Viral Video: ಭತ್ತ ನಾಟಿ ಮಾಡಿದ ಮಹಿಳೆಯರು, ಇದು ಮಹಿಳಾ ಸಬಲೀಕರಣ ಎಂದ ಸಚಿವ
ಗದ್ದೆಯಲ್ಲಿ ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಾ ಭತ್ತ ನಾಟಿ ಮಾಡುತ್ತಿರುವ ದೃಶ್ಯವನ್ನು ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಳ್ಳಿಯ ಹಾಗೂ ಕೃಷಿ ಭೂಮಿಯ ಸೊಬಗನ್ನು ಕಂಡು ಅನೇಕರು ಖುಷಿಪಟ್ಟಿದ್ದಾರೆ.
ಕೃಷಿಯು ಭಾರತದ ಮೂಲ ಕಸುಬು. ಅನೇಕರು ಇಂದಿಗೂ ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂದಿನ ಕೃಷಿ ಯಂತ್ರಗಳ ಅಭಿವೃದ್ಧಿಯಿಂದಾಗಿ ಕೃಷಿ ಭೂಮಿಯಲ್ಲಿ ಕೃಷಿ ಕಾರ್ಮಿಕರಿಗಿಂತ ಹೆಚ್ಚಾಗಿ ಯಂತ್ರಗಳ ಮೂಲಕವೇ ಕೃಷಿ ಕಾರ್ಯಗಳು ನಡೆಯುತ್ತವೆ. ಕಾರ್ಮಿಕರು ಕೃಷಿ ಭೂಮಿಯಲ್ಲಿ ಕಾಣಸಿಗುವುದೇ ಅಪರೂಪ. ಅದರಲ್ಲೂ ಹಿಂದಿನ ಕಾಲದಲ್ಲಿ ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಾ, ಭತ್ತ ನಾಟಿ ಮಾಡುತ್ತಿದ್ದಂತಹ ಸುಂದರ ದೃಶ್ಯಗಳು ಪ್ರಸ್ತುತ ಕಾಣಸಿಗುತ್ತಿಲ್ಲ. ಜೊತೆಗೆ ಈ ಬಗೆಯ ವೀಡಿಯೋಗಳು ಕೂಡಾ ಕಾಣ ಸಿಗುವುದು ತೀರಾ ವಿರಳವಾಗಿಬಿಟ್ಟಿದೆ. ಈ ನಡುವೆ ಇಲ್ಲೊಂದು ಮಹಿಳಾ ಕೃಷಿಕರ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಾಗಾಲ್ಯಾಂಡ್ ನ ಫೆಕ್ ಜಿಲ್ಲೆಯ ಝಝಾಝೋ ಜನಾಂಗದ ಮಹಿಳೆಯರು ಅವರ ಏಕತೆ ಮತ್ತು ಮಹಿಳಾ ಸಬಲೀಕರಣದ ಮೂಲಕ ಭತ್ತದ ನಾಟಿ ಮಾಡುತ್ತಿರುವುದನ್ನು ಕಾಣಬಹುದು.
ಈ ವೈರಲ್ ವೀಡಿಯೋವನ್ನು ಮೂಲತಃ ನಾಗಾಲ್ಯಾಂಡ್ನ ಪ್ರವಾಸೋದ್ಯಮ ಇಲಾಖೆ ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೇ ಪೋಸ್ಟ್ನ್ನು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮರುಹಂಚಿಕೊಂಡಿದ್ದಾರೆ. ಹಾಗೂ ಈ ವೀಡಿಯೋ ಮಹಿಳಾ ಸಬಲೀಕರಣವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಹಾಗೂ ನಾಗಾಲ್ಯಾಂಡ್ ಪ್ರವಾಸೋದ್ಯಮ ಇಲಾಖೆಯು ಮೂಲ ಪೋಸ್ಟ್ನಲ್ಲಿ ‘ನಾಗಾಲ್ಯಾಂಡ್ನ ಫೆಕ್ ಜಿಲ್ಲೆಯ ಹೊಲಗಳಲ್ಲಿ ಭತ್ತದ ಸಸಿಗಳನ್ನು ನೆಡುತ್ತಿರುವ ಝಝಾಝೋ ಜನಾಂಗದ ಮಹಿಳೆಯರು. ಅವರ ಏಕಾತೆ ಮತ್ತು ಸ್ಥಿತಿಸ್ಥಾಪಕತ್ವವು ಮಹಿಳಾ ಸಬಲೀಕರಣದ ಸಾರವನ್ನು ಸಂಕೇತಿಸುತ್ತದೆ. ಉಜ್ವಲ ಭವಿಷ್ಯಕ್ಕಾಗಿ ಬದಲಾವಣೆಯ ಬೀಜವನ್ನು ಬಿತ್ತುತ್ತಿರುವುದು’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.
Paving the Path to Progress!
The Ruzhazho women folks are a sight to behold as they plant paddy saplings in the fields of Phek district, Nagaland.
Their unity and resilience symbolize the essence of women empowerment, sowing the seeds of change for a brighter future.… pic.twitter.com/00TF8Ao6ad
— nagalandtourism (@tourismdeptgon) June 9, 2023
ಇದನ್ನೂ ಓದಿ:Viral Video: ಈಜಿಪ್ಟ್ ಸಮುದ್ರದಲ್ಲಿ ದೈತ್ಯ ಶಾರ್ಕ್ ದಾಳಿಗೆ ಬಲಿಯಾದ ವ್ಯಕ್ತಿ
ವೀಡಿಯೋದಲ್ಲಿ ನಾಗಾಲ್ಯಾಂಡ್ನ ಭತ್ತದ ಗದ್ದೆಯಲ್ಲಿ ಒಂದಷ್ಟು ಮಹಿಳೆಯರ ಗುಂಪು ಜನಪದ ಗೀತೆಗಳನ್ನು ಹಾಡುತ್ತ, ಖುಷಿ ಖುಷಿಯಾಗಿ ಭತ್ತದ ಸಸಿಗಳನ್ನು ನೆಡುತ್ತಿರುವ ಅದ್ಭುತ ದೃಶ್ಯಾವಳಿಯನ್ನು ಕಾಣಬಹುದು. ಆ ಗದ್ದೆಯಲ್ಲಿ ಕೇವಲ ಮಹಿಳೆಯರು ಮಾತ್ರ ಭತ್ತ ನಾಟಿ ಮಾಡುತ್ತಿದ್ದರು, ಈ ದೃಶ್ಯದಲ್ಲಿ ನಿಜವಾಗಿಯೂ ಮಹಿಳಾ ಸಬಲೀಕರಣವನ್ನು ನೋಡಬಹುದು.
ಜೂನ್ 9 ರಂದು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ 33.2 ಸಾವಿರ ವೀಕ್ಷಣೆಗಳನ್ನು ಹಾಗೂ 1.6 ಸಾವಿರ ಲೈಕ್ಸ್ಗಳನ್ನು ಪಡದುಕೊಂಡಿದೆ. ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ‘ನಾಗಾಲ್ಯಾಂಡ್ ಪ್ರವಾಸೋದ್ಯಮ ಇಲಾಖೆಯಿಂದ ಅತ್ಯುತ್ತಮ ವೀಡಿಯೋ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಭತ್ತವನ್ನು ನೆಡಲು ಮಹಿಳೆಯರು ಶ್ರಮಿಸುತ್ತಿರುವುದು’ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ