AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನು ಮದುವೆಯಾಗುವ ಹುಡುಗನಿಗೆ ದೊಡ್ಡ ಹೊಟ್ಟೆ ಇರಲೇ ಬೇಕು ಎಂದ ಯುವತಿ

ಬಳಕುವ ಬಳ್ಳಿಯಂತಿರುವ ಈಕೆಯ ಹೆಸರು ಹಸೀನಾ ಮದೀನಾ ಮಮದಲೀವಾ. ಕಜಕಿಸ್ತಾನ್‌ ಮೂಲದವಳಾದ ಮದೀನಾ ಸಂಗಾತಿಯ ಹುಡುಕಾಟದಲ್ಲಿದ್ದಾಳೆ.

ತಾನು ಮದುವೆಯಾಗುವ ಹುಡುಗನಿಗೆ ದೊಡ್ಡ ಹೊಟ್ಟೆ ಇರಲೇ ಬೇಕು ಎಂದ ಯುವತಿ
Madina MamadalievaImage Credit source: instagram/Madina Mamadalieva
ಅಕ್ಷತಾ ವರ್ಕಾಡಿ
|

Updated on:Jun 11, 2023 | 11:20 AM

Share

ಸಾಮಾನ್ಯವಾಗಿ ಸಿಕ್ಸ್​​ಪ್ಯಾಕ್​​​ ​​ ಫಿಟ್ ಆ್ಯಂಡ್​​​​​​​​​ ಹ್ಯಾಂಡ್​ಸಮ್​​​ ಹುಡುಗ ತನ್ನ ಪತಿಯಾಗಬೇಕು ಎಂದು ಸಾಕಷ್ಟು ಹುಡುಗಿಯರ ಕನಸಾಗಿರುತ್ತದೆ. ಆದರೆ ಇಲ್ಲೊಂದು ಸುಂದರ ಯುವತಿ ನಾನು ಮದುವೆಯಾಗುವುದಾದರೆ ದೊಡ್ಡ ಹೊಟ್ಟೆಯ ಹುಡುಗನನ್ನೇ ಎಂದು ಪಟ್ಟು ಹಿಡಿದು ಕುಳಿತಿದ್ದಾಳೆ. ಬಳಕುವ ಬಳ್ಳಿಯಂತಿರುವ ಈಕೆಯ ಹೆಸರು ಹಸೀನಾ ಮದೀನಾ ಮಮದಲೀವಾ. ಕಜಕಿಸ್ತಾನ್‌ ಮೂಲದವಳಾದ ಮದೀನಾ ಮಮದಲೀವಾ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ಸೋಶಿಯಲ್​ ಮೀಡಿಯಾಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾಳೆ.

‘ಡೈಲಿ ಸ್ಟಾರ್’ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಜಕಿಸ್ತಾನ್‌ನ ಮದೀನಾ ಮಮದಲೀವಾ ಸೋಶಿಯಲ್​ ಮೀಡಿಯಾದಿಂದಲೇ ಪ್ರತಿ ತಿಂಗಳು ಸುಮಾರು 40 ರಿಂದ 50 ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಾರೆ. ಆದ್ದರಿಂದ ತಾನು ಬಯಸುವ ಸಂಗಾತಿಯೂ ಕೂಡ ಶ್ರೀಮಂತನಾಗಿರಬೇಕು ಜೊತೆಗೆ ಕಾಳಜಿಯುಳ್ಳವನಾಗಿರಬೇಕು, ಆದರೆ ಅವನು ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರಬಾರದು ಎಂದು ಹೇಳಿಕೊಂಡಿದ್ದಾರೆ. ಅವಳಿಗೆ ಬೇಕಾಗಿರುವುದು ಅವಳ ಅದ್ದೂರಿ ಜೀವನಶೈಲಿಯನ್ನು ನಿಭಾಯಿಸಬಲ್ಲ ಗಂಡ. ಪತಿ ದಪ್ಪಗಾದರೂ ಪರವಾಗಿಲ್ಲ ಎಂದು ಮದೀನಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 120ನೇ ವಯಸ್ಸಿಗೆ ಕಾಲಿಟ್ಟ ವಿಶ್ವದ ಅತ್ಯಂತ ದೊಡ್ಡ ಮೊಸಳೆ ಕ್ಯಾಸಿಯಸ್

ಸಂಗಾತಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರಬಾರದು:

ಮದೀನಾ ಮಮದಲೀವಾ ಸೋಶಿಯಲ್​ ಮೀಡಿಯಾದ ಮುಖಾಂತರವೇ ಸ್ಟಾರ್​​ ಆದ ಬೆಡಗಿ. ಆದರೆ ತನ್ನ ಸಂಗಾತಿಯಾಗಲು ಬಯಸುವಾತ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರಬಾರದು. ಯಾಕೆಂದರೆ ತನ್ನ ಗಂಡನ ಕುರಿತಾದ ಮಾಹಿತಿಯು ಅವಳು ಬಯಸಿದಷ್ಟು ಕಾಲ ರಹಸ್ಯವಾಗಿ ಉಳಿಯಬೇಕು. ಇದು ಅವನ ಹೊರತು ಜಗತ್ತಿನಲ್ಲಿ ಯಾರಿಗೂ ತಿಳಿಯಬಾರದು ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:44 am, Sun, 11 June 23

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್