Viral Video: ಹಿಂದಿ ಹಾಡಿಗೆ ಸೀರೆಯುಟ್ಟು ಹೆಜ್ಜೆ ಹಾಕಿದ ಸುಂದರಿಯರು, ಇದು ಅದ್ಭುತ ಎಂದ ನೆಟ್ಟಿಗರು

ಸಂಪ್ರದಾಯಿಕವಾಗಿ ಸೀರೆಯುಟ್ಟು ಮನ್ವಾ ಲಾಗೇ ಹಾಡಿಗೆ ಯುವತಿಯರಿಬ್ಬರು ಶಾಸ್ತ್ರೀಯ ಶೈಲಿಯ ನೃತ್ಯ ಮಾಡಿದ್ದು, ಇವರಿಬ್ಬರ ನೃತ್ಯ ಪ್ರದರ್ಶನ ನೋಡುಗರನ್ನು ಆಕರ್ಷಿಸಿದೆ.

Viral Video: ಹಿಂದಿ ಹಾಡಿಗೆ ಸೀರೆಯುಟ್ಟು ಹೆಜ್ಜೆ ಹಾಕಿದ ಸುಂದರಿಯರು, ಇದು ಅದ್ಭುತ ಎಂದ ನೆಟ್ಟಿಗರು
ವೈರಲ್​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 12, 2023 | 3:21 PM

ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಡಾನ್ಸ್, ನಟನೆ, ಸಂಗೀತ ಇತ್ಯಾದಿ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನರನ್ನು ಮನರಂಜಿಸುತ್ತಿರುತ್ತಾರೆ. ಸಾಮಾನ್ಯವಾಗಿ ಇಂತಹ ವೀಡಿಯೋ ಕ್ಲಿಪ್​​​ಗಳು ಜನರ ಮನ ಸೆಳೆಯುತ್ತವೆ ಮತ್ತು ವೈರಲ್ ಆಗುತ್ತವೆ. ಅದರಲ್ಲೂ ಹೆಣ್ಣು ಮಕ್ಕಳು ಲಕ್ಷಣವಾಗಿ ಸೀರೆಯುಟ್ಟು ನೃತ್ಯ ಮಾಡುವ ವೀಡಿಯೋಗಳಿದ್ದರಂತೂ ಜನರು ಅದಕ್ಕೆ ತುಸು ಹೆಚ್ಚೇ ಮನಸೋಲುತ್ತಾರೆ. ಅಂತಹದ್ದೇ ನೃತ್ಯದ ವೀಡಿಯೋವೊಂದು ಇನ್ಟಾಗ್ರಾಮ್​​ನಲ್ಲಿ ವೈರಲ್ ಆಗಿದ್ದು, ಲಕ್ಷಣವಾಗಿ ಸೀರೆಯುಟ್ಟು ಯುವತಿಯರಿಬ್ಬರು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಹ್ಯಾಪಿ ನ್ಯೂ ಇಯರ್ ಸಿನಿಮಾದ ‘ಮನ್ವ ಲಾಗೆ’ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದು, ಎಂತಹ ಆಕರ್ಷಕ ನೃತ್ಯ ಪ್ರದರ್ಶನ ಎಂದು ನೆಟ್ಟಿಗರು ಯುವತಿಯರ ಡಾನ್ಸ್​​​ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ವೈರಲ್ ವಿಡಿಯೋವನ್ನು ನೃತ್ಯ ಸಂಯೋಜಕಿ ರಿದ್ಧಿ ಗಜ್ಜರ್ (@riddhi.gajjar06) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ರಿದ್ಧಿ ಗಜ್ಜರ್ ಹಾಗೂ ನಟಿ ಅಲಿಶಾ ಪ್ರಜಾಪತಿ ಸೀರೆಯನ್ನುಟ್ಟು ಹ್ಯಾಪಿ ನ್ಯೂ ಇಯರ್ ಚಲನಚಿತ್ರದ ಮನ್ವಾ ಲಾಗೆ ಹಾಡಿನ ಸಣ್ಣ ತುಣುಕಿಗೆ ಶಾಸ್ತ್ರೀಯ ಶೈಲಿಯ ನೃತ್ಯ ಮಾಡುವುದನ್ನು ಕಾಣಬಹುದು. ಇವರಿಬ್ಬರ ಮೋಡಿ ಮಾಡುವ ನೃತ್ಯ ಪ್ರದರ್ಶನವು ಕಣ್ಮನ ಸೆಳೆಯುವಂತಿದೆ.

ಇದನ್ನೂ ಓದಿ: Viral Video: ಭತ್ತ ನಾಟಿ ಮಾಡಿದ ಮಹಿಳೆಯರು, ಇದು ಮಹಿಳಾ ಸಬಲೀಕರಣ ಎಂದ ಸಚಿವ

ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಮೇ 12 ರಂದು ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 1.6 ಮಿಲಿಯಲ್ ವೀಕ್ಷಣೆಗಳನ್ನು ಹಾಗೂ 170 ಸಾವಿರ ಲೈಕ್ಸ್​​​ಗಳನ್ನು ಗಳಿಸಿದೆ. ಜೊತೆಗೆ ಹಲವಾರು ಕಮೆಂಟ್ಸ್​​ಗಳು ಕೂಡ ಬಂದಿದೆ. ಒಬ್ಬ ಬಳಕೆದಾರರು ನಿಮ್ಮ ಸೀರೆ ತುಂಬಾ ಸುಂದರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಾನು ನಿಮ್ಮೊಂದಿಗೆ ಹೀಗೆ ನೃತ್ಯ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ನಿಮ್ಮ ನೃತ್ಯವು ನನ್ನ ಕಣ್ಣುಗಳನ್ನು ಮತ್ತೆ ಮತ್ತೆ ಆಕರ್ಷಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಅದ್ಭುತ ನೃತ್ಯ ಪ್ರದರ್ಶನ ಎನ್ನುತ್ತಾ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ