತಲೆತಿರುಗಿದಂತಾಗುತ್ತದೆ. ಆದರೆ ಈ ಪಟ್ಟೆಗಳು ಚಾಲನೆಯಾಗದಂತೆ ತಡೆಯಬಹುದು. ಇದಕ್ಕೊಂದು ಉಪಾಯವಿದೆ.
Optical illusion that looks like it’s moving (but there’s a trick to make it stop) by u/EndersGame_Reviewer in opticalillusions
ಇದನ್ನೂ ಓದಿ:Optical Illusion : ಟರ್ಕಿ ಕೋಳಿಗಳ ನಡುವೆ ಕುಂಬಳಕಾಯಿ ಅಡಗಿದೆ, ಹುಡುಕುವಿರಾ?
ಚಲನೆಯಲ್ಲಿರುವಂತೆ ತೋರುವ ಚಿತ್ರವನ್ನು ನೀವು ನೋಡಬಹುದು. ಅದಾಗ್ಯೂ ಈ ಚಿತ್ರದಲ್ಲಿ ಚಲನೆಯನ್ನು ನಿಲ್ಲಿಸಲು ಒಂದು ಟ್ರಿಕ್ ಇದೆ. ನೀವು ಅದನ್ನು ಮಾಡಲು ಸಾಧ್ಯವಿದೆ. ಅದು ಹೇಗೆ ಎಂದು ಭಾವಿಸುತ್ತೀರಾ. ಅದು ಹೇಗೆಂದರೆ ಚಿತ್ರದ ಉದ್ದಕ್ಕೂ ನಿಮ್ಮ ಕಣ್ಣುಗಳನ್ನು ಸರಿಸಿ ಮತ್ತು ನಂತರ ಚಿತ್ರದ ಕೇಂದ್ರ ಬಿಂದುವಿನ ಮೇಲೆ ದೃಷ್ಟಿ ಕೇಂದ್ರೀಕರಿಸಿ. ಆಗ ಚಿತ್ರವು ಚಲಿಸದೆ ಸ್ಥಿರವಾಗಿರುವಂತೆ ಕಾಣುತ್ತದೆ.
ರೆಡ್ಡಿಡ್ ಆಪ್ ನಲ್ಲಿ ಎಂಡರ್ ಗೇಮ್ ರಿವ್ಯೂವರ್ (@EndersGame_Reviewer) ಎನ್ನುವ ಖಾತೆಯಲ್ಲಿ ಈ ಪೋಸ್ಟ್ ನ್ನು ಹಂಚಿಕೊಳ್ಳಲಾಗಿದ್ದು, ಇದಕ್ಕೆ ಹಲವು ಲೈಕ್ಸ್ ಹಾಗೂ ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಈ ಚಿತ್ರವನ್ನು ನೋಡಿ ತಲೆತಿರುಗಿದಂತಾಯಿತು’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಚಲಿಸುವ ಚಿತ್ರ ಸ್ಥಿರವಾಗಿ ಕಾಣಲು, ನೇರವಾಗಿ ಮಧ್ಯದಲ್ಲಿ ನೋಡಿ’ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದನ್ನು ನೋಡಿ ನನ್ನ ಕಣ್ಣುಗಳು ನೋಯುತ್ತಿವೆ’ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Mon, 12 June 23