AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 120ನೇ ವಯಸ್ಸಿಗೆ ಕಾಲಿಟ್ಟ ವಿಶ್ವದ ಅತ್ಯಂತ ದೊಡ್ಡ ಮೊಸಳೆ ಕ್ಯಾಸಿಯಸ್​

Happy Birthday : ಬರೋಬರೀ 18 ಅಡಿ ಉದ್ದ ಇರುವ ಈ ಮೊಸಳೆ ಈ ವಯಸ್ಸಿನಲ್ಲಿಯೂ ಚೈತನ್ಯಶೀಲವಾಗಿದೆ. ಮಾತನಾಡಿಸಿದರೆ ಹತ್ತಿರ ಬರಲು ನೋಡುತ್ತದೆ. ಆಗ ಇದರ ಹೊಳೆಯುವ ಕಣ್ಣುಗಳನ್ನು ನೋಡುವುದೇ ಅಪೂರ್ವ ಅನುಭವ.

Viral: 120ನೇ ವಯಸ್ಸಿಗೆ ಕಾಲಿಟ್ಟ ವಿಶ್ವದ ಅತ್ಯಂತ ದೊಡ್ಡ ಮೊಸಳೆ ಕ್ಯಾಸಿಯಸ್​
TV9 Web
| Edited By: |

Updated on:Jun 10, 2023 | 4:23 PM

Share

Crocodile: ಕ್ಯಾಸಿಯಸ್ (Cassius) ಎಂಬ ಹೆಸರಿನ ಈ ದೈತ್ಯ ಮೊಸಳೆ ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನ ಗ್ರೀನ್​ ಐಲ್ಯಾಂಡ್​ನಲ್ಲಿರುವ ಮರೀನ್​ಲ್ಯಾಂಡ್ ಕ್ರೊಕೊಡೈಲ್​ ಪಾರ್ಕ್​ನಲ್ಲಿ ವಾಸವಾಗಿದೆ (Marineland Crocodile Park on Green Island in Australia Queensland). 18 ಅಡಿ ಉದ್ದದ ಈ ದೈತ್ಯ ಎರಡು ದಿನಗಳ ಹಿಂದೆ 120ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಇದಕ್ಕೆ ಚಿಕನ್​ ಮತ್ತು ಟ್ಯೂನಾ ಫಿಷ್​ ಖಾದ್ಯಗಳನ್ನು ಕೊಟ್ಟು ಖುಷಿಪಡಿಸಲಾಗಿದೆ. ಈ ಮೊಸಳೆಯು 1987ರಿಂದಲೂ ಇದೇ ಉದ್ಯಾನವದಲ್ಲಿ ವಾಸಿಸುತ್ತಿದ್ದು ಗಿನ್ನೀಸ್​ ವರ್ಲ್ಡ್​ ರಿಕಾರ್ಡ್​ನಲ್ಲಿಯೂ ಇದರ ಹೆಸರು ದಾಖಲಾಗಿದೆ.

ಕ್ಯಾಸಿಯಸ್​ ವಯಸ್ಸಿನ ಹಂಗಿಲ್ಲದೇ ಚೈತನ್ಯಶೀಲವಾಗಿದೆ. ಉದ್ಯಾನದಲ್ಲಿ ಅತ್ಯುತ್ಸಾಹದಿಂದ ಇತರೇ ಮೊಸಳೆಗಳೊಂದಿಗೆ ಬೆರೆಯುತ್ತದೆ ಮತ್ತು ಎಲ್ಲರಿಗಿಂತ ಆಕರ್ಷಕವಾಗಿ ಕಾಣುತ್ತದೆ. ‘ಸಾಮಾನ್ಯವಾಗಿ ವಯಸ್ಸಾದಂತೆ ಮೊಸಳೆಗಳು ವಿಧೇಯ ಮತ್ತು ನಿರಾಸಕ್ತಿಯಿಂದ ವರ್ತಿಸುತ್ತವೆ. ಆದರೆ ಕ್ಯಾಸಿಯಸ್​ ಈಗಲೂ ಉತ್ಸುಕನಾಗಿರುತ್ತದೆ. ಯಾರಾದರೂ ಅದರೆಡೆ ಲಕ್ಷ್ಯಕೊಟ್ಟರೆ ಉತ್ಸಾಹದಿಂದ ಹತ್ತಿರ ಬರಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ಅವನ ಹೊಳೆಯುವ ಕಣ್ಣುಗಳನ್ನು ನೋಡುವುದೇ ಛಂದ’ ಎಂದು 1987ರಲ್ಲಿ ಈ ದೈತ್ಯನನ್ನು ಗ್ರೀನ್ ಲ್ಯಾಂಡ್​ಗೆ ಕರೆತಂದ ಸಂಶೋಧಕ ಟೂಡಿ ಸ್ಕಾಟ್​ ಹೇಳಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಸ್ವಯಂವಿವಾಹಿತೆ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ

1984ರಲ್ಲಿ ಆಸ್ಟ್ರೇಲಿಯಾದ ಉತ್ತರ ಭಾಗದ ಫಿನ್ನೀಸ್​ ನದಿಯಲ್ಲಿ ಕ್ಯಾಸಿಯಸ್​ ಅನ್ನು ಬಂಧಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೊಸಳೇ ಸಂಶೋಧಕ ಗ್ರೇಮ್ ವೆಬ್​, ‘ಈ ಮೊಸಳೆಯನ್ನು ಹಿಡಿಯುವುದು ಸುಲಭವಾಗಿರಲಿಲ್ಲ. ಈಗಲೂ ಆ ದೃಶ್ಯಗಳು ಕಣ್ಣಮುಂದಿವೆ. ಆಗ ಬರೋಬರೀ 16 ಅಡಿ, 10 ಇಂಚುಗಳಷ್ಟು ಉದ್ದವಿತ್ತು’ ಎಂದು ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ವರ್ಷ ಹೀಗೆ ಚೈತನ್ಯಯುತವಾಗಿ ಬಾಳು ಕ್ಯಾಸಿಯಸ್​, ಹುಟ್ಟುಹಬ್ಬದ ಶುಭಾಶಯಗಳು!

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:21 pm, Sat, 10 June 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ